‘RCB ಜೊತೆಗಿನ ನನ್ನ ಜರ್ನಿ ಮುಗಿದಿಲ್ಲ’- ಮತ್ತೆ ತಂಡ ಸೇರೋ ಸುಳಿವು ಕೊಟ್ಟ ಸ್ಟಾರ್​ ಪ್ಲೇಯರ್​

author-image
Ganesh Nachikethu
Updated On
ಈ ವಿದೇಶಿ ಆಟಗಾರರ ಖರೀದಿಗೆ ಆರ್​​ಸಿಬಿ ಮಾಸ್ಟರ್​ ಪ್ಲಾನ್​​; ಪಟ್ಟಿಯಲ್ಲಿ ಅಚ್ಚರಿ ಹೆಸ್ರುಗಳು!
Advertisment
  • 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ಗೆ ಭರ್ಜರಿ ತಯಾರಿ
  • ಆಕ್ಷನ್​ಗೆ ಮುನ್ನ ಆರ್​​ಸಿಬಿಯಿಂದ ಸ್ಟಾರ್​ ಆಟಗಾರನಿಗೆ ಕೊಕ್​​
  • ಮತ್ತೆ ಆರ್​​ಸಿಬಿ ಸೇರೋ ಸುಳಿವು ಕೊಟ್ಟ ಸ್ಫೋಟಕ ಬ್ಯಾಟರ್​​!

ಮುಂದಿನ ಸೀಸನ್​ಗಾಗಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಉತ್ತಮ ಪ್ರದರ್ಶನ ನೀಡದ ದುಬಾರಿ ಆಟಗಾರರನ್ನೇ ಕೈ ಬಿಟ್ಟಿದೆ. ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರನ್ನು ಆರ್​​ಸಿಬಿ ರಿಲೀಸ್​ ಮಾಡಿದೆ.

2021ರ ಹರಾಜಿನಲ್ಲಿ ಮ್ಯಾಕ್ಸ್‌ವೆಲ್‌ ಅವರನ್ನು 14.25 ಕೋಟಿ ರೂಪಾಯಿ ನೀಡಿ ಆರ್​​ಸಿಬಿ ಖರೀದಿ ಮಾಡಿತ್ತು. 2023ರ ಐಪಿಎಲ್‌ನಲ್ಲಿ 400 ರನ್ ಗಳಿಸಿದ್ದ ಮ್ಯಾಕ್ಸಿ ಕಳೆದ ಸೀಸನ್​ 2024ರ ಐಪಿಎಲ್‌ನಲ್ಲಿ ಕೇವಲ 52 ರನ್​ ಗಳಸಿದರು. ಈ ಮೂಲಕ ಆರ್​ಸಿಬಿಗೆ ಮ್ಯಾಕ್ಸ್​ವೆಲ್​ ದೊಡ್ಡ ತಲೆನೋವಾಗಿ ಪರಿಣಮಿಸಿದ್ರು.

2021ರಿಂದ 2023ರವರೆಗೆ ಆರ್​ಸಿಬಿ ಪರ ಮ್ಯಾಕ್ಸಿ ಅದ್ಭುತ ಆಲ್​ರೌಂಡರ್ ಆಟವನ್ನಾಡಿದ್ದರು. 2021ರಲ್ಲಿ ಮ್ಯಾಕ್ಸ್​​ವೆಲ್ 513, 2022ರಲ್ಲಿ 301, 2023ರಕ್ಕು 400 ರನ್​​ ಬಾರಿಸಿದ್ದರು. 2024ರಲ್ಲಿ ಕೇವಲ 52 ರನ್​​ ಮಾತ್ರ ಬಾರಿಸಿದ್ದಾರೆ. ಆಡಿರುವ 10 ಪಂದ್ಯಗಳಲ್ಲೂ ಮ್ಯಾಕ್ಸ್​ವೆಲ್ ಕೆಟ್ಟ ಪ್ರದರ್ಶನ ನೀಡಿ ಆರ್​ಸಿಬಿ ಮ್ಯಾನೇಜ್ಮೆಂಟ್​​ನ ಕೆಂಗಣ್ಣಿಗೆ ಗುರಿಯಾಗಿದ್ರು.

ಕಪ್​​ ಗೆಲ್ಲಲು ಸರ್ಕಸ್​​

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಮುಂದಿನ ಸೀಸನ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕಪ್​​ ಗೆಲ್ಲೋ ನಿರೀಕ್ಷೆಯಲ್ಲಿದೆ. ಹಾಗಾಗಿ ವರ್ಷದ ಕೊನೆಗೆ ಎದುರಾಗಲಿರೋ ಮೆಗಾ ಆಕ್ಷನ್​ಗೆ ಮುನ್ನ ಆರ್​​ಸಿಬಿಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ.

ಮೂವರಿಗೆ ಮಾತ್ರ ಮಣೆ

ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ರೀಟೈನ್​ ಲಿಸ್ಟ್​​ ರಿಲೀಸ್​ ಮಾಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ. ಆರ್​​ಸಿಬಿ ತಂಡ ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ.

ಆರ್​​​ಸಿಬಿ ಮತ್ತೆ ಸೇರುವ ಮಾತಾಡಿದ ಮ್ಯಾಕ್ಸ್​ವೆಲ್​​?

ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್​​ ಗ್ಲೆನ್​ ಮ್ಯಾಕ್ಸ್​ವೆಲ್​​ ಗೇಟ್​ಪಾಸ್​​ ನೀಡಿದೆ. ಈ ಬಗ್ಗೆ ಮ್ಯಾಕ್ಸಿ ಮಾತಾಡಿದ್ದಾರೆ. ಆರ್​​ಸಿಬಿಯಿಂದ ನನ್ನ ಕೈ ಬಿಡುವ ಬಗ್ಗೆ ಹೆಡ್​ ಕೋಚ್​​ ಆ್ಯಂಡಿ ಫ್ಲವರ್​ ಮತ್ತು ಡೈರೆಕ್ಟರ್​​​ ಬೊಬಾತ್​ ಮಾಹಿತಿ ನೀಡಿದ್ರು. ಏನಕ್ಕೆ ರೀಟೈನ್​ ಮಾಡಿಕೊಳ್ಳುತ್ತಿಲ್ಲ ಅನ್ನೋದು ಬಿಡಿಸಿ ಹೇಳಿದ್ರು. ಆರ್​​ಸಿಬಿ ಜತೆಗೆ ನನ್ನ ಜರ್ನಿ ಅದ್ಭುತವಾಗಿತ್ತು. ನನ್ನ ಮತ್ತು ಆರ್​ಸಿಬಿ ಜರ್ನಿ ಮುಗಿದಿದೆ ಎಂದು ನಾನು ಹೇಳಲ್ಲ. ಈ ಬಾರಿ ಬಲಿಷ್ಠ ತಂಡ ಕಟ್ಟಲು ಆರ್‌ಸಿಬಿ ಸಂಕಲ್ಪ ತೊಟ್ಟಿದೆ. ವಿಶೇಷವಾಗಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದೆ. ಆದರೆ ಆರ್​ಸಿಬಿ ಜೊತೆಗಿನ ನನ್ನ ಪ್ರಯಾಣ ಇನ್ನೂ ಮುಗಿದಿಲ್ಲ. ಮತ್ತೆ ತಂಡಕ್ಕೆ ಮರಳಲಿದ್ದೇನೆ ಎಂದರು ಮ್ಯಾಕ್ಸ್​ವೆಲ್​​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment