‘ಧೈರ್ಯ ಇದ್ರೆ ಮುಂದೆ ಬಂದು ಹೇಳಲಿ’.. ಅಭಿಷೇಕ್ ಬಚ್ಚನ್ ಸವಾಲು ಹಾಕಿದ್ದು ಯಾರಿಗೆ?

author-image
Veena Gangani
Updated On
‘ಧೈರ್ಯ ಇದ್ರೆ ಮುಂದೆ ಬಂದು ಹೇಳಲಿ’.. ಅಭಿಷೇಕ್ ಬಚ್ಚನ್ ಸವಾಲು ಹಾಕಿದ್ದು ಯಾರಿಗೆ?
Advertisment
  • ವದಂತಿ, ಟ್ರೋಲ್​ಗಳ ಬಗ್ಗೆ ಅಭಿಷೇಕ್ ಬಚ್ಚನ್ ಹೇಳಿದ್ದೇನು?
  • ಇದೇ ಮೊದಲ ಬಾರಿಗೆ ಮೌನ ಮುರಿದ ಅಭಿಷೇಕ್ ಬಚ್ಚನ್
  • ಇಷ್ಟು ದಿನ ಟ್ರೋಲ್​ ಮಾಡುವವರ ಕಾಮೆಂಟ್ಸ್​ಗೆ ಏಕೆ ಉತ್ತರಿಸಿಲ್ಲ?

ನಮ್ಮ ದೇಶದಲ್ಲಿ ಸೆಲೆಬ್ರಿಟಿ ಕುಟುಂಬಗಳ ಬಗ್ಗೆಯೇ ಹೆಚ್ಚು ವದಂತಿಗಳು ಹರಿದಾಡುತ್ತಾ ಇರುತ್ತವೆ. ಅಷ್ಟೇ ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೂ ಗುರಿಯಾಗುತ್ತಾರೆ. ಸೆಲೆಬ್ರಿಟಿಗಳು ಸುಮ್ಮನಿದ್ದರೂ ಕಷ್ಟ. ಮಾತನಾಡಿದರೂ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಹಾಗೂ ಪತ್ನಿ ಐಶ್ಚರ್ಯಾ ರೈ ಇಬ್ಬರೂ ಚೆನ್ನಾಗಿಲ್ಲ. ಇಬ್ಬರೂ ದೂರ ದೂರ ಆಗಿದ್ದಾರೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳೇ ಹಬ್ಬಿವೆ. ಈಗಂತೂ ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳದ್ದೇ ಕಾರುಬಾರು.

publive-image

ಈ ವದಂತಿಗಳ ಬಗ್ಗೆ ಅಭಿಷೇಕ್ ಬಚ್ಚನ್ ಆಗಲಿ, ಐಶ್ಚರ್ಯಾ ರೈ ಆಗಲಿ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಇಬ್ಬರು ತಮ್ಮ ಪಾಡಿಗೆ ತಾವು ಇದ್ದಾರೆ. ಫಿಲಂ ಫೆಸ್ಟಿವಲ್​ಗೆ ಐಶ್ಚರ್ಯಾ ತನ್ನ ಮಗಳ ಜೊತೆ ಹೋದರಂತೂ ವದಂತಿಗಳು ಮತ್ತಷ್ಟು ಜೋರಾಗುತ್ತಾವೆ. ಅಭಿಷೇಕ್ ಏಕೆ ಜೊತೆಗೆ ಬಂದಿಲ್ಲ. ಇಬ್ಬರು ಬೇರೆಯಾಗಿರುವುದಕ್ಕೆ ಅಭಿಷೇಕ್ ಬಂದಿಲ್ಲ ಎಂದೆಲ್ಲಾ ಮಾತನಾಡಲು, ಕಾಮೆಂಟ್ ಮಾಡಲು ಜನರು ಶುರು ಮಾಡಿಬಿಡುತ್ತಾರೆ. ಈಗ ಇದೇ ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಈ ವದಂತಿಗಳ ಕಾರುಬಾರು, ಸೋಷಿಯಲ್ ಮೀಡಿಯಾ ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

publive-image

ಸೋಷಿಯಲ್ ಮೀಡಿಯಾದಲ್ಲಿ ಹರಡುವ ತಪ್ಪು ಮಾಹಿತಿಯಿಂದ ತಮ್ಮ ಕುಟುಂಬದ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಅಭಿಷೇಕ್ ಬಚ್ಚನ್ ಮಾತನಾಡಿದ್ದಾರೆ. ಜೊತೆಗೆ ತಾವೇಕೆ ಈ ವದಂತಿ, ತಪ್ಪು ಮಾಹಿತಿಗಳ ಬಗ್ಗೆ ಪ್ರತಿಕ್ರಿಯಿಸದೇ, ಮೌನವಾಗಿದ್ದೇನೆ ಎಂದು ಕೂಡ ಅಭಿಷೇಕ್ ಬಚ್ಚನ್ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಡುವ ನೆಗೆಟಿವಿಟಿ ಬಗ್ಗೆ ಪ್ರತಿಕ್ರಿಯಿಸುವುದರಿಂದ ಯಾವುದೇ ಉದ್ದೇಶ ಈಡೇರಲ್ಲ. ಪ್ರತಿಕ್ರಿಯಿಸುವುದರಿಂದ ಮತ್ತಷ್ಟು ತಪ್ಪು ಮಾಹಿತಿ ಹರಡಲ್ಲ ಪುಷ್ಟಿ ತುಂಬಿದಂತಾಗುತ್ತೆ. ಆಧಾರದವಿಲ್ಲದ ಅಂಶಗಳಿಗೆ ಹೆಚ್ಚು ಒತ್ತು ನೀಡುವ ಬದಲು ನಮ್ಮ ಕೆಲಸ, ನಮ್ಮ ವೈಯಕ್ತಿಕ ಜೀವನದ ಬಗ್ಗೆ ಒತ್ತು ನೀಡುವುದು ಮುಖ್ಯ ಎಂದು ನಟ ಅಭಿಷೇಕ್ ಬಚ್ಚನ್ ಹೇಳಿದ್ದಾರೆ.

publive-image

ಈ ಮೊದಲು ನನ್ನ ಬಗ್ಗೆ ಹೇಳುತ್ತಿದ್ದ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುತ್ತಿರಲಿಲ್ಲ. ಆದರೇ, ಇವತ್ತು ನಾನು ಕುಟುಂಬವನ್ನು ಹೊಂದಿದ್ದೇನೆ. ಇದರಿಂದ ಬೇಸರವಾಗುತ್ತೆ. ಒಂದು ವೇಳೆ ನಾನು ಯಾವುದಾದರೂ ಬಗ್ಗೆ ಸ್ಪಷ್ಟನೆ ನೀಡಿದರೂ, ಜನರು ಅದನ್ನು ತಿರುಗಿಸಿಬಿಡುತ್ತಾರೆ. ಏಕೆಂದರೆ, ನೆಗೆಟಿವಿಟಿ ಸುದ್ದಿ ಮಾರಾಟವಾಗುತ್ತೆ. ನೀವು ನಾನು ಅಲ್ಲ. ನೀವು ನನ್ನ ಜೀವನ ನಡೆಸುತ್ತಿಲ್ಲ. ನೀವು ಜನರಿಗೆ ಉತ್ತರದಾಯಿಗಳಲ್ಲ, ನಾನು ಉತ್ತರದಾಯಿ. ಇಂತಹ ನಕಾರಾತ್ಮಕತೆಯನ್ನು ಹೊರಹಾಕುವ ಜನರು ತಮ್ಮ ಆತ್ಮಸಾಕ್ಷಿಯೊಂದಿಗೆ ಬದುಕಬೇಕು. ಅವರು ತಮ್ಮ ಆತ್ಮಸಾಕ್ಷಿಯೊಂದಿಗೆ ವ್ಯವಹರಿಸಬೇಕು ಮತ್ತು ದೇವರಿಗೆ ಉತ್ತರಿಸಬೇಕು. ನೋಡಿ, ಇದು ನಾನು ಮಾತ್ರವಲ್ಲ. ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಇದರಲ್ಲಿ ಕುಟುಂಬಗಳಿವೆ. ಟ್ರೋಲಿಂಗ್‌ನ ಈ ಹೊಸ ಪ್ರವೃತ್ತಿಗೆ ನಾನು ನಿಮಗೆ ಒಂದು ಉತ್ತಮ ಉದಾಹರಣೆಯನ್ನು ನೀಡುತ್ತೇನೆ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದರು.

publive-image

ಅಭಿಷೇಕ್ ಬಚ್ಚನ್, ಒಮ್ಮೆ ಒಂದು ಪೋಸ್ಟ್ ಹಂಚಿಕೊಂಡ ಘಟನೆಯನ್ನು ನೆನಪಿಸಿಕೊಂಡರು. ಆಗ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರು ಅವರ ಬಗ್ಗೆ "ಅಸಹ್ಯ" ಹೇಳಿಕೆ ನೀಡಿದರು. ಅವರ ಸ್ನೇಹಿತ ಸಿಕಂದರ್ ಖೇರ್ ಈ ಕಾಮೆಂಟ್‌ನಿಂದ ಅಸಮಾಧಾನಗೊಂಡಿದ್ದರಂತೆ. ಆದರೆ ಅಭಿಷೇಕ್ ತಮ್ಮ ವಿಳಾಸವನ್ನು ಹೇಳಿ, ಅದನ್ನು ಅವರ ಮುಖಕ್ಕೆ ಹೇಳುವಂತೆ ಸವಾಲು ಹಾಕುವ ಮೂಲಕ ಟ್ರೋಲ್‌ಗೆ ಪ್ರತಿಕ್ರಿಯಿಸಿದ್ದರಂತೆ. "ಕಂಪ್ಯೂಟರ್ ಪರದೆಯ ಹಿಂದೆ ಅನಾಮಧೇಯವಾಗಿ ಕುಳಿತು ಅತ್ಯಂತ ಅಸಹ್ಯಕರ ವಿಷಯಗಳನ್ನು ಬರೆಯುವುದು ತುಂಬಾ ಅನುಕೂಲಕರವಾಗಿದೆ. ನೀವು ಯಾರನ್ನಾದರೂ ನೋಯಿಸುತ್ತಿದ್ದೀರಿ ಎಂದು ನೀವು ಅರಿತುಕೊಳ್ಳುತ್ತೀರಿ. ಅವರು ಎಷ್ಟೇ ದಪ್ಪ ಚರ್ಮದವರಾಗಿದ್ದರೂ, ಅದು ಅವರ ಮೇಲೆ ಪರಿಣಾಮ ಬೀರುತ್ತದೆ. ಯಾರಾದರೂ ನಿಮಗೆ ಹಾಗೆ ಮಾಡಿದರೆ ನಿಮಗೆ ಹೇಗೆ ಇಷ್ಟವಾಗುತ್ತದೆ? ನೀವು ಅದನ್ನು ಇಂಟರ್ನೆಟ್‌ನಲ್ಲಿ ಹೇಳಲು ಹೋದರೆ, ಅದನ್ನು ನನ್ನ ಮುಂದೆ ಹೇಳಲು ನಾನು ನಿಮಗೆ ಸವಾಲು ಹಾಕುತ್ತೇನೆ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ. ಆ ವ್ಯಕ್ತಿಗೆ ನನ್ನ ಮುಂದೆ ಇದನ್ನು ಹೇಳಲು ಎಂದಿಗೂ ಧೈರ್ಯವಿರುವುದಿಲ್ಲ. ಯಾರಾದರೂ ಬಂದು ನನ್ನ ಮುಂದೆ ವಿಷಯಗಳನ್ನು ಹೇಳಿದರೆ, ಅವರಿಗೆ ಧೈರ್ಯ, ದೃಢ ನಿಶ್ಚಯ ಇದೆ ಎಂದು ನಾನು ಭಾವಿಸುತ್ತೇನೆ. ನಾನು ಅದನ್ನು ಗೌರವಿಸುತ್ತೇನೆ" ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment