/newsfirstlive-kannada/media/post_attachments/wp-content/uploads/2024/08/RCB-Team_IPL-2025.jpg)
ಟೀಮ್​ ಇಂಡಿಯಾದ ವಿರುದ್ಧ ನಡೆಯುತ್ತಿರೋ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್​​ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​​​ ರಚಿನ್ ರವೀಂದ್ರ ದಾಖಲೆ ಬರೆದಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಈ ಮಹತ್ವದ ಪಂದ್ಯದಲ್ಲಿ ಕರ್ನಾಟಕದ ಮೂಲದ ರಚಿನ್​ ರವೀಂದ್ರ ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ ಅಬ್ಬರಿಸಿದ್ರು.
ಸ್ಫೋಟಕ ಶತಕ ಸಿಡಿಸಿದ ಕನ್ನಡಿಗ!
ರಚಿನ್ ರವೀಂದ್ರ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಸಿಡಿಸಿದ್ದಾರೆ. ಇನ್ನಿಂಗ್ಸ್​ ಉದ್ಧಕ್ಕೂ ಟೀಮ್​ ಇಂಡಿಯಾ ಬೌಲರ್​ಗಳ ಬೆಂಡೆತ್ತಿದ ರಚಿನ್​​ ಅವರು, ಕೇವಲ 124 ಎಸೆತಗಳಲ್ಲಿ ಈ ಸಾಧನೆ ಮಾಡಿದ್ರು. ಬರೋಬ್ಬರಿ 11 ಬೌಂಡರಿ ಮತ್ತು 2 ಸಿಕ್ಸರ್ ಚಚ್ಚಿದ್ರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ 24 ವರ್ಷದ ಯುವ ಆಟಗಾರನ 2ನೇ ಶತಕವಾಗಿದೆ.
ಇನ್ನು, ಭರ್ಜರಿ ಶತಕ ಸಿಡಿಸುವ ಮೂಲಕ 12 ವರ್ಷಗಳ ದಾಖಲೆಯನ್ನು ರಚಿನ್​ ರವೀಂದ್ರ ಮುರಿದಿದ್ದಾರೆ. ಕಳೆದ 12 ವರ್ಷಗಳಿಂದ ಭಾರತದ ನೆಲದಲ್ಲಿ ನ್ಯೂಜಿಲೆಂಡ್​ ತಂಡದ ಯಾವುದೇ ಆಟಗಾರ ಮೂರಂಕಿ ದಾಟಿರಲಿಲ್ಲ. ಭಾರತದಲ್ಲಿ 2012ರಲ್ಲಿ ನ್ಯೂಜಿಲೆಂಡ್ ಪರ ಕೊನೆಯ ಶತಕ ಸಿಡಿಸಿದ ದಾಖಲೆ ರಾಸ್ ಟೇಲರ್ ಹೆಸರಲ್ಲಿತ್ತು.
/newsfirstlive-kannada/media/post_attachments/wp-content/uploads/2024/10/Rachin_Ravindra.jpg)
ಆರ್​​​ಸಿಬಿಗೆ ಎಂಟ್ರಿ ಕೊಡಲಿರೋ ರಚಿನ್​
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಶುರುವಾಗಲು ಇನ್ನೇನು 5 ತಿಂಗಳು ಮಾತ್ರ ಬಾಕಿ ಇದೆ. ವರ್ಷದ ಕೊನೆಗೆ ನಡೆಯಲಿರೋ ಮೆಗಾ ಹರಾಜು ಪ್ರಕ್ರಿಯೆಗೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಭರ್ಜರಿ ತಯಾರಿ ನಡೆಸುತ್ತಿದೆ. 6 ಆಟಗಾರರನ್ನು ರೀಟೈನ್​​ ಮಾಡಿಕೊಳ್ಳೋ ಅವಕಾಶ ಇದ್ರೂ ಚೆನ್ನೈ ರಚಿನ್​ ರವೀಂದ್ರ ಅವರನ್ನು ಉಳಿಸಿಕೊಳ್ಳೋದು ಡೌಟ್​. ಹಾಗಾಗಿ ಆರ್​ಸಿಬಿ ತಂಡ ರಚಿನ್​ ರವೀಂದ್ರ ಅವರನ್ನು ಖರೀದಿ ಮಾಡೋದು ಪಕ್ಕಾ ಆಗಿದೆ. ಕಳೆದ ಸೀಸನ್​ನಲ್ಲಿ ಮಾಡಿದ ತಪ್ಪನ್ನು ಈ ಬಾರಿ ಆರ್​​ಸಿಬಿ ಮಾಡಲು ರೆಡಿಯಿಲ್ಲ ಎಂದು ತಿಳಿದು ಬಂದಿದೆ.
ಯಾರು ರಚಿನ್​ ರವೀಂದ್ರ?
ಬೆಂಗಳೂರು ಮೂಲದವರು ರಚಿನ್ ರವೀಂದ್ರ. ಇವರು ಸದ್ಯ ನ್ಯೂಜಿಲೆಂಡ್‌ನಲ್ಲಿ ವಾಸವಾಗಿದ್ದಾರೆ. ಇವರ ತಂದೆ ಕೆಲಸಕ್ಕಾಗಿ ನ್ಯೂಜಿಲೆಂಡ್‌ಗೆ ಹೋಗಿದ್ದರು. ಈಗ ಅಲ್ಲೇ ಸೆಟಲ್​ ಆಗಿದ್ದು, ಮಗ ರಚಿನ್ ರವೀಂದ್ರ ಅವರನ್ನು ಕ್ರಿಕೆಟರ್​ ಆಗಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us