Advertisment

ದ್ರಾವಿಡ್-ಗಂಭೀರ್ ಬೇರೆ ಬೇರೆ, ವ್ಯತ್ಯಾಸ ಇದೆ -ದೊಡ್ಡ ವಿಚಾರ ಬಹಿರಂಗ ಮಾಡಿದ ಪಂತ್

author-image
Ganesh
Updated On
ದ್ರಾವಿಡ್-ಗಂಭೀರ್ ಬೇರೆ ಬೇರೆ, ವ್ಯತ್ಯಾಸ ಇದೆ -ದೊಡ್ಡ ವಿಚಾರ ಬಹಿರಂಗ ಮಾಡಿದ ಪಂತ್
Advertisment
  • ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್
  • ದ್ರಾವಿಡ್​​ರಿಂದ ತೆರವಾಗಿದ್ದ ಸ್ಥಾನಕ್ಕೆ ಗೌತಮ್ ಗಂಭೀರ್ ಆಯ್ಕೆ
  • ದ್ರಾವಿಡ್ ಮತ್ತು ಗಂಭೀರ್ ಬಗ್ಗೆ ರಿಷಬ್ ಪಂತ್ ಹೇಳಿದ್ದೇನು?

ರಾಹುಲ್ ದ್ರಾವಿಡ್ 2021ರಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅವಧಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ದ್ರಾವಿಡ್ ನೇತೃತ್ವದಲ್ಲಿ ಭಾರತ 2024ರ ಟಿ20 ವಿಶ್ವಕಪ್ ಮತ್ತು 2023ರ ಏಷ್ಯಾಕಪ್ ಗೆದ್ದಿತ್ತು. ಇದಲ್ಲದೇ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ODI ವಿಶ್ವಕಪ್‌ಗಳ ಫೈನಲ್‌ ಪ್ರವೇಶ ಮಾಡಿತ್ತು.

Advertisment

ಇದೀಗ ದ್ರಾವಿಡ್ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಭಾರತದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಬಂದಿದ್ದಾರೆ. ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರಿಬ್ಬರ ಕೋಚಿಂಗ್‌ನಲ್ಲಿ ಆಡಿದ ಅನುಭವ ಇದೆ. ಇದೀಗ ಅವರು ದ್ರಾವಿಡ್ ಮತ್ತು ಗಂಭೀರ್ ಕೋಚಿಂಗ್ ಶೈಲಿಯಲ್ಲಿನ ವ್ಯತ್ಯಾಸವನ್ನು ಬಹಿರಂಗ ಮಾಡಿದ್ದಾರೆ.

ಇದನ್ನೂ ಓದಿ:ಜಯ್ ಶಾ ಸ್ಥಾನದ ಮೇಲೆ ಕಣ್ಣಿಟ್ಟ ಮೂವರು; ಆ ಪಟ್ಟಿಯಲ್ಲಿ ಓರ್ವ 3 ಪಂದ್ಯಗಳನ್ನು ಆಡಿದ ಕ್ರಿಕೆಟಿಗ

publive-image

ಗಂಭೀರ್, ದ್ರಾವಿಡ್ ನಡುವಿನ ವ್ಯತ್ಯಾಸ
ಮಾಜಿ ಮುಖ್ಯ ಕೋಚ್ ಮೃದು ಸ್ವಭಾವದ ವ್ಯಕ್ತಿಯಾಗಿದ್ದರು. ಅವರು ತಂಡವನ್ನು ಹೆಚ್ಚು ಬ್ಯಾಲೆನ್ಸ್ ಆಗಿ ನೋಡಿಕೊಳ್ಳುತ್ತಿದ್ದರು. ಎಲ್ಲರನ್ನೂ ಒಂದೇ ರೀತಿ ಟ್ರೀಟ್ ಮಾಡಿದ್ದಾರೆ. ಆದರೆ ಗಂಭೀರ್ ಹೆಚ್ಚು ಆಕ್ರಮಣಕಾರಿ. ಸಕ್ಸಸ್ ವಿಚಾರದಲ್ಲಿ ತುಂಬಾ ಏಕಪಕ್ಷೀಯರಾಗಿದ್ದಾರೆ. ಏನೇ ಆಗಲಿ ಗೆಲ್ಲಲೇ ಬೇಕು ಅನ್ನೋದು ಅವರ ಟಾರ್ಗೆಟ್. ಇಬ್ಬರಲ್ಲೂ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳಿವೆ ಎಂದಿದ್ದಾರೆ.

Advertisment

ಇದನ್ನೂ ಓದಿ:ದ್ರಾವಿಡ್ ಎಂಟ್ರಿ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್​ ಶೇಕ್; ತಂಡ ತೊರೆಯಲು ಮುಂದಾದ ದಿಗ್ಗಜ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment