ಬಿಂದಾಸ್​ ಬ್ಯೂಟಿ ದಾಂಪತ್ಯದಲ್ಲಿ ಬಿರುಕು.. ಪತಿಯಿಂದ ದೂರವಾಗಿ ಹನ್ಸಿಕಾ ಪ್ರತ್ಯೇಕ ವಾಸ!

author-image
Veena Gangani
ಬಿಂದಾಸ್​ ಬ್ಯೂಟಿ ದಾಂಪತ್ಯದಲ್ಲಿ ಬಿರುಕು.. ಪತಿಯಿಂದ ದೂರವಾಗಿ ಹನ್ಸಿಕಾ ಪ್ರತ್ಯೇಕ ವಾಸ!
Advertisment
  • 2022ರಲ್ಲಿ ಜೈಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ನಟಿ
  • ಆಪ್ತ ಗೆಳತಿಯ ಗಂಡನನ್ನೇ ಮದುವೆಯಾಗಿದ್ದ ಹನ್ಸಿಕಾ ಮೊಟ್ವಾಣಿ
  • ಅಭಿಮಾನಿಗಳಲ್ಲಿ ಗೊಂದಲ ಮನೆ ಮಾಡಲು ಮುಖ್ಯ ಕಾರಣವೇನು?

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ವಿಚ್ಛೇದನ ಹೆಚ್ಚಾಗುತ್ತಲೇ ಇವೆ. ವಿಶೇಷವಾಗಿ ಸಿನಿಮಾ ಮತ್ತು ಕ್ರೀಡಾ ಕ್ಷೇತ್ರಗಳ ಸೆಲೆಬ್ರಿಟಿಗಳು ತಮ್ಮ ಸಂಗಾತಿಗಳಿಂದ ಬೇರ್ಪಡುತ್ತಿದ್ದಾರೆ. ಈಗ, ಈ ಪಟ್ಟಿಗೆ ಮತ್ತೊಬ್ಬ ಸ್ಟಾರ್ ನಾಯಕಿ ಸೇರುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ: ಕಿಪ್ಪಿ ಕೀರ್ತಿಗಾಗಿ ಕೋಬ್ರಾ VS ಕಪ್ಪೆ ಕಿತ್ತಾಟ.. ಪೊಲೀಸ್​ ಠಾಣೆ ಮೆಟ್ಟಿಲೇರಿದ ಲವ್​ ಸ್ಟೋರಿ..!

publive-image

ಹೌದು, ನಟಿ ಹನ್ಸಿಕಾ ಮೊಟ್ವಾಣಿ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿ. ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ ಬಿಂದಾಸ್ ಸಿನಿಮಾದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತವಾಗಿದ್ದಾರೆ. ತನ್ನ ಸೌಂದರ್ಯ, ಕ್ಯೂಟ್​ ಅಭಿನಯದಿಂದ ಕನ್ನಡ ಅಭಿಮಾಗಳನ್ನು ಸಹ ಹೊಂದಿದ್ದಾರೆ. ಆದ್ರೆ, ಇದೀಗ ಸ್ಟಾರ್ ನಟಿ ಹನ್ಸಿಕಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಟಿ ಹನ್ಸಿಕಾ ತಮ್ಮ ಮೊದಲ ಆನಿವರ್ಸರಿ ಫೋಟೊಗಳನ್ನು ಬಿಟ್ಟರೆ ಪತಿಯ ಜತೆಗೆ ಇರೋ ಯಾವ ಚಿತ್ರವನ್ನು ಹಂಚಿಕೊಂಡಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಗೊಂದಲ ಮನೆ ಮಾಡಿದೆ.

publive-image

ಹನ್ಸಿಕಾ ಮೂರು ವರ್ಷಗಳ ಹಿಂದೆ ಅಂದರೆ, ಡಿಸೆಂಬರ್‌ 4-2022ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ಮುಂಡೋಟಾ ಕೋಟೆಯಲ್ಲಿ ಅದ್ಧೂರಿಯಾಗಿ ಮದುವೆಯಾದರು. ನಟಿ ಮದುವೆಯಾದ ಈ ಸೊಹೇಲ್​ ಬೇರೆ ಯಾರು ಅಲ್ಲ, ಬದಲಿಗೆ ಹನ್ಸಿಕಾ ಅವರ ಆಪ್ತ ಗೆಳತಿ ರಿಂಕಿಯ ಗಂಡ. ಗೆಳತಿಯ ಮನೆಯನ್ನು ಮುರಿದು ಮದುವೆಯಾಗ್ತಿದ್ದಾರೆ ಎಂದು ಹನ್ಸಿಕಾ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು. ಮೊದ ಮೊದಲು ಈ ಇಬ್ಬರೂ ತುಂಬಾ ಹತ್ತಿರವಾಗಿದ್ದರು. ಹನಿಮೂನ್, ರಜೆ ಮತ್ತು ದೇಶ ಮತ್ತು ವಿದೇಶಗಳಲ್ಲಿ ಸುತ್ತಾಡಿದರು. ಆ ಸಮಯದಲ್ಲಿ ಈ ದಂಪತಿಗಳ ಫೋಟೋಗಳು ಸಹ ವೈರಲ್ ಆಗಿದ್ದವು. ಈಗ ಇಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ.

publive-image

ಪ್ರತಿ ವರ್ಷ, ಹನ್ಸಿಕಾ ತನ್ನ ಮದುವೆಯ ದಿನದಂದು ವಿಶೇಷ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ನಟಿ ಎರಡನೇ ವಾರ್ಷಿಕೋತ್ಸವ ಎಂದು ಹೇಳುವ ಪೋಸ್ಟ್ ಅನ್ನು ಸಹ ಪೋಸ್ಟ್ ಮಾಡಿದ್ದರು. ಆದ್ರೆ,  ಕಳೆದ ಎರಡು ವರ್ಷಗಳಿಂದ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ನಟಿ ಹನ್ಸಿಕಾ ತನ್ನ ತಾಯಿಯೊಂದಿಗೆ ವಾಸವಾಗಿದ್ದರೆ, ನಟಿ ಪತಿ ಅವರ ಹೆತ್ತವರೊಂದಿಗೆ ಇದ್ದಾರೆ ಎಂಬ ವದಂತಿ ಇದೆ. ಮದುವೆಯಾದ ಮೂರು ವರ್ಷಗಳ ನಂತರ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳಿವೆ. ಸದ್ಯ ಈ ಬಗ್ಗೆ ನಟಿ ಆಗಲಿ, ಅವರ ಪತಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೋಷಿಯಲ್​ ಮೀಡಿಯಾದಲ್ಲಿ ತುಂಬಾನೆ ಌಕ್ಟೀವ್​ ಆಗಿರೋ ನಟಿ ಹನ್ಸಿಕಾ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment