ಅಲ್ಲು ಅರ್ಜುನ್ ಫ್ಯಾನ್ಸ್​ಗೆ ಬಿಗ್‌ ​ನ್ಯೂಸ್​.. ಸ್ಟಾರ್​ ಡೈರೆಕ್ಟರ್ ಅಟ್ಲಿ ಜೊತೆ ಹೊಸ ಸಾಹಸ; ಏನಿದರ ಸ್ಪೆಷಲ್‌?

author-image
Veena Gangani
Updated On
ಅಲ್ಲು ಅರ್ಜುನ್ ಫ್ಯಾನ್ಸ್​ಗೆ ಬಿಗ್‌ ​ನ್ಯೂಸ್​.. ಸ್ಟಾರ್​ ಡೈರೆಕ್ಟರ್ ಅಟ್ಲಿ ಜೊತೆ ಹೊಸ ಸಾಹಸ; ಏನಿದರ ಸ್ಪೆಷಲ್‌?
Advertisment
  • ಅಲ್ಲು ಅರ್ಜುನ್ ನಟನೆಯ 22ನೇ ಸಿನಿಮಾಗೆ ಅಟ್ಲೀ ನಿರ್ದೇಶನ
  • 'ಜವಾನ್' ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ತೆರೆಗೆ
  • ಅಲ್ಲು ಅರ್ಜುನ್ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್​

ಕಾಲಿವುಡ್​ ಡೈರೆಕ್ಟರ್, ತಮಿಳಿನ ಸ್ಟಾರ್ ನಟರಿಗೆ ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡು ಬಾಲಿವುಡ್​ಗೆ ಹೋಗಿ ಅಲ್ಲಿಯೂ ಯಶಸ್ಸು ಕಂಡ ನಿರ್ದೇಶಕ ಅಟ್ಲಿ ಈಗ ಸಖತ್ ಫೇಮಸ್​.

ಇದನ್ನೂ ಓದಿ: ಸೀರಿಯಲ್​ ಮುಗಿಯುತ್ತಿದ್ದಂತೆ ಸಖತ್​ ಬ್ಯುಸಿಯಾದ ಲಕ್ಷ್ಮೀ; ನಟಿ ಭೂಮಿಕಾ ರಮೇಶ್ ನೆಕ್ಸ್ಟ್ ಪ್ಲಾನ್​ ಏನು?

publive-image

ಇಡೀ ದೇಶದಲ್ಲೇ ಈಗ ತನ್ನದೇ ಆದ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ಅಲ್ಲದೇ ಇತ್ತೀಚೆಗೆ ಶಾರುಖ್ ಖಾನ್ ಜೊತೆ ಸಿನಿಮಾ ಮಾಡಿದ್ದ ಅಟ್ಲಿ ದೊಡ್ಡ ಸಕ್ಸಸ್ ಕಂಡಿದ್ದರು. ಇದರ ಬೆನ್ನಲ್ಲೇ ಸಲ್ಮಾನ್ ಖಾನ್ ಜೊತೆ ಸಿನಿಮಾಕ್ಕೆ ಯೋಜಿಸಿದ್ದರು. ಆದರೆ ಬಜೆಟ್ ವಿಷ್ಯದಲ್ಲಿ ಕೆಲ ಮಾತುಕಥೆ ಸರಿಯಾಗದ ಕಾರಣ ಸಲ್ಮಾನ್ ಖಾನ್ ಬದಲಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್​ ಜೊತೆ ಮೂವಿಗೆ ರೆಡಿಯಾಗಿದ್ದಾರೆ.

publive-image

ಹೌದು, 'ಐಕಾನ್ ಸ್ಟಾರ್‌' ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ದಿನವೇ ಫ್ಯಾನ್ಸ್​ಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದಾರೆ. 'ಪುಷ್ಪ 2' ಸಿನಿಮಾದ ಗ್ರ್ಯಾಂಡ್ ಸಕ್ಸಸ್ ಬಳಿಕ ಅಲ್ಲು ಅರ್ಜುನ್ ಹೊಸ ಸಿನಿಮಾದ ಘೋಷಣೆ ಮಾಡಲಾಗಿದೆ. ಈ ಚಿತ್ರವನ್ನು ಸ್ಟಾರ್​ ನಿರ್ದೇಶನ ಅಟ್ಲಿ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ಇದು ದೇಶದ 2ನೇ ದುಬಾರಿ ಸಿನಿಮಾ ಎಂದು ಹೇಳಲಾಗುತ್ತಿದೆ. ಸುಮಾರು 1000 ಕೋಟಿ ರೂ. ಬಜೆಟ್​ನಲ್ಲಿ ಎಸ್ ಎಸ್ ರಾಜಮೌಳಿ ಮತ್ತು ಮಹೇಶ್ ಬಾಬು ಅವರು ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಈ ಸುದ್ದಿ ನಿಜವೇ ಆಗಿದ್ದರೇ ಅದು ಭಾರತದ ಅತೀ ಹೆಚ್ಚು ಬಜೆಟ್‌ನ ಸಿನಿಮಾವಾಗಲಿದೆ. ಈಗ ಅಲ್ಲು ಅರ್ಜುನ್ ಮತ್ತು ಅಟ್ಲಿ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಸಿನಿಮಾಗೆ 800 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂಬ ವಿಚಾರ ಹೊರ ಬಿದ್ದಿದೆ. ಇದು ನಿಜವೇ ಆದರೆ ಇದು ಭಾರತದ 2ನೇ ದುಬಾರಿ ಸಿನಿಮವಾಗಲಿದೆ.

publive-image


">April 8, 2025

ಇದೀಗ ಸನ್ ಪಿಕ್ಚರ್ಸ್ ಈ ಹೊಸ ಪ್ರಾಜೆಕ್ಟ್ ಘೋಷಣೆಯನ್ನು ಒಂದು ವಿಡಿಯೋ ಮೂಲಕ ಹೇಳಿಕೊಂಡಿದೆ. ಆ ವಿಡಿಯೋದಲ್ಲಿ ಹಾಲಿವುಡ್‌ನ ಅನೇಕ ತಂತ್ರಜ್ಞರು ಕಾಣಿಸಿಕೊಂಡಿದ್ದಾರೆ. ಈ ಬಾರಿ ಅಟ್ಲಿ ಯಾರು ಮಾಡಿರದ ಹಾಗೇ ಸಿನಿಮಾ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment