ನಿಮಗೇನಾದ್ರೂ ನಟಿಸೋ ಆಸೆ ಇದ್ಯಾ? ಪುಟ್ಟಕ್ಕನ ಮಕ್ಕಳು ನಿರ್ದೇಶಕರಿಂದ ವಿಶೇಷ ಆಹ್ವಾನ!

author-image
Veena Gangani
Updated On
ನಿಮಗೇನಾದ್ರೂ ನಟಿಸೋ ಆಸೆ ಇದ್ಯಾ? ಪುಟ್ಟಕ್ಕನ ಮಕ್ಕಳು ನಿರ್ದೇಶಕರಿಂದ ವಿಶೇಷ ಆಹ್ವಾನ!
Advertisment
  • ಸೀರಿಯಲ್​ನಲ್ಲಿ ಮಿಂಚಬೇಕು ಎಂಬ ಆಸೆ ನಿಮಗೆ ಇದ್ಯಾ?
  • ನಿರ್ದೇಶಕ ಆರೂರು ಜಗದೀಶ್​ರಿಂದ ಮಹತ್ವದ ಪೋಸ್ಟ್​
  • ಯುವ ಕಲಾವಿದರಿಗಾಗಿ ನಿರ್ದೇಶಕರಿಂದ ಸುವರ್ಣಾವಕಾಶ

ಈಗಿನ ಯುವ ಪೀಳಿಗೆಯ ಯುವಕ, ಯುವತಿಯರು ಅತಿ ಹೆಚ್ಚಾಗಿ ರೀಲ್ಸ್​, ಡ್ಯಾನ್ಸ್, ನಾಟಕದಲ್ಲಿ ಅತಿ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ದೊಡ್ಡ ಪರದೆ ಮೇಲೆ ಸ್ಟಾರ್​ ಆಗಿ ಮಿಂಚಬೇಕು ಅಂತ ಹಂಬಲಿಸುತ್ತಿದ್ದಾರೆ. ಹೀಗಾಗಿ ಕರೆದ ಕಡೆಗಳೆಲ್ಲಾ ಆಡಿಷನ್ ಕೊಟ್ಟು ಸೆಲೆಕ್ಟ್​ ಆಗದೇ ಬೇಸರಿಂದ ಮನೆಗೆ ಹೋಗುತ್ತಾರೆ.

ಇದನ್ನೂ ಓದಿ: ತಮಿಳು ನಟ ವಿಶಾಲ್​ಗೆ ಕಾಡಿದ ಅನಾರೋಗ್ಯ.. ತುಳುನಾಡಿನ ದೈವದ ಮೊರೆ ಹೋದ ಸ್ಟಾರ್

publive-image

ಆದ್ರೆ, ಇದೀಗ ನಿಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸುವುದಕ್ಕೆ ಸ್ಟಾರ್​ ನಿರ್ದೇಶಕರೊಬ್ಬರು ಒಂದು ಚಾನ್ಸ್ ಕೊಡುತ್ತಿದ್ದಾರೆ. ಹೌದು, ಕಲೆ ಎಂಬುದು ಯಾರ ಸ್ವತ್ತು ಅಲ್ಲ. ಆ ದೇವರು ಎಲ್ಲರಲ್ಲಿಯೂ ಒಂದಲ್ಲಾ ಒಂದು ರೀತಿಯ ಕಲೆ ಕೊಟ್ಟಿರುತ್ತಾನೆ. ಅದು ಅವಕಾಶ ಸಿಕ್ಕಾಗ ಗಿಟ್ಟಿಸಿಕೊಳ್ಳಬೇಕು. ಈಗ  ನಿಮ್ಮಲ್ಲಿಯೂ ನಟನೆಯ ಕಲೆ ಇದ್ದಿದ್ದೇ ಆದರೆ​ ಅವಕಾಶ ಇಲ್ಲ ಅಂತ ಬೇಜಾರು ಆಗಬೇಡಿ. ನಿಮಗಾಗಿಯೇ ಖ್ಯಾತ ನಿರ್ದೇಶಕ ಆರೂರು ಜಗದೀಶ್ ಅವಕಾಶ ನೀಡುತ್ತಿದ್ದಾರೆ​.

publive-image

ಪುಟ್ಟಕ್ಕನ ಮಕ್ಕಳು, ಜೊತೆ ಜೊತೆಯಲಿ, ಗುಪ್ತಗಾಮಿನಿ, ಶುಭ ವಿವಾಹ, ಜೋಡಿ ಹಕ್ಕಿ, ಭೂಮಿಗೆ ಬಂದ ಭಗವಂತ ಸೇರಿದಂತೆ ಹಲವಾರು ಸೂಪರ್​ ಹಿಟ್​​ ಧಾರಾವಾಹಿಗಳನ್ನು ನೀಡಿರುವ ಆರೂರು ಜಗದೀಶ್​ ಅವರು ಇದೀಗ ಹೊಸ ಧಾರಾವಾಹಿಯನ್ನು ನಿರ್ದೇಶಿಸಲು ರೆಡಿಯಾಗಿದ್ದಾರೆ. ಅದಕ್ಕಾಗಿ ಹೊಸ ನಟ-ನಟಿಯರು, ಪೋಷಕರ ನಟರಿಗೆ ಆಹ್ವಾನ ಕೊಟ್ಟಿದ್ದಾರೆ. ಈ ಸಂಬಂಧ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಹೊಸ ಸೀರಿಯಲ್​ಗೆ ನಾಯಕ ಹಾಗೂ ನಾಯಕಿ ಮತ್ತು ಪೋಷಕ ಪಾತ್ರಕ್ಕೆ ನಟರು ಬೇಕಾಗಿರುವುದಾಗಿ ಬರೆದುಕೊಂಡಿದ್ದಾರೆ. ಶುದ್ಧ ಕನ್ನಡ ಮಾತನಾಡುವ ಹೊಸ ಮತ್ತು ಅನುಭವಿ ಕಲಾವಿದರಿಗೆ ಅದರಲ್ಲಿಯೂ ರಂಗಭೂಮಿಯಲ್ಲಿ ಪಳಗಿದ್ದವರಿಗೆ ಆದ್ಯತೆ ಎಂದು ಅವರು ಒತ್ತಿ ಹೇಳಿದ್ದಾರೆ.

ನಾಯಕಿಗೆ 18 ರಿಂದ 24 ವರ್ಷ ಆಗಿಬೇಕು. ನಾಯಕನಿಗೆ 18 ರಿಂದ 30 ವರ್ಷ ಆಗಿರಬೇಕು. ನೋಡಲು ಸುಂದರವಾಗಿರಬೇಕು. ಚಂದದ ಮೈ ಕಟ್ಟು ಹೊಂದಿರಬೇಕು. ಪೋಷಕ ಪಾತ್ರಗಳಿಗೆ 16 ರಿಂದ 60 ವರ್ಷ ವಯಸ್ಸಾಗಿರಬೇಕು. ಯುವ ಮತ್ತು ಅನುಭವಿ ರಂಗಭೂಮಿ ಕಲಾವಿದರಿಗೆ ಅದ್ಯತೆ ಇದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ತಿಂಗಳು 28. ಅರ್ಜಿಯನ್ನು ಸಂಪೂರ್ಣ ಸ್ವವಿವರದ ಜೊತೆಗೆ [email protected]ಗೆ ಸಲ್ಲಿಸಬೇಕು ಅಂತ ಡಿಟೇಲ್ಸ್ ಹಂಚಿಕೊಂಡಿದ್ದಾರೆ. ನಿಮಗೆ ಏನದ್ರೂ ಆಸಕ್ತಿ ಇದಲ್ಲೇ ಈ ಮೇಲೆ ಕಾಣಿಸುವ ಈಮೇಲ್​ಗೆ ನಿಮ್ಮ ಎಲ್ಲ ವಿವರಗಳನ್ನು ಕಳುಹಿಸಿ ನಿಮ್ಮ ಕನಸ್ಸನ್ನು ನನಸು ಮಾಡಿಕೊಳ್ಳಿ.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment