ಮಹಾ ಕುಂಭಮೇಳದಲ್ಲಿ ಬಾಲಿವುಡ್​ ಸ್ಟಾರ್​ ನಟಿ ಕತ್ರಿನಾ ಕೈಫ್; ಟಾಪ್​ 10 ಫೋಟೋಸ್ ಇಲ್ಲಿವೆ!

author-image
Veena Gangani
Updated On
ಮಹಾ ಕುಂಭಮೇಳದಲ್ಲಿ ಬಾಲಿವುಡ್​ ಸ್ಟಾರ್​ ನಟಿ ಕತ್ರಿನಾ ಕೈಫ್; ಟಾಪ್​ 10 ಫೋಟೋಸ್ ಇಲ್ಲಿವೆ!
Advertisment
  • ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಬಾಲಿವುಡ್​ ನಟಿ ಕತ್ರಿನಾ ಕೈಫ್
  • ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ಬಾಲಿವುಡ್​ ಸ್ಟಾರ್​ ನಟಿ
  • ಸೊಸೆ ನಟಿ ಕತ್ರಿನಾ ಕೈಫ್ ಜೊತೆಗೆ ಕುಂಭಮೇಳಕ್ಕೆ ಬಂದ ಅತ್ತೆ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರೋ ಮಹಾ ಕುಂಭಮೇಳ ಜನವರಿ 13ರಂದು ಆರಂಭಗೊಂಡಿತ್ತು. 

publive-image

ಫೆಬ್ರವರಿ 3ರಂದು ಕೊನೆಯ ಅಮೃತ ಸ್ನಾನ ನಡೆದಿತ್ತು. ಇದೀಗ ಮಹಾ ಕುಂಭಮೇಳದ ಕೊನೆಯ ಪುಣ್ಯ ಸ್ನಾನ ಫೆಬ್ರವರಿ 26ರಂದು ಮಹಾಶಿವರಾತ್ರಿಯಂದು ನಡೆಯಲಿದೆ.

publive-image

ಹೀಗಾಗಿ ಈಗಲೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬಂದು ಪುಣ್ಯ ಸ್ನಾನ ಮಾಡಿ ಹೋಗುತ್ತಿದ್ದಾರೆ. ಇದರ ನಡುವೆ ಬಾಲಿವುಡ್​ ಸ್ಟಾರ್ ನಟಿ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ.

publive-image

ಹೌದು, ಬಾಲಿವುಡ್​ ಖ್ಯಾತ ನಟಿ ಕತ್ರಿನಾ ಕೈಫ್ ಅವರು ಪ್ರಯಾಗ್​ರಾಜ್​ಗೆ ತೆರಳಿದ್ದಾರೆ. ಮಹಾ ಕುಂಭಮೇಳದಲ್ಲಿ ಅವರು ಭಾಗಿಯಾಗಿದ್ದಾರೆ. ಅಲ್ಲದೇ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.

ಇದನ್ನೂ ಓದಿ:ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್‌ನಲ್ಲಿ ಟಾಕ್ಸಿಕ್ ಹವಾ; ಹೊಸ ದಾಖಲೆ ಬರೆಯಲು ಸಜ್ಜಾದ ಯಶ್‌ ಸಿನಿಮಾ!

publive-image

ಈ ಬಾರಿ ಇಲ್ಲಿಗೆ ಬಂದಿರುವ ನಾನು ಪುಣ್ಯವಂತೆ. ತುಂಬ ಖುಷಿ ಆಗುತ್ತಿದೆ. ಇದು ಬಹಳ ಸುಂದರವಾದ ಸ್ಥಳ. ಈಗ ನಾನು ಸ್ವಾಮಿಜಿ ಜೊತೆ ಇದ್ದೇನೆ. ಅವರ ಆಶೀರ್ವಾದ ಪಡೆದಿದ್ದೇನೆ.

publive-image

ಕುಂಭಮೇಳದ ಅನುಭವ ಪಡೆಯಲು ಈಗಷ್ಟೇ ಆರಂಭಿಸಿದ್ದೇನೆ ಎಂದು ಕತ್ರಿನಾ ಕೈಫ್ ಅವರು ಖಾಸಗಿ ವಾಹಿನಿಗೆ ಹೇಳಿದ್ದಾರೆ.

publive-image

ನಟಿ ಕತ್ರಿನಾ ಕೈಫ್ ಅವರು ಅತ್ತೆ ವೀಣಾ ಕೌಶಲ್ ಅವರೊಂದಿಗೆ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ಇಬ್ಬರೂ ಪರಮಾರ್ಥ ನಿಕೇತನಕ್ಕೆ ಭೇಟಿ ನೀಡಿ ತಮ್ಮ ಮಹಾಕುಂಭ ಶಿಬಿರದಲ್ಲಿ ತಂಗಿದರು.

publive-image

ಪರಮಾರ್ಥ್ ನಿಕೇತನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಕತ್ರಿನಾ ಕೈಫ್ ಹಾಗೂ ವೀಣಾ ಕೌಶಲ್ ಅವರು ಭೇಟಿ ನೀಡಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ. 

publive-image

ಇದೇ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ, ಮಹಾ ಕುಂಭಾಮೇಳಕ್ಕೆ ಭೇಟಿ ಕೊಟ್ಟ ಸ್ಟಾರ್​ ನಟಿಯನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳುವುದಕ್ಕೆ ಮುಗಿಬಿದ್ದಿದ್ದರು.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment