ಆಶಿಶ್ ನೆಹ್ರಾಗೆ ಗುಜರಾತ್ ಟೈಟನ್ಸ್ ಗೇಟ್ಪಾಸ್..?
ನೆಹ್ರಾ, ಸೋಲಂಕಿಗೆ ಟಾಟಾ, ಸಿಕ್ಸರ್ ಕಿಂಗ್ಗೆ ಹಾಯ್..?
2024ರಲ್ಲಿ ಕ್ಯಾಪ್ಟನ್ ಪಾಂಡ್ಯರನ್ನೇ ಕೈಬಿಟ್ಟಿದ್ದ GT
ವಿಶ್ವ ಕ್ರಿಕೆಟ್ ಸೂಪರ್ ಸ್ಟಾರ್, ಸ್ಫೋಟಕ ಆಲ್ರೌಂಡರ್ ಯುವರಾಜ್ ಸಿಂಗ್ ಐಪಿಎಲ್ ಅಖಾಡಕ್ಕೆ ಕಮ್ಬ್ಯಾಕ್ ಮಾಡ್ತಿದ್ದಾರೆ. ಆಟಗಾರನಾಗಿ ಫ್ಯಾನ್ಸ್ಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದ ಯುವರಾಜ್, ಮುಂದಿನ ಸೀಸನ್ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಫ್ರಾಂಚೈಸಿಗಳ ವಲಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗ್ತಿದೆ. ಡಿಸೆಂಬರ್ನಲ್ಲಿ ನಡೆಯೋ ಮೆಗಾ ಆಕ್ಷನ್ಗೆ ಸಿದ್ಧತೆ ಆರಂಭಿಸಿರೋ ಫ್ರಾಂಚೈಸಿಗಳು ಮೇಜರ್ ಸರ್ಜರಿ ಮಾಡ್ತಿದೆ. ಸೂಪರ್ ಸ್ಟಾರ್ ಆಟಗಾರರೇ ಒಂದು ಫ್ರಾಂಚೈಸಿ ತೊರೆದು ಇನ್ನೊಂದು ಫ್ರಾಂಚೈಸಿ ಸೇರುವ ಸುದ್ದಿಗಳು ಸದ್ದು ಮಾಡ್ತಿವೆ. ಕೋಚಿಂಗ್ ಸ್ಟಾಫ್ ಬದಲಾವಣೆಯ ವಿಚಾರದಲ್ಲೂ ಶಾಕಿಂಗ್ ಸುದ್ದಿ ಹೊರಬಿಳ್ತಿವೆ.
ಇದನ್ನೂ ಓದಿ:Breaking: ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನ ಪತನ.. ಭಾರೀ ಸಾವು ನೋವಿನ ಆತಂಕ..
ಆಶಿಶ್ ನೆಹ್ರಾಗೆ ಗುಜರಾತ್ ಟೈಟನ್ಸ್ ಗೇಟ್ಪಾಸ್
ಗುಜರಾತ್ ಟೈಟನ್ಸ್.. ಐಪಿಎಲ್ನಲ್ಲಿ ಅತಿ ವೇಗವಾಗಿ ಸಕ್ಸಸ್ ಕಂಡ ಫ್ರಾಂಚೈಸಿ. ಮೊದಲ ಸೀಸನ್ನಲ್ಲೇ ಚಾಂಪಿಯನ್, ಸೆಕೆಂಡ್ ಸೀಸನ್ನಲ್ಲಿ ರನ್ನರ್ಅಪ್.. ಅದ್ಧೂರಿ ಆರಂಭ ಪಡೆದ ಈ ಗುಜರಾತ್ ಕಳೆದ ಸೀಸನ್ನಲ್ಲಿ 8ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಮುಂದಿನ ಸೀಸನ್ಗೆ ಸಿದ್ಧತೆ ಆರಂಭಿಸಿರೋ ಗುಜರಾತ್ ಮೇಜರ್ ಸರ್ಜರಿಗೆ ಕೈ ಹಾಕಿದೆ. ತಂಡದ ಯಶಸ್ಸಿನ ಸೂತ್ರದಾರ, ಹೆಡ್ಕೋಚ್ ಆಶಿಶ್ ನೆಹ್ರಾಗೇ ಕೊಕ್ ಕೊಡಲು ಸಜ್ಜಾಗಿದೆ.
ನೆಹ್ರಾ, ಸೋಲಂಕಿಗೆ ಗುಡ್ ಬೈ, ಸಿಕ್ಸರ್ ಕಿಂಗ್ಗೆ ಹಾಯ್
ಹೆಡ್ ಕೋಚ್ ಹುದ್ದೆಯಲ್ಲಿದ್ದ ಆಶಿಶ್ ನೆಹ್ರಾ ಮಾತ್ರವಲ್ಲ. ಆರಂಭದಿಂದ ತಂಡ ಕಟ್ಟಿ ಬೆಳೆಸಿದ ಡೈರೆಕ್ಟರ್ ವಿಕ್ರಮ್ ಸೋಲಂಕಿಗೂ ಫ್ರಾಂಚೈಸಿ ಶಾಕ್ ನೀಡಲು ಸಜ್ಜಾಗಿದೆ. ವಿಕ್ರಂ ಸೋಲಂಕಿಗೆ ಟೈಟನ್ಸ್ ಫ್ರಾಂಚೈಸಿ ಮುಂದಿನ ಸೀಸನ್ಗೂ ಮುನ್ನ ಟಾಟಾ ಮಾಡಲಿದೆ. ಇವರಿಬ್ಬರ ಜಾಗಕ್ಕೆ, ವಿಶ್ವ ಟಿ20 ಕ್ರಿಕೆಟ್ ಕಂಡ ಸೂಪರ್ ಸ್ಟಾರ್ ಆಟಗಾರನನ್ನ ಕರೆ ತರಲು ಫ್ರಾಂಚೈಸಿ ಮುಂದಾಗಿದೆ. ಅಂದ್ಹಾಗೆ ಆ ಸೂಪರ್ ಸ್ಟಾರ್ ಬೇರಾರೂ ಅಲ್ಲ.. ಒನ್ ಅಂಡ್ ಓನ್ಲೀ ಯುವರಾಜ್ ಸಿಂಗ್..!
ಇದನ್ನೂ ಓದಿ:ರಾಹುಲ್ ದ್ರಾವಿಡ್ IPLಗೆ ರಿಟರ್ನ್.. KKRಗೆ ಬಿಗ್ ಶಾಕ್.. ಈ ತಂಡದ ನೂತನ ಕೋಚ್..!
ಯುವರಾಜ್ ಸಿಂಗ್ಗೆ ಗುಜರಾತ್ ಟೈಟನ್ಸ್ ಗಾಳ..!
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಲೆಜೆಂಡ್ ಯುವರಾಜ್ ಸಿಂಗ್ಗೆ ಸದ್ಯ ಗುಜರಾಥ್ ಟೈಟನ್ಸ್ ಗಾಳ ಹಾಕಿದೆ ಎಂಬ ಸುದ್ದಿ ಸದ್ಯ ಹೊರಬಿದ್ದಿದೆ. ಈಗಾಗಲೇ ಫ್ರಾಂಚೈಸಿ ಯುವರಾಜ್ ಸಿಂಗ್ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿದೆ. ಇದಕ್ಕೆ ಯುವರಾಜ್ ಕೂಡ ಪಾಸಿಟಿವ್ ರಿಪ್ಲೇ ಕೊಟ್ಟಿದ್ದಾರೆ. ಅಂತಿಮ ನಿರ್ಧಾರ ತಿಳಿಸಿಲ್ಲ. ಯುವಿಯ ಫೈನಲ್ ಡಿಶಿಷನ್ಗೆ ಫ್ರಾಂಚೈಸಿ ಕಾಯ್ತಿದೆ ಎನ್ನಲಾಗ್ತಿದೆ.
ಯುವಿ ಮೇಲ್ಯಾಕೆ ಗುಜರಾತ್ ಟೈಟನ್ಸ್ ಕಣ್ಣು..?
ಯುವರಾಜ್ ಸಿಂಗ್ ಟೀಮ್ ಇಂಡಿಯಾ ಮಾತ್ರವಲ್ಲ. ವಿಶ್ವ ಕ್ರಿಕೆಟ್ ಕಂಡ ಸ್ಫೋಟಕ ಆಲ್ರೌಂಡರ್. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದ ಆಟಗಾರ. 2007ರ ಚುಟುಕು ವಿಶ್ವಕಪ್ನಲ್ಲಿ ಓವರ್ 6ಕ್ಕೆ 6 ಎಸೆತಗಳನ್ನ ಸಿಕ್ಸರ್ಗಟ್ಟಿ ದಾಖಲೆ ಬರೆದಿದ್ರು. 2011ರ ವಿಶ್ವಕಪ್ನಲ್ಲಿ ಆಲ್ರೌಂಡ್ ಆಟದಿಂದ ಮಿಂಚಿ ಸರಣಿ ಶ್ರೇಷ್ಟ ಪ್ರಶಸ್ತಿ ಗೆದ್ದಿದ್ರು. 2013ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಸಾಲಿಡ್ ಪರ್ಫಾಮೆನ್ಸ್ ನೀಡಿ ಮಿಂಚಿದ್ರು. ಅಪಾರ ಅನುಭವ ಹೊಂದಿರೋದ್ರಿಂದಲೇ ಗುಜರಾತ್ ಯುವಿಗೆ ಗಾಳ ಹಾಕಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಪಾರ ಅನುಭವ ಹೊಂದಿರುವ ಯುವರಾಜ್ ಸಿಂಗ್, ಐಪಿಎಲ್ನ ಆಳ-ಅಗಲದ ಬಗ್ಗೆಯೂ ಪಕ್ಕಾ ಮಾಹಿತಿ ಇದೆ. ಆಟಗಾರನಾಗಿ 132 IPL ಪಂದ್ಯ ಆಡಿದ್ದಾರೆ. ಮಾನಸಿಕ ಆರೋಗ್ಯ ಹಾಗೂ ಒತ್ತಡದ ವಿಚಾರಕ್ಕೆ ಬಂದರೆ ಸ್ವತಃ ಯುವರಾಜ್ ಸಿಂಗ್ ಎಲ್ಲವನ್ನೂ ಫೇಸ್ ಮಾಡಿ ಗೆದ್ದಿದ್ದಾರೆ. ಕ್ಯಾನ್ಸರ್ ಮಹಮಾರಿಯೊಂದಿಗೆ ಹೋರಾಡ್ತಾ ಇದ್ದರೂ ಮೈದಾನಕ್ಕಿಳಿದು ಘರ್ಜಿಸಿದ್ರು. ಯುವಿಯ ಈ ಛಲದ ಹೋರಾಟವೇ ಯುವ ಆಟಗಾರರಿಗೆ ಸ್ಫೂರ್ತಿಯ ಪಾಠ ಆಗಲಿದೆ.
ಗಿಲ್ ಪಳಗಿದ್ದೇ ಯುವಿ ಗರಡಿಯಲ್ಲಿ.!
ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಪಳಗಿದ್ದೇ ಯುವರಾಜ್ ಸಿಂಗ್ ಗರಡಿಯಲ್ಲಿ. ಶುಭ್ಮನ್ ಗಿಲ್, ಯುವರಾಜ್ ಸಿಂಗ್ ತಿದ್ದಿ ತೀಡಿ ಬೆಳೆಸಿದ ಹುಡುಗ. ಇವರಿಬ್ಬರ ನಡುವೆ ಉತ್ತಮವಾದ ಭಾಂದವ್ಯ ಇದೆ. ಕ್ಯಾಪ್ಟನ್-ಕೋಚ್ ಸಮನ್ವಯತೆ ಡ್ರೆಸ್ಸಿಂಗ್ ರೂಮ್ ವಾತಾವರಣವನ್ನು ಉತ್ತಮಗೊಳಿಸಲಿದೆ. ಇದೂ ಕೂಡ ಗುಜರಾತ್ ಯುವಿಗೆ ಗಾಳ ಹಾಕಿರೋದಕ್ಕೆ ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ:ಮದುವೆಯಾದ ಮೇಲೂ ಮಾಜಿ ಪ್ರೇಯಸಿ ಜೊತೆ ಸಂಬಂಧ.. ಪತ್ನಿ ವಿರೋಧಿಸಿದಾಗ ಈ ಹೆಜ್ಜೆ ಇಟ್ಟ..!
ಯುವರಾಜ್ ಸಿಂಗ್ ವೈಟ್ಬಾಲ್ ಫಾರ್ಮೆಟ್ ಕಂಡ ಒನ್ ಆಫ್ ಗ್ರೇಟೆಸ್ಟ್ AND ಪರ್ಫೆಕ್ಟ್ ಆಲ್ರೌಂಡರ್. ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲ. ಫೀಲ್ಡಿಂಗ್ ಮೂರು ವಿಭಾಗದಲ್ಲೂ ಮಿಂಚು ಹರಿಸಿದ ಕ್ರಿಕೆಟಿಗ. ಇಂತಹ ಶ್ರೇಷ್ಟ ಆಲ್ರೌಂಡರ್ ಗುಜರಾತ್ ಟೈಟನ್ಸ್ ಸೇರಿದ್ರೆ ತಂಡಕ್ಕೆ ಲಾಭವೇ ಹೊರತು ನಷ್ಟ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್