/newsfirstlive-kannada/media/post_attachments/wp-content/uploads/2024/08/RCB-Team_IPL-2025.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್​ ಲೀಗ್​ಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ವರ್ಷದ ಕೊನೆಯಲ್ಲಿ ನಡೆಯಲಿರೋ ಐಪಿಎಲ್​​ ಮೆಗಾ ಆಕ್ಷನ್​​ನಲ್ಲಿ ಸ್ಟಾರ್​​ ಆಟಗಾರರನ್ನೇ ಖರೀದಿಸಲು ಎಲ್ಲಾ ತಂಡಗಳು ಮುಂದಾಗಿವೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫಾಫ್​​ ಡುಪ್ಲೆಸಿಸ್​ ಅವರನ್ನು ರಿಲೀಸ್​ ಮಾಡಲು ಮುಂದಾಗಿದ್ದು, ಹೊಸ ನಾಯಕನ ಹುಡುಕಾಟದಲ್ಲಿದೆ.
ಇನ್ನು, ಲಕ್ನೋ ಸೂಪರ್​​ ಜೈಂಟ್ಸ್​ ತಂಡ ತೊರೆದು ಕೆ.ಎಲ್​ ರಾಹುಲ್​​ ಆರ್​​ಸಿಬಿ ಕ್ಯಾಪ್ಟನ್​ ಆಗೋ ಸಾಧ್ಯತೆ ಇದೆ. ಜತೆಗೆ ಒಂದು ವೇಳೆ ಕೆ.ಎಲ್​ ರಾಹುಲ್​ ಸಿಗದಿದ್ರೆ ಸ್ಟಾರ್​ ಆಲ್​ರೌಂಡರ್​​​​ ಹಾರ್ದಿಕ್​ ಪಾಂಡ್ಯ ಅವರಿಗೂ ಮಣೆ ಹಾಕುವ ಸಾಧ್ಯತೆ ಇದೆ. ಇದರ ಮಧ್ಯೆ ಮತ್ತೋರ್ವ ಸ್ಟಾರ್​ ಆಟಗಾರನ ಹೆಸರು ಆರ್​​ಸಿಬಿ ಕ್ಯಾಪ್ಟನ್​ ರೇಸ್​ನಲ್ಲಿ ಇದೆ.
ಏಡನ್ ಮಾರ್ಕ್ರಮ್ ಆರ್​​ಸಿಬಿ ತಂಡಕ್ಕೆ..?
ಸೌತ್​ ಆಫ್ರಿಕಾದ ಸ್ಟಾರ್​​ ಆಟಗಾರ ಏಡನ್ ಮಾರ್ಕ್ರಮ್ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಪ್ರತಿನಿಧಿಸುತ್ತಾರೆ. ಮುಂದಿನ ಸೀಸನ್​​ಗೆ ಸನ್​ರೈಸರ್ಸ್​​ ಹೈದರಾಬಾದ್​​ ತಂಡವು ಏಡನ್ ಮಾರ್ಕ್ರಮ್ ಅವರನ್ನು ರಿಲೀಸ್​ ಮಾಡಲಿದ್ದಾರೆ. ಹಾಗಾಗಿ ಏಡನ್ ಮಾರ್ಕ್ರಮ್ ಅವರನ್ನು ಖರೀದಿ ಮಾಡಲು ಆರ್​​ಸಿಬಿ ಪ್ಲಾನ್​ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
Overseas Captaincy Options
Aiden Markram To RCB ?#IPL2025pic.twitter.com/mZCpfzp1eQ
— RCBIANS OFFICIAL (@RcbianOfficial)
Overseas Captaincy Options
Aiden Markram To RCB ?#IPL2025pic.twitter.com/mZCpfzp1eQ— RCBIANS OFFICIAL (@RcbianOfficial) August 11, 2024
">August 11, 2024
ಯಾರು ಈ ಏಡನ್ ಮಾರ್ಕ್ರಮ್..?
ಕಳೆದ ಸೀಸನ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸಾಕಷ್ಟು ಪ್ರಮುಖ ಬೆಳವಣಿಗೆಗಳು ನಡೆದವು. 2023ರ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹೈದರಾಬಾದ್​ ತಂಡವನ್ನು ಮಾರ್ಕ್ರಮ್ ಮುನ್ನಡೆಸಿದ್ದರು. ಬಳಿಕ 2024ರ ಐಪಿಎಲ್​ನಲ್ಲಿ ಏಡನ್ ಮಾರ್ಕ್ರಮ್​ಗೆ ಕೊಕ್​ ನೀಡಿ ಪ್ಯಾಟ್​ ಕಮಿನ್ಸ್​ಗೆ ಪಟ್ಟ ಕಟ್ಟಲಾಯ್ತು. 2023ರ ಆವೃತ್ತಿಯಲ್ಲಿ ಮಾರ್ಕ್ರಮ್ ನೇತೃತ್ವದ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಮಾರ್ಕ್ರಮ್ 2024ರ ಐಪಿಎಲ್ ಅವಧಿಯಲ್ಲಿ ಕೇವಲ 199 ರನ್‌ಗಳನ್ನು ಪೇರಿಸಿದ್ರು. SRH ಸೀಸನ್​​ ಕೊನೆ ಪಂದ್ಯಗಳಲ್ಲಿ ಏಡನ್ ಮಾರ್ಕ್ರಮ್ ಅವರನ್ನು ಹೊರಗಿಟ್ಟಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us