Advertisment

ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ, 9 ಮಂದಿ ಗಂಭೀರ.. ಹಬ್ಬಕ್ಕೆ ಊರಿಗೆ ಹೋಗುವವರೇ ಹುಷಾರು..

author-image
Ganesh
Updated On
ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ, 9 ಮಂದಿ ಗಂಭೀರ.. ಹಬ್ಬಕ್ಕೆ ಊರಿಗೆ ಹೋಗುವವರೇ ಹುಷಾರು..
Advertisment
  • ಗಾಯಗೊಂಡ ಪ್ರಯಾಣಿಕರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ
  • ಇಂದು ಮುಂಜಾನೆ 5 ಗಂಟೆಗೆ ಸಂಭವಿಸಿರುವ ಕಾಲ್ತುಳಿತ
  • ರೈಲ್ವೇ ನಿಲ್ದಾಣ, ಬಸ್ ನಿಲ್ದಾಣದಲ್ಲಿ ಹುಷಾರಾಗಿ ಹೋಗಿ

ಮಹಾರಾಷ್ಟ್ರದ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದೆ. ಘಟನೆ ವೇಳೆ 9 ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisment

ಬಾಂದ್ರಾ ರೈಲು ನಿಲ್ದಾಣದ ಟರ್ಮಿನಲ್-1ರಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.. ಗೋರಖ್​ಪುರಕ್ಕೆ ತೆರಳುತ್ತಿದ್ದ ರೈಲು ಹತ್ತುವಾಗ ಈ ಭೀಕರ ದುರಂತ ನಡೆದಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಶಬ್ಬೀರ್ ಅಬ್ದುಲ್ ರೆಹಮಾನ್ (40), ಪರಮೇಶ್ವರ್​ ಸುಖ್ದರ್ ಗುಪ್ತಾ (28), ರವೀಂದ್ರ ಹರಿಹರ್ ಚುಮಾ (30), ರಾಮ್​​ಸೇವಕ್ ರವೀಂದ್ರ ಪ್ರಸಾದ್ (29), ಸಂಜಯ್ ತಿಲಕರಾಮ್ (27), ದಿವ್ಯಾಂಶು ಯೋಗೇಂದ್ರ ಯಾದವ್ (18), ಮಹ್ಮದ್ ಶರೀಫ್ (25), ಇಂದ್ರಜಿತ್ ಶಹನಿ (19), ನೂರ್ ಮೊಹ್ಮದ್ (18) ಗಾಯಗೊಂಡವರು.

ಇದನ್ನೂ ಓದಿ: iPhone-16 ಬ್ಯಾನ್..! Apple ಸಂಸ್ಥೆಗೆ ಬಿಗ್ ಶಾಕ್ ಕೊಟ್ಟ ಸರ್ಕಾರ

ಮುಂದಿನ ವಾರ ದೀಪಾವಳಿ ಹಬ್ಬ ಇದೆ. ಹೀಗಾಗಿ ಬಹುತೇಕ ವಲಸೆ ಕಾರ್ಮಿಕರು ಊರಿನ ಕಡೆ ಮುಖ ಮಾಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಕರು ಆಗಿಮಿಸಿದ ಪರಿಣಾಮ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿದ ಸಂಭವಿಸಿದೆ ಎಂದು ಬಿಎಂಸಿ ಹೇಳಿದೆ. ಉದ್ಯೋಗ ಅರಸಿ ನಗರಗಳಿಗೆ ಬಂದ ಅನೇಕರು ಹಬ್ಬಕ್ಕಾಗಿ ಊರಿಗೆ ಹೋಗುತ್ತಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇರಲಿದೆ. ಹೀಗಾಗಿ ನೀವು ಏನಾದರೂ ಊರಿಗೆ ಹೋಗುವ ಯೋಜನೆಯಲ್ಲಿದ್ದರೆ  ಎಚ್ಚರಿಕೆಯಿಂದ ಪ್ರಯಾಣಿಸಿ.

Advertisment

ಇದನ್ನೂ ಓದಿ: ವಿದ್ಯಾರ್ಥಿವೇತನ ಘೋಷಿಸಿದ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಕಾಲೇಜ್: ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment