/newsfirstlive-kannada/media/post_attachments/wp-content/uploads/2025/01/TIRUPATI.jpg)
ತಿರುಪತಿಯ ಏಳು ಬೆಟ್ಟಗಳ ಸಾಲಿನಲ್ಲಿ ಗೋವಿಂದನ ನಾಮದ್ದೇ ಝೇಂಕಾರ. ಲಕ್ಷಾಂತರ ಭಕ್ತರ ಆಗಮನದಿಂದ ತಿರುಮಲದಲ್ಲಿ ನಿತ್ಯಜಾತ್ರೆಯ ಸಂಭ್ರಮ. ನಿನ್ನೆಯೂ ಜನಜಾತ್ರೆ.. ಶುಕ್ರವಾರ ವೈಕುಂಠ ಏಕಾದಶಿ.. ಹೀಗಾಗಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಭಕ್ತರಲ್ಲಿ ಕಾಲ್ತುಳಿತ ಸಂಭವಿಸಿದೆ.
ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಕಾಲ್ತುಳಿತ
ನಿನ್ನೆ ಭಜ ಗೋವಿಂದನ ಸ್ಮರಣೆಗೆ ದೇಶದ ದಶದಿಕ್ಕಿನಿಂದಲೂ ಲಕ್ಷಾಂತರ ಭಕ್ತರ ದಂಡೇ ಹರಿದು ಬಂದಿತ್ತು.. ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನದ ಟಿಕೆಟ್ ಪಡೆಯುವ ವೇಳೆ ಹೆಚ್ಚಾದ ಭಕ್ತಸಾಗರದಿಂದ ಕಾಲ್ತುಳಿತ ಉಂಟಾಗಿ 6 ಭಕ್ತರು ಜೀವ ಕಳೆದುಕೊಂಡಿದ್ದಾರೆ.
ಜನವರಿ 10.. ಅಂದ್ರೆ ನಾಳೆ ವೈಕುಂಠ ಏಕಾದಶಿ ನಡೆಯಲಿದೆ.. ಈ ವೇಳೆ ವಿಶ್ವ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ತೆರೆಯಲಿದೆ.. ಈ ಕಾರಣಕ್ಕೆ ತಿಮ್ಮಪ್ಪನ ಆಲಯದಲ್ಲಿ ಸಡಗರ ಮನೆ ಮಾಡಿತ್ತು.. ಆದ್ರೆ ಏಕಾದಶಿಗೂ ಮುನ್ನವೇ ತಿರುಪತಿಯಲ್ಲಿ ಘೋರ ದುರಂತವೊಂದು ಸಂಭವಿಸಿ ಹೋಗಿದೆ.. ವೈಕುಂಠ ದ್ವಾರದ ದರ್ಶನ ಟಿಕೆಟ್ ಪಡೆಯಲು ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಕೌಂಟರ್ ಬಳಿ ಕಾಲ್ತುಳಿತ ಸಂಭವಿಸಿದೆ..
ಬೆಳಗ್ಗೆಯಿಂದ ಟಿಕೆಟ್ ಕೇಂದ್ರಗಳಲ್ಲಿ ಸಾಲುಗಟ್ಟಿದ್ದ ಭಕ್ತರು!
ವೈಕುಂಠ ದ್ವಾರದ ದರ್ಶನ ಟಿಕೆಟ್ ಪಡೆಯಲು ಬೆಳಗ್ಗೆಯಿಂದಲೇ ತಿರುಪತಿಯ ವಿವಿಧ ಟಿಕೆಟ್ ಕೇಂದ್ರಗಳಲ್ಲಿ ಸಾವಿರಾರು ಭಕ್ತರು ಸಾಲುಗಟ್ಟಿದ್ದರು.. ಈ ವೇಳೆ, ಪದ್ಮಾವತಿಪುರಂ ಟೋಕನ್ ವಿತರಣಾ ಕೇಂದ್ರದ ಬಳಿ ನೂಕುನುಗ್ಗಲು ಉಂಟಾಗಿದೆ.. ಭಕ್ತರಿಗೆ ಸರತಿ ಸಾಲಿನಲ್ಲಿ ಪ್ರವೇಶಿಸಲು ಅವಕಾಶ ನೀಡುತ್ತಿದ್ದಂತೆ 5 ಸಾವಿರಕ್ಕೂ ಹೆಚ್ಚು ಭಕ್ತರು ಏಕಾಏಕಿ ಪ್ರವಾಹದಂತೆ ನುಗ್ಗಿ ಬಂದಿದ್ದಾರೆ..
ಇದನ್ನೂ ಓದಿ:ಡಿನ್ನರ್ ಪಾಲಿಟಿಕ್ಸ್ ಬೆನ್ನಲ್ಲೇ 2 ಪ್ರತಿಷ್ಠಿತ ದೇವಾಲಯಗಳಿಗೆ ಇಂದು ಡಿ.ಕೆ ಶಿವಕುಮಾರ್ ಭೇಟಿ
ಹಿಂದಿನಿಂದ ರಭಸದ ಒತ್ತಡ ಉಂಟಾಗಿ ಕಾಲ್ತುಳಿತ ಸಂಭವಿಸಿದೆ.. ತಮಿಳುನಾಡಿನ ಸೇಲಂ ಮಲ್ಲಿಕಾ ಎಂಬ ಮಹಿಳೆ ಸೇರಿ ಮೂವರು ಮಹಿಳೆಯರು, ಇನ್ನುಳಿದ ನಾಲ್ವರು ಪುರುಷ ಭಕ್ತರು ಜೀವ ಬಿಟ್ಟಿದ್ದಾರೆ.. 40ಕ್ಕೂ ಹೆಚ್ಚು ಮಂದಿ ಭಕ್ತರಿಗೆ ಗಾಯಗಳಾಗಿದ್ದು, ಇಬ್ಬರು ಸ್ಥಿತಿ ಗಂಭೀರ ಅಂತ ಗೊತ್ತಾಗಿದೆ.. ಸದ್ಯ ಗಾಯಾಳುಗಳನ್ನು ರುಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ..
ಅಸ್ವಸ್ಥರ ಏರ್‌ಲಿಫ್ಟ್‌ಗೆ ಸಿಎಂ ಚಂದ್ರಬಾಬು ಸೂಚನೆ
ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಚಂದ್ರಬಾಬು ನಾಯ್ಡು, ಟಿಟಿಡಿ ಮತ್ತು ಜಿಲ್ಲಾಧಿಕಾರಿ ಸೇರಿ ಪ್ರಮುಖರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕ್ಷಣಕ್ಷಣದ ಮಾಹಿತಿ ಪಡೆದ್ರು.. ಸಾವಿನ ಸಂಖ್ಯೆ ಹೆಚ್ಚಾಗುವುದನ್ನ ತಡೆಯಲು ಅಸ್ವಸ್ಥಗೊಂಡವರನ್ನ ಸೂಕ್ತ ಚಿಕಿತ್ಸೆ ಜೊತೆಗೆ ಏರ್‌ಲಿಫ್ಟ್ ಮಾಡುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟೆಲಿಕಾನ್ಫರೆನ್ಸ್ ನಡೆಸಿ ಕಾಲ್ತುಳಿತ ಘಟನೆಯ ಬಗ್ಗೆ ಮಾಹಿತಿ ಪಡೆದ್ರು. ಈ ರೀತಿಯ ಘಟನೆ ದುರಾದೃಷ್ಟಕರ ಎಂದ್ರು.. ಒಂದು ಸೆಂಟರ್ನಲ್ಲಿ ಮಾತ್ರ ಡಿಎಸ್‌ಪಿ ಗೇಟ್ ತೆರೆದಿದ್ದು, ತಕ್ಷಣ ಜನದಟ್ಟಣೆ ಹೆಚ್ಚಾದ ಕಾರಣ ಈ ಘಟನೆ ನಡೆದಿದೆ.. ಘಟನೆಯಲ್ಲಿ ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಇಂದು ಸಿಎಂ ಚಂದ್ರಬಾಬು ನಾಯ್ಡು ಭೇಟಿ ನೀಡಲಿದ್ದಾರೆ.
ಒಟ್ಟಾರೆ, ತಿರುಪತಿಯಲ್ಲಿ ನಡೆದ ಈ ಘಟನೆ ಮಾತ್ರ ಭಕ್ತರನ್ನ ಆಘಾತಕ್ಕೆ ತಳ್ಳಿದೆ.. ಭಕ್ತರ ಸುರಕ್ಷತೆ ಪ್ರಶ್ನೆಗಳಿಗೆ ಟಿಟಿಡಿಯೇ ಉತ್ತರಿಸಬೇಕಿದೆ.
ಇದನ್ನೂ ಓದಿ:ಅವಿವಾಹಿತರಿಗೆ ಸಿಹಿ ಸುದ್ದಿ.. ನಿಂತು ಹೋಗಿದ್ದ ಕೆಲಸ ಪೂರ್ಣವಾಗಲಿದೆ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ