ನಟ ದರ್ಶನ್ ‘die hard fans’ಗೆ ಸ್ಟಾರ್ ಡೈರೆಕ್ಟರ್‌ ರಾಮ್‌ಗೋಪಾಲ್ ವರ್ಮಾ ಎಚ್ಚರಿಕೆ; ಏನಂದ್ರು?

author-image
admin
Updated On
ನಟ ದರ್ಶನ್ ‘die hard fans’ಗೆ ಸ್ಟಾರ್ ಡೈರೆಕ್ಟರ್‌ ರಾಮ್‌ಗೋಪಾಲ್ ವರ್ಮಾ ಎಚ್ಚರಿಕೆ; ಏನಂದ್ರು?
Advertisment
  • ದರ್ಶನ್ ಕೇಸ್‌ನಲ್ಲಿ ಚಿತ್ರಕಥೆಗೂ ಮುಂಚೆಯೇ ಸಿನಿಮಾ ರಿಲೀಸ್‌!
  • ಸದಾ ವಿವಾದಗಳಿಂದಲೇ ಸುದ್ದಿಯಾಗುವ ಸ್ಟಾರ್ ಡೈರೆಕ್ಟರ್ ಇವರು
  • ಅಭಿಮಾನಿಗಳಿಗೆ ರಾಮ್ ಗೋಪಾಲ್ ವರ್ಮಾರಿಂದ ಖಡಕ್‌ ಮಾತು

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಹಾಗೂ ಮತ್ತವರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದ ಕ್ರೂರತೆ ತೀವ್ರ ಸಂಚಲನ ಸೃಷ್ಟಿಸಿದ್ದು, ತನಿಖೆಯಲ್ಲಿ ಸಾಕಷ್ಟು ಕ್ರೌರ್ಯ ಚಟುವಟಿಕೆಗಳು ಬೆಳಕಿಗೆ ಬಂದಿದೆ. ದರ್ಶನ್ ಅವರ ಅರೆಸ್ಟ್ ಪ್ರಕರಣದಲ್ಲಿ ಹಲವಾರು ಸೆಲೆಬ್ರಿಟಿಗಳು ಶಾಕಿಂಗ್ ಪ್ರತಿಕ್ರಿಯೆಗಳನ್ನ ನೀಡಿದ್ದಾರೆ.

ಇದನ್ನೂ ಓದಿ:‘ವಿಜಯಲಕ್ಷ್ಮಿಗೆ ಕೊಟ್ಟಿದ್ದ ಸೇಮ್ ಕಾರು ನಂಗೂ ಬೇಕು’- ಹಠ ಹಿಡಿದಿದ್ದ ಪವಿತ್ರಾಗೆ ದರ್ಶನ್ ಕೊಟ್ಟ ಗಿಫ್ಟ್ ಏನು?  

ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಅವರು ದರ್ಶನ್ ಅವರ ಕೇಸ್‌ಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದು ಸಂಚಲನ ಸೃಷ್ಟಿಸಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿರುವ ರಾಮ್ ಗೋಪಾಲ್ ವರ್ಮಾ ಅವರು, ಒಬ್ಬ ಸಿನಿಮಾ ತಯಾರಕ ಚಿತ್ರಕಥೆ ಫೈನಲ್ ಆದ ಬಳಿಕ ಶೂಟಿಂಗ್ ಅನ್ನು ಆರಂಭಿಸುತ್ತಾನೆ. ಆದರೆ ಎಷ್ಟೇ ಸಂದರ್ಭದಲ್ಲಿ ಚಿತ್ರಕಥೆ ಇನ್ನೂ ನಡೆಯುತ್ತಿರುವಾಗಲೇ ನಿರ್ಮಾಪಕ ಶೂಟಿಂಗ್ ಶುರು ಮಾಡುತ್ತಾನೆ. ಆದರೆ ದರ್ಶನ್ ಅವರ ಕೇಸ್‌ನಲ್ಲಿ ಚಿತ್ರಕಥೆ ಬರೆಯಲು ಆರಂಭಿಸುತ್ತಿದ್ದಂತೆ ಸಿನಿಮಾವೇ ಬಿಡುಗಡೆ ಆಗಿದೆ ಎಂದು ಹೇಳಿದ್ದಾರೆ.


">June 13, 2024

ಇದರ ಜೊತೆಗೆ ದರ್ಶನ್ ಅವರ ಅಭಿಮಾನಿಗಳಿಗೂ ರಾಮ್ ಗೋಪಾಲ್ ವರ್ಮಾ ಅವರು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಒಬ್ಬ ಸ್ಟಾರ್‌ ನಟ ತನ್ನ ಅಪ್ಪಟ ಅಭಿಮಾನಿಯನ್ನು ಕೊಲ್ಲಲ್ಲು ಮತ್ತೊಬ್ಬ ಅಭಿಮಾನಿಯನ್ನು ಬಳಸಿಕೊಂಡಿದ್ದಾರೆ. ತನ್ನ ಖಾಸಗಿ ಜೀವನದಲ್ಲಿ ಪ್ರವೇಶಿಸಿದ ಅನ್ನೋ ಕಾರಣಕ್ಕೆ ಈ ಕೊಲೆಯಾಗಿದೆ. ಇದು ದೊಡ್ಡ, ದೊಡ್ಡ ಸ್ಟಾರ್‌ಗಳನ್ನು ಅಭಿಮಾನಿಗಳು ಆರಾಧಿಸುವುದಕ್ಕೆ ಸಾಕ್ಷಿಯಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರು ಹೇಗೆ ಜೀವನ ಸಾಗಿಸುತ್ತಾರೆ ಅನ್ನೋದನ್ನ ನೋಡುತ್ತಾ ಇರುತ್ತಾರೆ. ಸ್ಟಾರ್‌ಗಳಿಂದ ಆಗುವ ಸೈಡ್ ಎಫೆಕ್ಟ್ ಇದೇ ಸಾಕ್ಷಿ ಎಂದು ರಾಮ್ ಗೋಪಾಲ್ ವರ್ಮಾ ತಿಳಿಸಿದ್ದಾರೆ.

ಈ ಖಡಕ್ ಮಾತಿನ ಮೂಲಕ ರಾಮ್ ಗೋಪಾಲ್ ವರ್ಮಾ ಅವರು ಸ್ಟಾರ್‌ ನಟರು ತಮ್ಮ ವೈಯಕ್ತಿಕ ವಿಷಯಗಳಿಗೆ ಅಭಿಮಾನಿಗಳನ್ನ ಬಳಸುವುದು ತಪ್ಪು. ಅಭಿಮಾನಿಗಳು ಸ್ಟಾರ್‌ಗಳನ್ನ ಹೆಚ್ಚು ಆರಾಧಿಸಿ, ವಿಜೃಂಭಿಸುವುದರಿಂದ ಈ ರೀತಿಯ ಘಟನೆಗಳು ನಡೆದಿರೋದು ದುರದೃಷ್ಟಕರ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment