/newsfirstlive-kannada/media/post_attachments/wp-content/uploads/2024/08/Ishan-Kishan-Century.jpg)
ಸದ್ಯದಲ್ಲೇ ದುಲೀಪ್ ಟ್ರೋಫಿ ನಡೆಯಲಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ರೆಸ್ಟ್​ನಲ್ಲಿದ್ದು, ಮತ್ತೆಲ್ಲರೂ ದುಲೀಪ್ ಟ್ರೋಫಿ ಆಡಲಿದ್ದಾರೆ. ನಾನು ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಇಶಾನ್ ಕಿಶನ್ ದುಲೀಪ್ ಟ್ರೋಫಿ ಆಡುತ್ತಿದ್ದಾರೆ. ಕಮ್​ಬ್ಯಾಕ್ ಮಾಡಬೇಕಾದ್ರೆ ಆತ ರೂಲ್ಸ್​ ಫಾಲೋ ಮಾಡಬೇಕು. ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಸ್ಟಾರ್​ ಕ್ರಿಕೆಟರ್​​ ಇಶಾನ್​ ಕಿಶನ್​ಗೆ ವಾರ್ನಿಂಗ್​ ನೀಡಿದ್ರು. ಇದಕ್ಕೆ ಇಶಾನ್​ ಕಿಶನ್​ ತಮ್ಮ ಬ್ಯಾಟ್​ ಮೂಲಕವೇ ಉತ್ತರ ನೀಡಿದ್ದಾರೆ.
ಟೀಮ್ ಇಂಡಿಯಾಗೆ ಮತ್ತೆ ಕಮ್​ಬ್ಯಾಕ್​ ಮಾಡಲು ದೇಶೀಯ ಟೂರ್ನಿ ಗತಿ ಅನ್ನೋದು ಇಶಾನ್​ ಕಿಶನ್​ಗೆ ಅರಿವಾಗಿದೆ. ಹಾಗಾಗಿ ಇಶಾನ್​ ಅವರೇ ಬುಚ್ಚಿ ಬಾಬು ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಬುಚ್ಚಿ ಬಾಬು ಟೂರ್ನಿಯ ಮೊದಲ ಪಂದ್ಯದಲ್ಲೇ ಎಡಗೈ ಬ್ಯಾಟ್ಸ್‌ಮನ್ ಸ್ಫೋಟಕ ಶತಕ ಸಿಡಿಸಿದ್ದಾರೆ. ಮಧ್ಯಪ್ರದೇಶದ ವಿರುದ್ಧ 2 ಇನ್ನಿಂಗ್ಸ್​ಗಳಲ್ಲಿ 12 ಸಿಕ್ಸರ್​, 6 ಬೌಂಡರಿಗಳ ಸಹಿತ 155 ರನ್​ ಗಳಿಸಿ ಗೆಲುವಿನ ರೂವಾರಿಯಾದರು.
ದಕ್ಷಿಣ ಆಫ್ರಿಕಾ ಸರಣಿ ನಂತರ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಕ್ರಿಕೆಟ್​ನಿಂದ ಹೊರಗುಳಿದಿದ್ದರು. ಅಂದಿನ ಕೋಚ್​​ ಆಗಿದ್ದ ರಾಹುಲ್​ ದ್ರಾವಿಡ್​ ಅವರು ಇಶಾನ್ ಕಿಶನ್‌ಗೆ ದೇಶೀಯ ಟೂರ್ನಿಗಳಲ್ಲಿ ಆಡುವಂತೆ ಸಲಹೆ ನೀಡಿದ್ದರು. ಆದರೆ ಅಂದು ಇಶಾನ್​​ ಕಿಶನ್​ ದ್ರಾವಿಡ್​ ಅವರ ಸಲಹೆಯನ್ನು ಪರಿಗಣಿಸಿರಲಿಲ್ಲ. ಈಗ ತನ್ನ ತಪ್ಪನ್ನು ತಿದ್ದುಕೊಂಡಿರೋ ಇಶಾನ್​ ಮತ್ತೆ ದೇಶೀಯ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವುದು ಇಶಾನ್ ಕಿಶನ್ ಕನಸು. ಮುಂದಿನ ತಿಂಗಳಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ, ನ್ಯೂಜಿಲೆಂಡ್, ಮತ್ತು ಆಸ್ಟ್ರೇಲಿಯಾ ವಿರುದ್ಧ ಒಟ್ಟು 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಇಶಾನ್ ಕಿಶನ್ ರೆಡ್ ಬಾಲ್ ಕ್ರಿಕೆಟ್ ಆಡಲು ತಯಾರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ