newsfirstkannada.com

ಲೋಕಸಭಾ ಚುನಾವಣೆ; ಶಿವಕುಮಾರ್ ಜತೆ ಬಿಜೆಪಿ ಶಾಸಕರ ರಹಸ್ಯ ಸಭೆ; ಆಗಿದ್ದೇನು?

Share :

Published March 22, 2024 at 6:13am

  ಸದಾಶಿವನಗರದ ಡಿಕೆಶಿ ಮನೆಯಲ್ಲಿ ರೆಬೆಲ್ಸ್​ ಸ್ಟ್ರಾಟಜಿ!

  ನೀರಿನ ಸಮಸ್ಯೆ ಬಗ್ಗೆ ಚರ್ಚೆ ಆಗಿದೆ ಎಂದ ಎಸ್​​ಟಿಎಸ್

  ತಮ್ಮ ಕ್ಷೇತ್ರಕ್ಕೆ ಶೋಭಾ ಎಂಟ್ರಿಗೆ ಎಸ್​ಟಿಎಸ್ ಸಿಡಿಮಿಡಿ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬೇಸತ್ತು ಕಮಲ ಮುಡಿದಿದ್ದ ಈ ನಾಯಕರಿಗೆ ಅದ್ಯಾಕೋ ಬಿಜೆಪಿ ಬೇಡವಾದಂತಿದೆ. ರಾಜ್ಯಸಭೆಯಲ್ಲಿ ಅಡ್ಡಮತದಾನ ಮಾಡಿದ್ದ ಎಸ್​​ಟಿಎಸ್​, ಮತ ಹಾಕದೇ ಗೈರಾಗಿದ್ದ ಶಿವರಾಂ ಹೆಬ್ಬಾರ್​​ ಕೈ ಹಿಡಿಯುವ ಸುಳಿವು ನೀಡಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಡಿಸಿಎಂ ಡಿಕೆಶಿ ನಿವಾಸದಲ್ಲಿ ಕಾಣಿಸಿಕೊಂಡಿರೋದು ಕುತೂಹಲವನ್ನ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಡಿಕೆಶಿ ಮನೆಯಲ್ಲಿ ಎಸ್​ಟಿಎಸ್-ಹೆಬ್ಬಾರ್ ‘ರೆಬೆಲ್’ ರಾಜಕೀಯ!

ರಾಜ್ಯಸಭೆಯಲ್ಲಿ ಅಡ್ಡಮತದಾನ ಮಾಡಿದ್ದ ಬಿಜೆಪಿಯ ರೆಬೆಲ್ ಶಾಸಕರಾದ ಎಸ್​.ಟಿ.ಸೋಮಶೇಖರ್ ಹಾಗೂ ಮತ ಹಾಕದೇ ದೂರ ಉಳಿದಿದ್ದ ಶಾಸಕ ಶಿವರಾಮ್ ಹೆಬ್ಬಾರ್​ ಇವತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಪ್ರತ್ಯಕ್ಷರಾಗಿದ್ದರು. ಸದಾಶಿವನಗರದಲ್ಲಿರುವ ಡಿಕೆಶಿ ಮನೆಗೆ ಒಟ್ಟಿಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ಇಬ್ಬರೂ ಶಾಸಕರು ಕಾಂಗ್ರೆಸ್​ ಸೇರ್ಪಡೆಗೆ ತುದಿಗಾಲಲ್ಲಿ ನಿಂತಿದ್ದು ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಸೇರಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಡಿಸಿಎಂ ಡಿಕೆಶಿ ಜೊತೆ ಲೋಕಸಭೆ ಚುನಾವಣೆಯಲ್ಲಿಗೆ ಯಾರಿಗೆ ಬೆಂಬಲ ಕೊಡೋದು ಎಂಬುದರ ಬಗ್ಗೆ ಎಸ್​.ಟಿ.ಸೋಮಶೇಖರ್ ಹಾಗೂ ಹೆಬ್ಬಾರ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ನಾವು ಯಾರ ಪರ ಚುನಾವಣೆಯಲ್ಲಿ ಪ್ರಚಾರ ಮಾಡಬೇಕು. ಕಾಂಗ್ರೆಸ್ ಟಿಕೆಟ್ ಘೋಷಣೆವರೆಗೂ ನಾವು ಕಾಯಬೇಕಾ ಅಥವಾ ಯಾರ ಪರವೂ ಪ್ರಚಾರ ಮಾಡದೇ ತಟಸ್ಥರಾಗಿ ಉಳಿಯಬೇಕಾ. ಲೋಕಸಭೆ ಚುನಾವಣೆ ಬಳಿಕ ಮುಂದಿನ ರಾಜಕೀಯ ನಡೆ ಏನು ಹಾಗೂ ಈಗಲೇ ಶಾಸಕ ಸ್ಥಾನ ರಾಜೀನಾಮೆ ನೀಡ್ಬೇಕಾ, ಬೇಡ್ವಾ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಒಂದು ವೇಳೆ ಲೋಕಸಭಾ ಚುನಾವಣೆಗೂ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ಬೇಕಾ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಕುಡಿಯುವ ನೀರಿನ ಕುರಿತು ಚರ್ಚೆ ನಡೆಸಿದ್ದೀವಿ ಎಂದ ಎಸ್​​ಟಿಎಸ್

ಇನ್ನು ಡಿಸಿಎಂ ಭೇಟಿ ಬಳಿಕ ಮಾತನಾಡಿದ ಎಸ್​.ಟಿ.ಸೋಮಶೇಖರ್ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದೀವಿ ಎಂದ ಎಸ್​​ಟಿಎಸ್​ ವಿಪ್ ಉಲ್ಲಂಘಿಸಿದ್ದಕ್ಕೆ ನೋಟಿಸ್​ನಲ್ಲಿ ಉತ್ತರ ಕೊಟ್ಟಿದ್ದೀವಿ ಎಂದರು. ಇನ್ನು ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರಿನಿಂದ ಬೆಂಗಳೂರು ಕೇಂದ್ರಕ್ಕೆ ವಲಸೆ ಬಂದಿದ್ದಾರೆ ಆರೋಪಕ್ಕೆ ನಾನು ವಲಸಿಗಳಲ್ಲ ಅಂತ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದರು. ಇದೇ ಮಾತಿಗೆ ಟಾಂಗ್ ಕೊಟ್ಟ ಎಸ್​.ಟಿ.ಸೋಮಶೇಖರ್ ಬೆಂಗಳೂರು ಕೇಂದ್ರಕ್ಕೆ ಶೋಭ ಕರಂದ್ಲಾಜೆ ಎಂಪಿ ಆಗೋಕೆ ಬಂದಿದ್ದಾರಾ, ಇಲ್ಲಾ ಬೆಂಕಿ ಹಚ್ಚೋಕೆ ಬಂದಿದ್ದಾರಾ ತಿವಿದಿದ್ದಾರೆ.

ನನ್ನ ಕ್ಷೇತ್ರದ ಬಗ್ಗೆ ಚರ್ಚೆ ಮಾಡಲು ಬಂದಿದ್ದೆ ಎಂದ ಹೆಬ್ಬಾರ್

ನಾನು ನನ್ನ ಕ್ಷೇತ್ರದ ಯೋಜನೆಗಳ ಬಗ್ಗೆ ಚರ್ಚೆ ಮಾಡಲು ಬಂದಿದ್ದೆ. ರಾಜ್ಯಸಭೆ ಚುನಾವಣೆಗೆ ಗೈರಾಗಿದ್ದಕ್ಕೆ ನೋಟಿಸ್ ನೀಡಿದ್ದರು. ನೋಟಿಸ್​ಗೆ ಉತ್ತರ ಕೊಟ್ಟಿದ್ದೀವಿ ಅಂದ್ರು. ನಮ್ಮ ಜಿಲ್ಲೆಯಲ್ಲಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಬಳಿಕ ಯಾವ ಪಕ್ಷಕ್ಕೆ ಬೆಂಬಲ ಅನ್ನೋದನ್ನು ಯೋಚನೆ ಮಾಡ್ತೀವಿ ಎಂದಿದ್ದಾರೆ. ಒಟ್ಟಾರೆ ರಾಜ್ಯಸಭೆಯಲ್ಲಿ ವಿಪ್ ಉಲ್ಲಂಘಿಸಿರುವ ಎಸ್​.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ವಿರುದ್ದ ಬಿಜೆಪಿ ಹೈಕಮಾಂಡ್ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಲೋಕಸಭಾ ಚುನಾವಣೆ ಬಳಿಕ ಇವರಿಬ್ಬರ ರಾಜಕೀಯ ಭವಿಷ್ಯ ಏನಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ; ಶಿವಕುಮಾರ್ ಜತೆ ಬಿಜೆಪಿ ಶಾಸಕರ ರಹಸ್ಯ ಸಭೆ; ಆಗಿದ್ದೇನು?

https://newsfirstlive.com/wp-content/uploads/2024/03/stt-and-dk.jpg

Load More