newsfirstkannada.com

VIDEO: ಪ್ರಜ್ವಲ್​ ರೇವಣ್ಣ ಅನ್ನೋ ಕೀಚಕನನ್ನು ಗಲ್ಲಿಗೇರಿಸಿ; ತೆಲುಗು ಸ್ಟಾರ್​​ ನಟಿ ಪೂನಂ ಆಕ್ರೋಶ

Share :

Published May 1, 2024 at 4:22pm

Update May 1, 2024 at 5:26pm

    ಕಳೆದ ಮೂರು ದಿನಗಳಿಂದ ಹಾಸನ ಅಶ್ಲೀಲ ವಿಡಿಯೋ ಕೇಸ್​​ ಭಾರೀ ಸದ್ದು

    ಮಾಜಿ ಸಚಿವ ಹೆಚ್​​.ಡಿ ರೇವಣ್ಣ, ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್..!

    ಪ್ರಜ್ವಲ್​ ರೇವಣ್ಣ ವಿರುದ್ಧ ತೆಲುಗು ಸ್ಟಾರ್​ ನಟಿ ಪೂನಂ ಕೌರ್​ ಭಾರೀ ಆಕ್ರೋಶ

ಕಳೆದ ಮೂರು ದಿನಗಳಿಂದ ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಹಾಸನ ಅಶ್ಲೀಲ ವಿಡಿಯೋ ಕೇಸ್​​ನಲ್ಲಿ ಮಾಜಿ ಸಚಿವ ಹೆಚ್​​.ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​​​​ ಸರ್ಕಾರ ಕೇಸ್​ ತನಿಖೆಗಾಗಿ ಎಸ್​ಐಟಿ ರಚನೆ ಮಾಡಿ ಆದೇಶಿಸಿದೆ. ಈ ನೀಚ ಕೃತ್ಯವನ್ನು ಹಲವು ಗಣ್ಯರು ಖಂಡಿಸಿದ್ದಾರೆ. ಇದರ ಮಧ್ಯೆ ತೆಲುಗು ಸ್ಟಾರ್​​ ನಟಿ ಪೂನಂ ಕೌರ್​ ಕೂಡ ಪ್ರಜ್ವಲ್​ ರೇವಣ್ಣ ಬಗ್ಗೆ ಮಾತಾಡಿದ್ದಾರೆ.

ಪೂನಂ ಕೌರ್​​ ಏನಂದ್ರು?

ಪ್ರಜ್ವಲ್​ ರೇವಣ್ಣ ಅನ್ನೋ ಕೀಚಕ ಮಹಿಳೆಯರಿಗೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಾವಿರಾರು ವಿಡಿಯೋಗಳು ಹರಿದಾಡುತ್ತಿವೆ. ಹಣ ಮತ್ತು ರಾಜಕೀಯ ಕಾರಣದಿಂದಾಗಿ ಪ್ರಜ್ವಲ್​ ತಪ್ಪಿಸಿಕೊಂಡಿದ್ದಾರೆ. ಎಲ್ಲವೂ ಮಾಡಿ ಜರ್ಮನಿಯಲ್ಲಿ ಪ್ರಜ್ವಲ್ ನೆಮ್ಮದಿಯಾಗಿ ಇದ್ದಾರೆ. ಇವರಿಗೆ ಶಿಕ್ಷೆ ಆಗಬೇಕು ಎಂದರೆ ಜನ ತಿರುಗಿ ಬೀಳಬೇಕು ಎಂದು ಪೂನಂ ಕೌರ್​ ಆಕ್ರೋಶ ಹೊರಹಾಕಿದ್ದಾರೆ.

ಪೂನಂ ಕೌರ್​ ಹ್ಯಾಟ್ರಿಕ್​ ಹೀರೋ ಶಿವಣ್ಣ ಅವರ ಬಂಧು ಬಳಗ ಸಿನಿಮಾ ಸೇರಿ ನಾನಾ ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಜ್ವಲ್ ರೇವಣ್ಣ ಅನ್ನೋ ನೀಚ ವ್ಯಕ್ತಿಯನ್ನು ಗೆಲ್ಲಿಗೇರಿಸಬೇಕು ಎಂದಿರೋ ಪೂನಂ ಕೌರ್​​ ಈ ಹಿಂದೆ ರಾಹುಲ್​ ಗಾಂಧಿ ಅವರೊಂದಿಗೆ ಭಾರತ್​ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದರು.

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್​ ನಾನಾ ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಬಿಜೆಪಿ ಮತ್ತು ಜೆಡಿಎಸ್ ಮೇಲೆ ಮುಗಿಬಿದ್ದಿವೆ. ಈ ಬಗ್ಗೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರೇ ಮಾತಾಡಿರೋ ಕಾರಣ ಹೆಚ್ಚು ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​​.. ಪ್ರಜ್ವಲ್​ ರೇವಣ್ಣ ಬಗ್ಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪ್ರಜ್ವಲ್​ ರೇವಣ್ಣ ಅನ್ನೋ ಕೀಚಕನನ್ನು ಗಲ್ಲಿಗೇರಿಸಿ; ತೆಲುಗು ಸ್ಟಾರ್​​ ನಟಿ ಪೂನಂ ಆಕ್ರೋಶ

https://newsfirstlive.com/wp-content/uploads/2024/05/Prajwal_Poonam-Kaur.jpg

Load More