/newsfirstlive-kannada/media/post_attachments/wp-content/uploads/2025/07/Nandinee-Kashyap.jpg)
ದಿಸ್ಪುರ್: ಅಸ್ಸಾಮಿನ ಸ್ಟಾರ್​ ನಟಿ ನಂದಿನಿ ಕಶ್ಯಪ್​ನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬೀದಿ ದೀಪ ದುರಸ್ತಿ ಮಾಡುತ್ತಿದ್ದ ವಿದ್ಯಾರ್ಥಿಗೆ ನಂದಿನಿ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯಾರ್ಥಿ ಸಮಿಯುಲ್​ ಆಸ್ಪತ್ರೆಯಲ್ಲಿ ಜೀವಬಿಟ್ಟಿದ್ದಾನೆ.
ಇದನ್ನೂ ಓದಿ: ಕೈಮುಗಿದು ನ್ಯಾಯಾಧೀಶರ ಮುಂದೆ ನಿಂತಿದ್ದ ಪ್ರಜ್ವಲ್ ರೇವಣ್ಣ.. ಆಗಸ್ಟ್ 1ಕ್ಕೆ ತೀರ್ಪು ಪ್ರಕಟ..!
/newsfirstlive-kannada/media/post_attachments/wp-content/uploads/2025/07/Nandinee-Kashyap2.jpg)
ಏನಿದು ಹಿಟ್​ ಅಂಡ್​ ರನ್​ ಕೇಸ್​..?
ಜುಲೈ 25ರಂದು ಗುವಾಹಟಿ ಮುನ್ಸಿಪಲ್ ಕಾರ್ಪೊರೇಷನ್ (ಜಿಎಂಸಿ) ಬೀದಿ ದೀಪಗಳನ್ನು ವಿದ್ಯಾರ್ಥಿ ದುರಸ್ತಿ ಮಾಡುತ್ತಿದ್ದ. ಇದೇ ವೇಳೆ ನಟಿ ನಂದಿನಿ ಕಶ್ಯಪ್ ಕುಡಿದ ಮತ್ತಿನಲ್ಲಿ ತನ್ನ ಬೊಲೆರೊ ಎಸ್‌ಯುವಿಯನ್ನು ವೇಗವಾಗಿ ಚಲಾಯಿಸಿದ್ದಾರೆ. ಸುಮಾರು ​120 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಕಾರನ್ನು ಚಾಲನೆ ಮಾಡಿ ಗುವಾಹಟಿಯ ದಖಿಂಗಾವ್​ನಲ್ಲಿ ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿದೆ. ಕಾರಿನಿಂದ ಡಿಕ್ಕಿ ಹೊಡೆದ ನಟಿ ಮದ್ಯದ ಅಮಲಿನಲ್ಲಿದ್ದಳು ಎನ್ನಲಾಗಿದೆ.
/newsfirstlive-kannada/media/post_attachments/wp-content/uploads/2025/07/Nandinee-Kashyap1.jpg)
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸಮಿಯುಲ್ 6 ಅಡಿ ಎತ್ತರ ಹಾರಿ ಕೆಳಗೆ ಬಿದ್ದಿದ್ದಾನೆ. ಆ ಕೂಡಲೇ​ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಅಪಘಾತದ ನಾಲ್ಕು ದಿನಗಳ ನಂತರ ನಿನ್ನೆ ಚಿಕಿತ್ಸೆ ಫಲಿಸದೆ 22 ವರ್ಷದ ಪಾಲಿಟೆಕ್ನಿಕ್ ವಿದ್ಯಾರ್ಥಿ ಸಮಿಯುಲ್ ಪ್ರಾಣಬಿಟ್ಟಿದ್ದಾನೆ. ಈ ಘಟನೆ ಬಗ್ಗೆ ಅಸ್ಸಾಂನಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಭಾವಿ ಸೆಲೆಬ್ರಿಟಿಗಳಿಗೆ ಕಾನೂನು ಅನ್ವಯ ಆಗೋದಿಲ್ವಾ ಎಂದು ಜನರು ಆಕ್ರೋಶ ಹೊರ ಹಾಕಿದ್ದರು. ಈಗ ವಿದ್ಯಾರ್ಥಿ ಸಾವಿನ ಬೆನ್ನಲ್ಲೇ ನಟಿ ನಂದಿನಿಯನ್ನು ದಿಸ್ಪುರ್ ಪೋಲಿಸರು ಬಂಧಿಸಿ ತೀವ್ರ ವಿಚಾರಣೆ ಒಳಪಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/07/Nandinee-Kashyap3.jpg)
ಇನ್ನು, ಮೃತ ವಿದ್ಯಾರ್ಥಿಯ ತಾಯಿ ನನ್ನ ಮಗನಿಗೆ ನ್ಯಾಯ ಬೇಕು. ನಮಗೆ ವಿಶೇಷ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಅವಳು ನನ್ನ ಮಗನನ್ನು ನೋಡಲು ಕೂಡ ಬಂದಿರಲಿಲ್ಲ. ಅವಳು ಸ್ವಲ್ಪ ಸಹಾನುಭೂತಿ, ಸ್ವಲ್ಪ ಮಾನವೀಯತೆ ತೋರಿಸಬಹುದಿತ್ತು. ನನ್ನ ಮಗ ತನ್ನ ಜೀವನಕ್ಕಾಗಿ ಹೋರಾಡುತ್ತಿರುವಾಗ ಅವಳು ತನ್ನ ಕಾರಿನ ಬಗ್ಗೆ ಮಾತನಾಡುವುದನ್ನು ಕೇಳುವುದು ಅದು ಹೃದಯವಿದ್ರಾವಕವಾಗಿದೆ ಎಂದು ಬಿಕ್ಕಿ ಬಿಕ್ಕಿ ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಬೇಡಿಕೊಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us