/newsfirstlive-kannada/media/post_attachments/wp-content/uploads/2024/12/naga.jpg)
ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ನಟಿ ಶೋಭಿತಾ ಧೂಳಿಪಾಲ್ ಜೊತೆಗೆ ನಟ ನಾಗ ಚೈತನ್ಯ ಮದುವೆಯಾಗಿದ್ದಾರೆ. ಹೈದ್ರಾಬಾದ್‌ನಲ್ಲಿ ನಾಗಚೈತನ್ಯ, ಶೋಭಿತಾ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ.
ಇದನ್ನೂ ಓದಿ:ಸಚಿನ್ ಕೈ ಹಿಡಿದ ವಿನೋದ್ ಕಾಂಬ್ಳಿ.. ಬಾಲ್ಯದ ಗೆಳೆಯರ ಅಪರೂಪದ ವಿಡಿಯೋ ಫುಲ್ ವೈರಲ್!
ಇನ್ನೂ, ಸ್ಟಾರ್ ನಟ ನಾಗ ಚೈತನ್ಯಗೆ ಇದು ಎರಡನೇ ಮದುವೆಯಾಗಿದೆ. ಈ ಸ್ಟಾರ್ ಜೋಡಿಯ ಮದುವೆಗೆ ಎರಡು ಕಡೆಯ ಕುಟುಂಬಸ್ಥರು, ಕೆಲ ಗಣ್ಯರು, ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಹೀಗಾಗಿ ಅಕ್ಕಿನೇನಿ ಕುಟುಂಬವಂತೂ ಹಿರಿಯ ಮಗನಿಗೆ ಮದುವೆ ಹಿನ್ನೆಲೆಯಲ್ಲಿ ಸಂತಸದಲ್ಲಿ ಮುಳುಗಿದೆ. ಇನ್ನೂ ಭರ್ಜರಿ ವಿವಾಹದ ಬಳಿಕ ರಾಜಸ್ಥಾನ ಅಥವಾ ವಿದೇಶದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಲು ಪ್ಲಾನ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಸದ್ದಿಲ್ಲದೇ ಗುರು ಹಿರಿಯರ ಸಮ್ಮುಖದಲ್ಲಿ ಕಳೆದ ಆಗಸ್ಟ್ 8ರಂದು ನಟಿ ಶೋಭಿತಾ ಜೊತೆಗೆ ನಟ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಖುದ್ದು ಟ್ವೀಟ್ ಮೂಲಕ ಮಗನ ಎಂಗೇಜ್ಮೆಂಟ್ ಬಗ್ಗೆ ಮಾಹಿತಿ ನೀಡಿರುವ ಅಕ್ಕಿನೇನಿ ನಾಗಾರ್ಜುನ್ ಅವರು, ಇಬ್ಬರಿಗೂ ಲೈಫ್ ಟೈಮ್ ಲವ್ ಹಾಗೂ ಸಂತೋಷವನ್ನು ಬಯಸುತ್ತೇನೆ ಅಂತ ಪೋಸ್ಟ್ ಮಾಡಿದ್ದರು.
2017ರಲ್ಲಿ ನಟಿ ಸಮಂತಾ ಜೊತೆ ನಾಗಚೈತನ್ಯ ಅವರ ಮದುವೆ ಆಗಿತ್ತು. 2021ರಲ್ಲಿ ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ವೈವಾಹಿಕ ಬದುಕು ಮುರಿದು ಬಿದ್ದಿತ್ತು. ಇದಾದ ಬಳಿಕ ಶೋಭಿತಾ ಜೊತೆ ನಾಗಚೈತನ್ಯ ಡೇಟಿಂಗ್ ಮಾಡುತ್ತಿದ್ದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಬಹಳ ಹಿಂದೆಯೇ ಕೇಳಿ ಬಂದಿತ್ತು. ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿ ಈ ಸ್ಟಾರ್ ಜೋಡಿ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ