newsfirstkannada.com

ವಾರ್ಡ್..​ ವಾರ್ಡ್​ಗೆ ಸ್ಕೂಟಿಯಲ್ಲಿ ಹೋಗಿ ಚಿಕಿತ್ಸೆ ಕೊಡ್ತಾರೆ ಈ ನರ್ಸ್​; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!!

Share :

Published May 8, 2024 at 2:21pm

  ಕಾರಿಡಾರ್​ನಲ್ಲಿ ರೋಗಿಗಳಿದ್ದರು ಬೈಕ್​ನಲ್ಲೇ ಹೋಗ್ತಾರೆ ನರ್ಸ್

  ನರ್ಸ್​ ವರ್ತನೆಯಿಂದ ಭಾರೀ ಆಕ್ರೋಶ ವ್ಯಕ್ತಪಡಿಸ್ತಿರೋ ಸಾರ್ವಜನಿಕರು

  ಮಾಹಿತಿಯನ್ನ ಪಡೆದು ತನಿಖೆಗೆ ಮುಂದಾದ ಆರೋಗ್ಯ ಇಲಾಖೆ

ಲಕ್ನೋ: ಅಬ್ಬಾ.. ಈ ಸ್ಟೋರಿ ನೋಡಿದ್ರೆ ಬಾಯಿ ಮೇಲೆ ಬೆರಳು ಇಟ್ಟುಕೊಂಡು ಇಂಥಾ ಜನಗಳು ಇರ್ತಾರಾ ಅಂದುಕೊಳ್ತೀರಾ. ಸರ್ಕಾರಿ ಆಸ್ಪತ್ರೆಯ ಒಂದು ವಾರ್ಡ್​ನಿಂದ ಮತ್ತೊಂದು ವಾರ್ಡ್​ನಲ್ಲಿನ ರೋಗಿಗಳ ಬಳಿ ಸ್ಕೂಟಿಯಲ್ಲಿ ಹೋಗಿ ನರ್ಸ್ ಚಿಕಿತ್ಸೆ ನೀಡುತ್ತಿದ್ದಾರೆ.​ ಈ ಘಟನೆಯು ಉತ್ತರ ಪ್ರದೇಶದ ಪಿಲಿಭಿತ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಸದ್ಯ ಈ ಸಂಬಂಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಪಿಲಿಭಿತ್‌ನ ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸ್‌ವೊಬ್ಬರು ಕಪ್ಪು ಕನ್ನಡಕ ಹಾಕಿಕೊಂಡು ಆಸ್ಪತ್ರೆಯೊಳಗೆ ಸ್ಕೂಟರ್‌ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಇವರು ಆಸ್ಪತ್ರೆಯ ಒಂದು ವಾರ್ಡ್​ನಿಂದ ಮತ್ತೊಂದು ವಾರ್ಡ್​ಗೆ ಬೈಕ್​ ಮೂಲಕ ಹೋಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಕಾರಿಡಾರ್​ನಲ್ಲಿ ರೋಗಿ ಒಬ್ಬರು ಕುಳಿತುಕೊಂಡಿದ್ದು, ಇನ್ನು ಹಲವು ಜನರು ಓಡಾಡುತ್ತಿದ್ದಾರೆ. ಇದರ ಮಧ್ಯೆಯೇ ನರ್ಸ್​ ಬೈಕ್​ ಅನ್ನು ನುಗ್ಗಿಸಿಕೊಂಡು ಮತ್ತೊಂದು ವಾರ್ಡ್​ಗೆ ಹೋಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್​ನಲ್ಲಿ ಮೊಬೈಲ್ ಇಟ್ಟು ವಿಡಿಯೋ.. ಅಪ್ರಾಪ್ತ ಅರೆಸ್ಟ್​

ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸ್ ಸ್ಕೂಟಿಯಲ್ಲಿ ಆಸ್ಪತ್ರೆಯಲ್ಲಿ ಓಡಾಡುತ್ತಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಈ ಮಾಹಿತಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದಿದ್ದು ತನಿಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ನರ್ಸ್ ಅವರ ವರ್ತನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಬಾಲಿವುಡ್‌ನ ತ್ರಿ ಈಡಿಯಟ್ಸ್ ಸಿನಿಮಾದಲ್ಲಿ ರೋಗಿಯ ಜೀವ ಉಳಿಸೋಕೆ ಸ್ಕೂಟಿಯಲ್ಲಿ ಬರೋದನ್ನ ನಾವೆಲ್ಲಾ ನೋಡಿದ್ವಿ. ಆದ್ರೆ, ಈ ನರ್ಸ್ ವಾರ್ಡ್‌ನಿಂದ ವಾರ್ಡ್‌ಗೆ ಹೋಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಇರೋದು ಆಶ್ಚರ್ಯಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರ್ಡ್..​ ವಾರ್ಡ್​ಗೆ ಸ್ಕೂಟಿಯಲ್ಲಿ ಹೋಗಿ ಚಿಕಿತ್ಸೆ ಕೊಡ್ತಾರೆ ಈ ನರ್ಸ್​; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!!

https://newsfirstlive.com/wp-content/uploads/2024/05/UP_NURSE.jpg

Load More