ರೋಹಿತ್​​, ಹಾರ್ದಿಕ್​ ಅಲ್ಲ.. ಭಾರತ ವಿಶ್ವಕಪ್​ ಗೆಲುವಿಗೆ ಈ ಆಟಗಾರ ಕಾರಣ ಎಂದ ಕೊಹ್ಲಿ!

author-image
Ganesh Nachikethu
Updated On
ಶ್ರೀಲಂಕಾ ಪ್ರವಾಸ.. ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಕೊಟ್ಟ ವಿರಾಟ್​ ಕೊಹ್ಲಿ!
Advertisment
  • ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಟೀಮ್​ ಇಂಡಿಯಾ
  • ಮುಂಬೈನ ವಾಂಖೆಡೆಯಲ್ಲಿ ಟಿ20 ವಿಶ್ವಕಪ್​ ವಿಜಯೋತ್ಸವದ ಆಚರಣೆ..!
  • ವಿಶ್ವಕಪ್​ ವಿಜಯೋತ್ಸವದಲ್ಲಿ ಕ್ರಿಕೆಟ್​ ದಿಗ್ಗಜ ವಿರಾಟ್​​ ಕೊಹ್ಲಿ ಹೇಳಿದ್ದೇನು?

ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರರ ಪೈಕಿ ಒಬ್ಬರು. ಭಾರತ ತಂಡ 2024ರ ಟಿ20 ವಿಶ್ವಕಪ್​​ ಗೆದ್ದ ಬಳಿಕ ವಿರಾಟ್​ ಕೊಹ್ಲಿ ಬಹಳ ಖುಷಿಯಾಗಿದ್ದಾರೆ. ಇತ್ತೀಚೆಗೆ ಮುಂಬೈ ವಾಂಖೆಡೆ ಸ್ಟೇಡಿಯಮ್​​ನಲ್ಲಿ ನಡೆದ ಟಿ20 ವಿಶ್ವಕಪ್​ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತಾಡಿದ ಕೊಹ್ಲಿ ತಮ್ಮ ನೆಚ್ಚಿನ ಆಟಗಾರ ಯಾರು ಎಂದು ತಿಳಿಸಿದ್ದಾರೆ.


style="display:block; text-align:center;"
data-ad-layout="in-article"
data-ad-format="fluid"
data-ad-client="ca-pub-5961669566246184"
data-ad-slot="1082554635">

ಟೀಮ್​ ಇಂಡಿಯಾ ಯಾವಾಗ ಸಂಕಷ್ಟಕ್ಕೆ ಸಿಲುಕಿದ್ರೂ ಈತ ಇದ್ದೇ ಇರುತ್ತಾನೆ. ಪ್ರತಿ ಬಾರಿ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮನ್ನು ಪದೇ ಪದೇ ಗೆಲ್ಲಿಸೋ ಭರವಸೆ ಮೂಡಿಸಿದ್ದು ಬೂಮ್ರಾ. ಮತ್ತೆ ಮತ್ತೆ ಈ ಟಿ20 ವಿಶ್ವಕಪ್‌ ಗೆಲುವಿನತ್ತ ಕರೆತಂದ ವ್ಯಕ್ತಿ ಆತ. ಬುಮ್ರಾ ಎಂಟನೇ ಅದ್ಭುತ. ಅವರು ನಮ್ಮ ದೇಶಕ್ಕಾಗಿ ಆಡುತ್ತಿರುವುದು ನಮ್ಮ ಅದೃಷ್ಟ ಎಂದರು.

publive-image

ಫೈನಲ್‌ ಪಂದ್ಯದ ಕೊನೆ 5 ಓವರ್​ಗಳಲ್ಲಿ ಬುಮ್ರಾ ಬೌಲಿಂಗ್​ ಮಾತ್ರ ಬಹಳ ವಿಶೇಷ. 2-3 ಬೌಲ್​ ಮಾಡಿ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ರು. ನಾವು ಎಲ್ಲರೂ ಬುಮ್ರಾ ಅವರನ್ನು ಅಭಿನಂದಿಸೋಣ. ಭಾರತದ ವಿಶ್ವಕಪ್​ ಗೆಲುವಿಗೆ ಅವರೇ ಕಾರಣ ಎಂದರು ಕೊಹ್ಲಿ.

ಸುಮಾರು 17 ವರ್ಷಗಳ ತಪ್ಪಸ್ಸಿನ ಬಳಿಕ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಟೀಮ್​ ಇಂಡಿಯಾ ತವರಿಗೆ ವಾಪಸ್​ ಆಗಿದೆ. ಭಾರತಕ್ಕೆ ಬಂದಿಳಿದ ಟೀಮ್​ ಇಂಡಿಯಾ ಆಟಗಾರರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಸಿಕ್ಕಿದೆ. ಬಳಿಕ ಮುಂಬೈನ ವಾಂಖೆಡೆ ಸ್ಟೇಡಿಯಮ್​​ನಲ್ಲಿ ಟಿ20 ವಿಶ್ವಕಪ್​ ವಿಜಯೋತ್ಸವ ಆಚರಿಸಲಾಯ್ತು. ಈ ಸಂದರ್ಭದಲ್ಲಿ ಸಹಸ್ರಾರು ಅಭಿಮಾನಿಗಳು ಟೀಮ್‌ ಇಂಡಿಯಾ ಆಟಗಾರರನ್ನು ನೋಡಿ ಕಣ್ತುಂಬಿಕೊಂಡರು.

ಇದನ್ನೂ ಓದಿ:‘ವಿಶ್ವಕಪ್​ ಗೆಲ್ಲಲು ಈ ಆಟಗಾರ ಕಾರಣ’- ಲಕ್ಷಾಂತರ ಜನರ ಮುಂದೆ ರೋಹಿತ್​​ ಹೊಗಳಿದ್ದು ಯಾರನ್ನ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment