/newsfirstlive-kannada/media/post_attachments/wp-content/uploads/2024/05/Team-India_m.jpg)
ಇದೇ ತಿಂಗಳು 19ನೇ ತಾರೀಕಿನಿಂದ ನಡೆಯಲಿರೋ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಇನ್ನೇನು ಬಲಿಷ್ಠ ಟೀಮ್ ಇಂಡಿಯಾ ಪ್ರಕಟವಾಗಬೇಕಿದೆ. ಬಿಸಿಸಿಐ ಸೆಲೆಕ್ಷನ್ ಕಮಿಟಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲಿದೆ. ದುಲೀಪ್ ಟ್ರೋಫಿಯಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರಿಗೆ ಬಿಸಿಸಿಐ ಸೆಲೆಕ್ಷನ್ ಕಮಿಟಿ ಮಣೆ ಹಾಕುವ ಸಾಧ್ಯತೆ ಇದೆ.
ಬಿಸಿಸಿಐ ಕದ ತಟ್ಟಿದ ಆರ್ಸಿಬಿ ಮಾಜಿ ಪ್ಲೇಯರ್!
ದುಲೀಪ್ ಟ್ರೋಫಿಯಲ್ಲಿ ಭಾರತ ಡಿ ತಂಡದ ಪರ ಬ್ಯಾಟ್ ಬೀಸಿದ್ದ ದೇವದತ್ ಪಡಿಕ್ಕಲ್ ಮೊದಲ ಇನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ರು. ಆದರೆ, 2ನೇ ಇನಿಂಗ್ಸ್‌ನಲ್ಲಿ ದೇವದತ್ ಸಖತ್ ಬ್ಯಾಟಿಂಗ್ ಮಾಡಿದ್ರು.
ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಆಟ
ಶ್ರೇಯಸ್ ಅಯ್ಯರ್ 2ನೇ ಇನಿಂಗ್ಸ್‌ನಲ್ಲಿ 44 ಬಾಲ್ನಲ್ಲಿ 9 ಬೌಂಡರಿ, 1 ಸಿಕ್ಸರ್ ಸಮೇತ 54 ರನ್ ಸಿಡಿಸಿದರು. ಇವರಿಗೆ ಸಾಥ್ ನೀಡಿದ ದೇವದತ್ ಪಡಿಕ್ಕಲ್ 70 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 56 ರನ್ ಬಾರಿಸಿದರು.
ಮೊದಲ ಇನಿಂಗ್ಸ್‌ನಲ್ಲಿ ರನ್ ಕಲೆ ಹಾಕುವಲ್ಲಿ ಫೇಲ್ಯೂರ್ ಆಗಿದ್ದ ದೇವದತ್ ಟೀಕೆಗೆ ಗುರಿಯಾಗಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ತನ್ನನ್ನು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಪರಿಗಣಿಸಿ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟಿದ್ದಾರೆ.
ಇದನ್ನೂ ಓದಿ:ಫ್ಯಾನ್ಸ್ಗೆ ಭರ್ಜರಿ ಗುಡ್ನ್ಯೂಸ್; ಆರ್ಸಿಬಿ ತಂಡಕ್ಕೆ ಕೆ.ಎಲ್ ರಾಹುಲ್ ಎಂಟ್ರಿಗೆ ಸ್ಫೋಟಕ ಟ್ವಿಸ್ಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ