ಐಪಿಎಲ್​ನಿಂದಲೇ ವಿಲ್​ ಜಾಕ್ಸ್​ ಔಟ್​​.. RCB ತಂಡಕ್ಕೆ ಸ್ಟಾರ್​​​​ ಆಲ್​ರೌಂಡರ್​​ ಎಂಟ್ರಿ!

author-image
Ganesh Nachikethu
ಮೊದಲ 15 ಬಾಲ್​ನಲ್ಲಿ ನರ್ವಸ್ ಆಗಿಬಿಟ್ಟಿದ್ದೆ -ಸ್ಫೋಟಕ ಶತಕದ ಹಿಂದೆ ಕೊಹ್ಲಿ ಮ್ಯಾಜಿಕ್ ತಿಳಿಸಿದ ಜಾಕ್ಸ್​..!
Advertisment
  • ಪ್ಲೇ ಆಫ್​ಗೆ ಮುನ್ನವೇ ಆರ್​​ಸಿಬಿ ತಂಡಕ್ಕೆ ಕೈ ಕೊಟ್ಟ ಸ್ಟಾರ್​ ಪ್ಲೇಯರ್​​
  • ಆರ್​​ಸಿಬಿ ತೊರೆದು ಇಂಗ್ಲೆಂಡ್​ ಸೇರಿಕೊಳ್ಳಲು ಹೊರಟ ವಿಲ್​ ಜಾಕ್ಸ್​​!
  • ಸದ್ಯ ವಿಲ್​​ ಜಾಕ್ಸ್​ ಬದಲಿಗೆ ಆರ್​​ಸಿಬಿ ಪರ ಆಡುವುದು ಯಾರು ಗೊತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​ ಮುಕ್ತಾಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಗ್​ ಶಾಕ್​ ಕಾದಿದೆ. ಪ್ಲೇ ಆಫ್​​ ರೇಸ್​ನಲ್ಲಿರೋ ಆರ್​​ಸಿಬಿ ತಂಡಕ್ಕೆ ಇಂಗ್ಲೆಂಡ್​ ಆಟಗಾರರು ಆಘಾತ ನೀಡಿದ್ದಾರೆ. ಆರ್​​​ಸಿಬಿ ತಂಡಕ್ಕೆ ಕೈ ಕೊಟ್ಟು ದೇಶಕ್ಕಾಗಿ ಆಡಲು ವಿಲ್ ಜಾಕ್ಸ್​​ ಹಾಗೂ ರೀಸ್ ಟೋಪ್ಲಿ ಇಂಗ್ಲೆಂಡ್​ಗೆ ತೆರಳಿದ್ದಾರೆ.

ಕಳೆದ 8 ಪಂದ್ಯಗಳಲ್ಲಿ ಆರ್​​​ಸಿಬಿ ತಂಡದ ಪ್ಲೇಯಿಂಗ್​​ ಎಲೆವೆನ್​​ ಭಾಗವಾಗಿ ವಿಲ್​ ಜಾಕ್ಸ್​​ ಇದ್ದರು. ಆರ್​​​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ಸ್ಟಾರ್​ ಆಲ್​ರೌಂಡರ್​​ ವಹಿಸಿದ್ದರು. ಈಗ ವಿಲ್​ ಜಾಕ್ಸ್​​ ಅಲಭ್ಯತೆ ಆರ್​​​ಸಿಬಿ ತಂಡದ ಮೇಲೆ ಪ್ರಭಾವ ಬೀರಲಿದ್ದು, ಇವರ ಬದಲಿಗೆ ಯಾರನ್ನು ಕಣಕ್ಕಿಳಿಸಬಹುದು ಎಂಬ ಪ್ರಶ್ನೆ ಕಾಡುತ್ತಿದೆ.

ಈ ಪ್ರಶ್ನೆಗೆ ಸದ್ಯದ ಉತ್ತರ ಗ್ಲೆನ್ ಮ್ಯಾಕ್ಸ್​ವೆಲ್. ಕಳಪೆ ಫಾರ್ಮ್​ನಲ್ಲಿರೋ ಕಾರಣ ಮ್ಯಾಕ್ಸ್​ವೆಲ್ ಕಳೆದ ಕೆಲವು ಪಂದ್ಯಗಳಲ್ಲಿ ಆರ್​​ಸಿಬಿ ಪರ ಆಡಲಿಲ್ಲ. ಈಗ ಜಾಕ್ಸ್​ ಅಲಭ್ಯರಾದ ಪರಿಣಾಮ ಮ್ಯಾಕ್ಸ್​ವೆಲ್ ಅವರನ್ನೇ ಆರ್​​ಸಿಬಿಗೆ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವಿರುದ್ಧ ಮ್ಯಾಕ್ಸಿ ಕಣಕ್ಕಿಳಿಯಲಿದ್ದಾರೆ. ಎಂ. ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಈ ನಿರ್ಣಾಯಕ ಪಂದ್ಯದಲ್ಲಿ ಮ್ಯಾಕ್ಸಿ ಆಡಲೇಬೇಕು. ಈ ಮೂಲಕ ಹಳೆ ಖದರ್​ಗೆ ಮರಳಲೇಬೇಕು ಎಂಬುದು ಎಲ್ಲರ ಆಸೆ.

ಇದನ್ನೂ ಓದಿ: RCB ಮುಂದಿನ ಕ್ಯಾಪ್ಟನ್​ ಯಾರು? ನಾಯಕತ್ವಕ್ಕಾಗಿ ಕೆ.ಎಲ್​ ರಾಹುಲ್​​, ಕೊಹ್ಲಿ ಆಪ್ತನ ನಡುವೆ ಪೈಪೋಟಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment