/newsfirstlive-kannada/media/post_attachments/wp-content/uploads/2025/06/DK_SHIVAKUMAR.jpg)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ಸಮಾರಂಭದ ವೇಳೆ ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿ 11 ಜನರು ಜೀವ ಕಳೆದುಕೊಂಡಿದ್ದಾರೆ. ಸದ್ಯ ಈ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಮಾಧ್ಯಮಗಳ ಮುಂದೆ ಅಳುತ್ತಲೇ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಮಕ್ಕಳು, ಚಿಕ್ಕಮಕ್ಕಳು ಉಸಿರಾಡಲು ಆಗದೇ ಜೀವ ಬಿಟ್ಟಿದ್ದಾರೆ. 14, 15 ವರ್ಷದ ಮಕ್ಕಳು ಘಟನೆಯಲ್ಲಿ ಪ್ರಾಣ ಕಳೆದುಕೊಂಡಿರೋದು ನಾನು ನೋಡಿದೆ. 10 ಜನರನ್ನು ನೋಡಿದ್ದೇನೆ. ಈ ರೀತಿ ಆಗಬಾರದಿತ್ತು. ಅವರ ಕುಟುಂಬಗಳಿಗೆ ಈ ಘಟನೆಯನ್ನು ಅರಗಿಸಿಕೊಳ್ಳಲು ಆಗಲ್ಲ ಎಂದು ದುಃಖಿಸಿದರು.
ಇದನ್ನೂ ಓದಿ: ಉಸಿರಾಡೋಕೆ ಆಗಲಿಲ್ಲ.. ಚಿನ್ನಸ್ವಾಮಿ ಸ್ಟೇಡಿಯಂ ಗೇಟ್​ ಬಳಿ ತಮಗಾದ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ
ಪೊಲೀಸ್ ಕಮಿಷನರ್ ಅವರು ಕೇವಲ 10 ನಿಮಿಷದಲ್ಲಿ ಕ್ಲೋಸ್ ಮಾಡಿಸೋಕೆ ಹೇಳಿದರು. ತಕ್ಷಣ ನಾನು ಈ ಬಗ್ಗೆ ಜಾಗೃತನಾದೆ. ಘಟನೆ ನಡೆದಾಗ ಒಬ್ಬರೋ, ಇಬ್ಬರೋ ಸಾವನ್ನಪ್ಪಿದ್ದಾರೆ. 10 ನಿಮಿಷದಲ್ಲಿ ಮುಗಿಸಲು ಏರ್ಪಾಟು ಮಾಡಿ ಎಂದು ಕಮಿಷನರ್ ಹೇಳಿದ್ದರು. ಕೆಎಸ್​ಸಿಎ ಮ್ಯಾನೇಜ್​ಮೆಂಟ್​​ ಅವರು ಹೋಗೋಕೆ ಆಗುತ್ತಿರಲಿಲ್ಲ. ಅವರನ್ನು ನಾನೇ ಕಾರಲ್ಲಿ ಕೂರಿಸಿಕೊಂಡೇ, ಕೆಎಸ್​ಸಿಎಗೆ ಹೋಗೋ ಪ್ಲಾನ್ ಇರಲಿಲ್ಲ ಎಂದು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ