newsfirstkannada.com

ಆರ್​​​ಸಿಬಿಗೆ ಬಂತು ಹಾರ್ಸ್​​ ಪವರ್​​.. ಸ್ಟಾರ್​ ಪ್ಲೇಯರ್​​​ ಸ್ಟ್ರಾಂಗ್​​​ ಕಮ್​ಬ್ಯಾಕ್​​!

Share :

Published May 22, 2024 at 5:49pm

    ಇಂದು ಆರ್​​ಸಿಬಿ, ರಾಜಸ್ತಾನ್​ ರಾಯಲ್ಸ್​ ಮಧ್ಯೆ ಎಲಿಮಿನಿನೇಟರ್​​​​​​ ಪಂದ್ಯ

    ಎಲಿಮಿನೇಟರ್​​​​ ಪಂದ್ಯಕ್ಕೆ ಆರ್​​ಸಿಬಿಗೆ ತಂಡಕ್ಕೆ ಬಂತು ಹಾರ್ಸ್​​ ಪವರ್​​..!

    ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇಯರ್​ ಸ್ಟ್ರಾಂಗ್​ ಕಮ್​ಬ್ಯಾಕ್​​​

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​​ ವಿರುದ್ಧ 27 ರನ್​ಗಳಿಂದ ಗೆದ್ದು ಬೀಗುವ ಮೂಲಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇ ಆಫ್​ಗೆ ಗ್ರ್ಯಾಂಡ್​ ಎಂಟ್ರಿ ನೀಡಿದೆ. ಈ ಪಂದ್ಯದಲ್ಲೇ ಆರ್​​​ಸಿಬಿ ತಂಡದ ಸ್ಟಾರ್​ ಪ್ಲೇಯರ್​ ಮ್ಯಾಡ್​ ಮ್ಯಾಕ್ಸಿ ಫಾರ್ಮ್​ಗೆ ಬಂದಿದ್ದಾರೆ.

ಯೆಸ್​​, ಆರ್​​​ಸಿಬಿ ಗೆಲುವಿನಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್​​ ಪಾತ್ರ ಬಹಳಷ್ಟಿದೆ. ಚೆನ್ನೈ ವಿರುದ್ಧ ರೋಚಕ ಪಂದ್ಯದಲ್ಲಿ ಕೊನೆಯಲ್ಲಿ ಬಂದ ಮ್ಯಾಕ್ಸಿ ಕೇವಲ 5 ಬಾಲ್​ನಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 16 ರನ್​ ಚಚ್ಚಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 320ಕ್ಕೂ ಹೆಚ್ಚಿತ್ತು. ಜತೆಗೆ ಮ್ಯಾಕ್ಸಿ ಬೌಲಿಂಗ್​ನಲ್ಲೂ ಕಮಾಲ್​ ಮಾಡಿದ್ರು. ಕೇವಲ 4 ಓವರ್​ನಲ್ಲಿ 25 ರನ್​ ಕೊಟ್ಟು 1 ಪ್ರಮುಖ ವಿಕೆಟ್​ ತೆಗೆದ್ರು. ಒಂದು ರನೌಟ್​ ಕೂಡ ಮಾಡಿದ್ರು. ಹಾಗಾಗಿ ಆರ್​​ಸಿಬಿ ಚೆನ್ನೈ ವಿರುದ್ಧ ಗೆಲ್ಲಲು ಸಹಾಯವಾಯ್ತು.

ಇನ್ನು, ಫಾರ್ಮ್​​ಗೆ ಬಂದ ಬಳಿಕ ಮ್ಯಾಕ್ಸಿ ಮಾತಾಡಿದ್ದಾರೆ. ಆರ್​​​ಸಿಬಿಗೆ ಇದು ಗೆಲ್ಲಲೇಬೇಕಾದ ಪಂದ್ಯ ಆಗಿತ್ತು. ನಾವು ಮೈದಾನಕ್ಕೆ ಇಳಿಯೋ ಮುನ್ನವೇ ಚರ್ಚೆ ನಡೆಸಿದ್ದೆವು. ನಾವು ನಿರೀಕ್ಷೆ ಮೀರಿ ಗೆದ್ದಿದ್ದೇವೆ. ನನ್ನ ಸಣ್ಣ ಕೊಡುಗೆ ಬಗ್ಗೆ ನನಗೆ ಹೆಮ್ಮೆ ಇದೆ. ಇದೇ ಫಾರ್ಮ್​​ ಮುಂದಿನ ಪಂದ್ಯದಲ್ಲೂ ಮುಂದುವರಿಸುತ್ತೇನೆ ಎಂದರು.

ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಎಲಿಮಿನೇಟರ್​​​ ಪಂದ್ಯದಲ್ಲಿ ಆರ್​​ಸಿಬಿ, ರಾಜಸ್ಥಾನ್​ ರಾಯಲ್ಸ್​ ಮುಖಾಮುಖಿ ಆಗಲಿವೆ. ಈ ಪಂದ್ಯದಲ್ಲಿ ಆರ್​​​ಸಿಬಿ ಪರ ಮ್ಯಾಕ್ಸಿ ಮಿಂಚೋ ಮುನ್ಸೂಚನೆ ನೀಡಿದ್ದಾರೆ. ಹಾಗಾಗಿ ರಾಜಸ್ಥಾನ್​​​ ಮ್ಯಾಕ್ಸಿ ಸಿಡಿಯೋ ಮುನ್ನವೇ ಹೇಗೆ ಔಟ್​ ಮಾಡಬೇಕು? ಅನ್ನೋ ಪ್ಲಾನ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಆರ್​​​ಸಿಬಿಗೆ ಮತ್ತೊಂದು ಆಘಾತ; ಇಂದು ಕ್ಯಾಮೆರಾನ್​ ಗ್ರೀನ್​ ಆಡೋದು ಡೌಟ್​; ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​​ಸಿಬಿಗೆ ಬಂತು ಹಾರ್ಸ್​​ ಪವರ್​​.. ಸ್ಟಾರ್​ ಪ್ಲೇಯರ್​​​ ಸ್ಟ್ರಾಂಗ್​​​ ಕಮ್​ಬ್ಯಾಕ್​​!

https://newsfirstlive.com/wp-content/uploads/2024/04/Maxwell_RCB123.jpg

Load More