ಪುಷ್ಪ 2 ರಿಲೀಸ್ ಸಂಭ್ರಮದಲ್ಲಿ ಅನಾಹುತ; ಉಸಿರು ನಿಲ್ಲಿಸಿದ ಮಹಿಳೆ, ಆಕೆಯ ಮಗ ಗಂಭೀರ

author-image
Ganesh
Updated On
ಹಿಂದಿ ಮಾತಾಡುವ ಪ್ರದೇಶಗಳಲ್ಲಿ ಅಲ್ಲು ಅರ್ಜುನ್ ಅಬ್ಬರ.. ಪುಷ್ಪ-2 ಎಷ್ಟು ಕೋಟಿ ಹಣ ಗಳಿಸಿದೆ ಗೊತ್ತಾ?
Advertisment
  • ಇಂದು ವಿಶ್ವದಾದ್ಯಂತ ಪುಷ್ಪ ಚಿತ್ರ ರಿಲೀಸ್ ಆಗಿದೆ
  • ಕಾಲ್ತುಳಿತದಿಂದ ಮತ್ತಿಬ್ಬರು ಗಂಭೀರ, ಆಸ್ಪತ್ರೆಯಲ್ಲಿ ಚಿಕಿತ್ಸೆ
  • ಹೈದರಾಬಾದ್​ನಲ್ಲಿ ನಿನ್ನೆ ರಾತ್ರಿ ದಾರುಣ ಘಟನೆ ನಡೆದಿದೆ

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ 2 ಸಿನಿಮಾ ಈಗಾಗಲೇ ಬಿಡುಗಡೆಯಾಗಿದೆ. ಅಭಿಮಾನಿಗಳು ಪುಷ್ಪರಾಜ್‌ನ ರೌದ್ರಾವತಾರಕ್ಕೆ ಶಿಳ್ಳೆ, ಚಪ್ಪಾಳೆ ಹಾಕಿದ್ದು, ಥಿಯೇಟರ್‌ಗಳಲ್ಲಿ ನೂಕು ನುಗ್ಗಲು ಉಂಟಾಗಿದೆ.

ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ರಾತ್ರಿ 9 ಗಂಟೆಗೆ ಪ್ರೀಮಿಯರ್ ಶೋ ಆರಂಭವಾಗಿದೆ. ಅಭಿಮಾನಿಗಳ ಸೆಲಬ್ರೇಷನ್ ಮುಗಿಲು ಮುಟ್ಟಿತ್ತು. ಅಲ್ಲು ಅರ್ಜುನ್ ನೋಡಲು ಅಭಿಮಾನಿಗಳು ಜಮಾಯಿಸಿದ್ದು, ಜನ ಜಾತ್ರೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ನೂಕು-ನುಗ್ಗಲು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು. ಆಗ ಓಡುವ ಭರದಲ್ಲಿ ಕಾಲ್ತುಳಿತ ಸಂಭವಿಸಿದೆ.

ಓರ್ವ ಮಹಿಳೆ ಸ್ಥಳದಲ್ಲೇ ಉಸಿರು ನಿಲ್ಲಿಸಿದ್ದಾರೆ. ಇವರ 9 ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದೆ. ದುರ್ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಕ್ಕಪಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪುಷ್ಪಾ-2 ವಿಶ್ವದಾದ್ಯಂತ ರಿಲೀಸ್.. ಫಸ್ಟ್​ ಡೇ, ಫಸ್ಟ್​ ಶೋ ನೋಡಿ ಅಭಿಮಾನಿಗಳು ಥ್ರಿಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment