ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​ ಶಮಿ ಖರೀದಿಸಿದ ಹೈದರಾಬಾದ್​; ಅಬ್ಬಬ್ಬಾ! ಎಷ್ಟು ಕೋಟಿಗೆ ಸೇಲಾದ್ರು ಗೊತ್ತಾ?

author-image
Ganesh Nachikethu
Updated On
’ಜೈ ಶ್ರೀರಾಮ್​ ಎಂದು ಸಾವಿರ ಸಲ ಹೇಳಲಿ; ಅದರಲ್ಲಿ ತಪ್ಪೇನು?’- ಭಾರತೀಯರ ಮನಗೆದ್ದ ಶಮಿ
Advertisment
  • 2025ರ ಇಂಡಿಯನ್ ಪ್ರೀಮಿಯರ್ ಲೀಗ್​ ಮೆಗಾ ಹರಾಜು!
  • ಬರೋಬ್ಬರಿ 10 ಕೋಟಿಗೆ ಶಮಿ​ ಖರೀದಿಸಿದ ಹೈದರಾಬಾದ್​
  • ಹೈದರಾಬಾದ್​ ತಂಡದ ಪಾಲಾದ ಬೌಲರ್​ ಮೊಹಮ್ಮದ್ ಶಮಿ

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜು ನಡೆಯುತ್ತಿದೆ. ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ ಅವರನ್ನು ಬರೋಬ್ಬರಿ 10 ಕೋಟಿ ನೀಡಿ ಸನ್​ರೈಸರ್ಸ್​ ಹೈದರಾಬಾದ್​ ಖರೀದಿ ಮಾಡಿದೆ.

ಕಳೆದ ವರ್ಷ ಒಂದು ವರ್ಷದಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಮೊಹಮ್ಮದ್ ಶಮಿ ಅವರನ್ನು ಗುಜರಾತ್ ಟೈಟನ್ಸ್‌ ಇತ್ತೀಚೆಗೆ ರಿಲೀಸ್​ ಮಾಡಿತ್ತು. ಗಾಯದಿಂದ ಚೇತರಿಸಿಕೊಂಡ ಶಮಿ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ರು. ಇವರು ಹೊಸ ಚೆಂಡಿನ ಬೌಲಿಂಗ್‌ ಮಾಡುವುದಕ್ಕೆ ಹೆಸರುವಾಸಿ. ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಡೆತ್ ಓವರ್‌ಗಳಲ್ಲಿ ಭಾರತಕ್ಕೆ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಭರ್ಜರಿ ಪೈಪೋಟಿ

2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಶಮಿಗಾಗಿ ಎಲ್ಲಾ ತಂಡಗಳು ಪೈಪೋಟಿಗೆ ಇಳಿದವು. ಕೆಕೆಆರ್​​, ಸನ್​ರೈಸರ್ಸ್​, ಚೆನ್ನೈ ಮಧ್ಯೆ ಭರ್ಜರಿ ಪೈಪೋಟಿ ನಡೆಯಿತು. ಕೊನೆಗೂ ಶಮಿ ಹೈದರಾಬಾದ್​ ಪಾಲಾದ್ರು.

ಇದನ್ನೂ ಓದಿ: ಆರ್​​ಸಿಬಿ ಕನಸು ಭಗ್ನ; 27 ಕೋಟಿಗೆ ಲಕ್ನೋ ತಂಡದ ಪಾಲಾದ ರಿಷಬ್​ ಪಂತ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment