ಸರೋಜಾ ದೇವಿ ನಿಧನಕ್ಕೆ ದರ್ಶನ್ ಕಂಬನಿ.. ಏನಂದ್ರು ಸ್ಯಾಂಡಲ್​ವುಡ್ ಸ್ಟಾರ್​..?

author-image
Veena Gangani
Updated On
ಸರೋಜಾ ದೇವಿ ನಿಧನಕ್ಕೆ ದರ್ಶನ್ ಕಂಬನಿ.. ಏನಂದ್ರು ಸ್ಯಾಂಡಲ್​ವುಡ್ ಸ್ಟಾರ್​..?
Advertisment
  • 87 ವರ್ಷಕ್ಕೆ ವಿಧಿವಶರಾದ ಖ್ಯಾತ ಬಹುಭಾಷಾ ನಟಿ ಸರೋಜಾದೇವಿ
  • ಕನ್ನಡ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ಸ್ಟಾರ್​ ನಟನೆ
  • ನಟಿ ನಿಧನಕ್ಕೆ ದರ್ಶನ್​, ನಟಿ ಸುಮಲತಾ ಅಂಬರೀಶ್ ಕಂಬನಿ

ಖ್ಯಾತ ಬಹುಭಾಷಾ ನಟಿ, ಹಿರಿಯ ಕಲಾವಿದೆ ಸರೋಜಾದೇವಿ ಅವರು ನಿಧನರಾಗಿದ್ದಾರೆ. ಕನ್ನಡ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ನಾಯಕಿಯಾಗಿ ಮೆರೆದಿದ್ದ ಸರೋಜಾದೇವಿ ಅವರು ವಯೋಸಹಜ ಕಾಯಿಲೆಯಿಂದ 87 ವರ್ಷಕ್ಕೆ ವಿಧಿವಶರಾಗಿದ್ದಾರೆ. ಹಿರಿಯ ನಟಿ ನಿಧನಕ್ಕೆ ಇಡೀ ಸ್ಯಾಂಡಲ್​ವುಡ್​ ಕಂಬನಿ ಮಿಡಿಯುತ್ತಿದೆ. ಇನ್ನೂ, ನಟ ದರ್ಶನ್​ ಹಾಗೂ ನಟಿ ಸುಮಲತಾ ಅಂಬರೀಶ್ ಅವರು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್ ಮಾಡಿಕೊಂಡು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:ಸರೋಜಾ ದೇವಿಗೆ ತುಂಬಾನೇ ಕಾಡಿದ ನೋವು ಅದು.. ಅಂದಿನಿಂದ ಚೇತರಿಸಿಕೊಳ್ಳಲು ತುಂಬಾ ವರ್ಷಗಳು ಬೇಕಾಯಿತು..

publive-image

ಹಿರಿಯ ಕಲಾವಿದೆ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ.ಸರೋಜಾದೇವಿ ಅವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ದೇವರು ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಆ ಹಿರಿಯ ಕಲಾವಿದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.

ನಟ ದರ್ಶನ್​

ನಮ್ಮೆಲ್ಲರ ಪ್ರೀತಿಯ "ಅಭಿನಯ ಸರಸ್ವತಿ" ಬಿ. ಸರೋಜಾದೇವಿ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ತಮ್ಮ ಅಪಾರ ಪ್ರತಿಭೆ ಮತ್ತು ಸೌಮ್ಯ ವ್ಯಕ್ತಿತ್ವದಿಂದ ಲಕ್ಷಾಂತರ ಜನರ ಮನಸ್ಸನ್ನು ಗೆದ್ದಿದ್ದ ಸರೋಜಾದೇವಿಯವರು, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಬಹುಭಾಷಾ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ತಮ್ಮ ಸಹಜವಾದ ಅಭಿನಯದ ಮೂಲಕ ಪಾತ್ರಗಳಿಗೆ ಜೀವ ತುಂಬುವ ಅನನ್ಯ ಕಲೆಯಿಂದ ಅವರು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ನಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದ ಅವರು ಹಾಗೂ ಡಾ. ಅಂಬರೀಶ್ ಅವರ ಒಡನಾಟ, ಬಾಂಧವ್ಯ ಮತ್ತು ನಮ್ಮ ಸ್ನೇಹವು ಸುಂದರ ನೆನಪುಗಳಾಗಿ ಉಳಿಯಲಿವೆ. ಮೃತರ ಆತ್ಮಕ್ಕೆ ಸದ್ಗತಿ ಕೋರಿ ಪ್ರಾರ್ಥನೆ ಸಲ್ಲಿಸುವೆ. ಓಂ ಶಾಂತಿ.

ನಟಿ ಸುಮಲತಾ ಅಂಬರೀಶ್

ಇನ್ನೂ, ನಟಿ ಸರೋಜಾದೇವಿ ಅವರ ಅಂತ್ಯ ಸಂಸ್ಕಾರವನ್ನು ಚನ್ನಪಟ್ಟಣ ತಾಲೂಕು ರಾಮನಗರ ಜಿಲ್ಲೆಯ ಕಣ್ವ ಡ್ಯಾಮಿನ ಪಕ್ಕದಲ್ಲೇ ಇರೋ ದಶಾವರದಲ್ಲಿ ಕುಟುಂಬಸ್ಥರು ಮಾಡಲಿದ್ದಾರೆ. ಒಕ್ಕಲಿಗ ಸಂಪ್ರದಾಯದಂತೆ ವಿಧಿ ವಿಧಾನಗಳು ನೆರವೇರಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment