ಹರಿದ್ವಾರದ ಮಾನಸ ದೇವಿ ದೇಗುಲದಲ್ಲಿ ಘೋರ ದುರಂತ; 6 ಭಕ್ತರು ಬಲಿ

author-image
Veena Gangani
Updated On
ಹರಿದ್ವಾರದ ಮಾನಸ ದೇವಿ ದೇಗುಲದಲ್ಲಿ ಘೋರ ದುರಂತ; 6 ಭಕ್ತರು ಬಲಿ
Advertisment
  • ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ದುರಂತ
  • ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸ್​ ಅಧಿಕಾರಿಗಳು
  • 6 ಮಂದಿ ಬಲಿ, ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

ಉತ್ತರಾಖಂಡ್: ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ದುರಂತವೊಂದು ಸಂಭವಿಸಿದೆ. ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ ಉಂಟಾಗಿ ಆರು ಭಕ್ತರು ಜೀವ ಬಿಟ್ಟಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​ ತನಿಖೆ ಚುರುಕು; ರಹಸ್ಯ ಹೇಳ್ತೀನಿ ಎಂದಿದ್ದ ದೂರುದಾರನ ವಿಚಾರಣೆ ಹೇಗಿತ್ತು..?

publive-image

ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೂ ಮೂರ್ನಾಲ್ಕು ಆಂಬುಲೆನ್ಸ್ ಆಗಮಿಸಿ ಗಂಭೀರವಾಗಿ ಗಾಯಗೊಂಡವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿವೆ.

publive-image

ಪ್ರಾಥಮಿಕ ಪ್ರಕಾರ, ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ವಿದ್ಯುತ್ ಆಘಾತದಿಂದ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಭಕ್ತರಲ್ಲಿ ಏಕಾಏಕಿ ಗೊಂದಲ ಉಂಟಾಗಿ ಓಡಲು ಶುರು ಮಾಡಿದ್ದರಿಂದ ಈ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಈ ಘಟನೆಯಲ್ಲಿ ಏನೆಲ್ಲಾ ಆಯ್ತು ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


">July 27, 2025

ಇನ್ನೂ ಈ ಬಗ್ಗೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಎಕ್ಸ್​​ ಖಾತೆಯಲ್ಲಿ, ಹರಿದ್ವಾರದ ಮಾನಸಾ ದೇವಿ ದೇವಾಲಯದಲ್ಲಿ ಕಾಲ್ತುಳಿತದ ಸುದ್ದಿ ತೀವ್ರ ದುಃಖಕರವಾಗಿದೆ. ಎಸ್‌ಡಿಆರ್‌ಎಫ್, ಸ್ಥಳೀಯ ಪೊಲೀಸರು ಮತ್ತು ಇತರ ರಕ್ಷಣಾ ತಂಡಗಳು ಸ್ಥಳದಲ್ಲಿದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಪೋಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment