ಶಿವಣ್ಣನಿಗೆ ಸತತ 6 ಗಂಟೆಗಳ ಕಾಲ ಸರ್ಜರಿ.. ಅಭಿಮಾನಿಗಳಿಗೆ ಗೀತಕ್ಕ ಹೇಳಿದ್ದೇನು?

author-image
Veena Gangani
Updated On
ಶಿವಣ್ಣನಿಗೆ ಸತತ 6 ಗಂಟೆಗಳ ಕಾಲ ಸರ್ಜರಿ.. ಅಭಿಮಾನಿಗಳಿಗೆ ಗೀತಕ್ಕ ಹೇಳಿದ್ದೇನು?
Advertisment
  • ಶಿವಣ್ಣ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಡಬಲ್ ಸಂಭ್ರಮ
  • ನಟ ಶಿವರಾಜ್ ಕುಮಾರ್‌ ಸರ್ಜರಿ ಯಶಸ್ವಿ ಬಳಿಕ ICUಗೆ ಶಿಫ್ಟ್
  • ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಗೀತಕ್ಕ

ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ಶಿವರಾಜ್​ಕುಮಾರ್ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದರು. ಶಿವಣ್ಣ ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು, ಕುಟುಂಬಸ್ಥರು ವಿಶೇಷ ಹೋಮ, ಹವನ, ಪೂಜೆಯನ್ನು ನಡೆಸಿ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದರು.

ಇದನ್ನೂ ಓದಿ: ಅತಿಥಿ ಮಂಜು ಕಾಟಕ್ಕೆ ಕಣ್ಣೀರಿಟ್ಟ ಮ್ಯಾನೇಜರ್ ಭವ್ಯ ಗೌಡ; ರಿವೇಂಜ್ ಇದೆ ಎಂದು ರಜತ್ ವಾರ್ನಿಂಗ್

ಇದೀಗ ಕುಟುಂಬಸ್ಥರ ಹಾಗೂ ಸಾವಿರಾರು ಅಭಿಮಾನಿಗಳು ಪ್ರಾರ್ಥನೆ ಫಲಿಸಿದೆ. ನಟ ಶಿವರಾಜ್ ಕುಮಾರ್ ಶಸ್ತ್ರಕಿಚಿಕಿತ್ಸೆ ಯಶಸ್ವಿಯಾಗಿದೆ. ಪಿತ್ತ ಕೋಶ ಶಸ್ತ್ರಕಿಕಿತ್ಸೆಗಾಗಿ ಶಿವರಾಜ್ ಕುಮಾರ್ ಅಮೆರಿಕದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದರು. ಸತತ 6 ಗಂಟೆಗಳ ಕಾಲ ನಡೆದ ಸರ್ಜರಿ ಯಶಸ್ವಿಯಾಗಿದೆ. ಡಾ.ಮುರುಗೇಶ್ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿ ಸರ್ಜರಿ ಮಾಡಿದೆ. ಶಿವಣ್ಣ ಶಸ್ತ್ರಚಿಕಿತ್ಸೆ ಹಾಗೂ ಆರೋಗ್ಯದ ಕುರಿತು ಪತ್ನಿ ಗೀತಾ ಶಿವರಾಜ್ ಕುಮಾರ್ ಮಾಹಿತಿ ನೀಡಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ಶಿವಣ್ಣ ಆರೋಗ್ಯವಾಗಿದ್ದಾರೆ ಎಂದಿದ್ದಾರೆ.

publive-image

ವಿಡಿಯೋ ಮಾಡುವ ಮೂಲಕ ಅಭಿಮಾನಿಗಳಿಗೆ ಧನವ್ಯಾದ ತಿಳಿಸಿದ್ದಾರೆ ಗೀತಾ ಶಿವರಾಜ್ ಕುಮಾರ್. ಆ ವಿಡಿಯೋದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು, ಡಾ. ಮುರುಗೇಶ್ ಹಾಗೂ ವೈದ್ಯರ ತಂಡದ ಆಪರೇಶನ್ ಯಶಸ್ವಿಯಾಗಿದೆ. ಅಭಿಮಾನಿ ದೇವರುಗಳ ಹಾಗೆ ನಮಗೆ ವೈದ್ಯರು ಕೂಡ ದೇವರಾಗಿದ್ದಾರೆ. ಶಿವರಾಜ್ ಕುಮಾರ್ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಇದೀಗ ಐಸಿಯುಗೆ ಸ್ಥಳಾಂತರಿಸಲಾಗಿದೆ. ಅಭಿಮಾನಿಗಳು ಶಿವಣ್ಣ ಅವರಿಗೆ ಆರ್ಶಿವಾದ ಮಾಡಿದ್ದೀರಿ ಅದಕ್ಕೆ ಶಿವಣ್ಣ ಆರೋಗ್ಯವಾಗಿದ್ದಾರೆ. ಸದ್ಯದಲ್ಲೇ ಶಿವಣ್ಣ ಅವರು ನಿಮ್ಮೊಂದಿಗೆ ಮಾತಾಡಲಿದ್ದಾರೆ. ಈಗ ಅವರು ವಿಶ್ರಾಂತಿಗೆ ಜಾರಿದ್ದಾರೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.

publive-image

ಇನ್ನೂ, ಡಾ. ಶಿವರಾಜ್​ಕುಮಾರ್ ಶಸ್ತ್ರಚಿಕಿತ್ಸೆ ಆಪರೇಷನ್‌ಗೂ ಮುಂಚೆ ಅಭಿಮಾನಿಗಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಅಮೆರಿಕಾದಿಂದ ಅಭಿಮಾನಿಗಳ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿರೋ ಶಿವಣ್ಣ, ಆದಷ್ಟು ಬೇಗ ಹುಷಾರಾಗಿ ಬರೋದಾಗಿ ತಿಳಿಸಿದ್ದರು. ಶಿವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿರೋ ಹುಡುಗರ ಜೊತೆಗೂ ಶಿವಣ್ಣ ವಿಡಿಯೋ ಕಾಲ್‌ನಲ್ಲಿ ಇಂದು ಮಾತನಾಡಿದ್ದಾರೆ. ಸದ್ಯ ಶಿವಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದ ವಿಚಾರ ಕೇಳಿ ಅಭಿಮಾನಿಗಳು ಫುಲ್ ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment