/newsfirstlive-kannada/media/post_attachments/wp-content/uploads/2024/06/TEAM_INDIA-1.jpg)
ಇತ್ತೀಚೆಗೆ ನಡೆದ 2ನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಸೋಲು ಕಂಡಿದೆ. ಮೊದಲ ಪಂದ್ಯದಿಂದ 61 ರನ್ಗಳಿಂದ ರೋಚಕ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ 2ನೇ ಟಿ20 ಮ್ಯಾಚ್ ಸೋಲಿಗೆ ಕಾರಣ ಬ್ಯಾಟಿಂಗ್ ವೈಫಲ್ಯ.
ಇನ್ನು, ಇಂದು ನಡೆಯಲಿರೋ 3ನೇ ಟಿ20 ಪಂದ್ಯ ಗೆದ್ದು ಹೇಗಾದ್ರೂ ಟಿ20 ಸರಣಿ ವಶಪಡಿಸಿಕೊಳ್ಳೋ ಯೋಚನೆಯಲ್ಲಿ ಟೀಮ್ ಇಂಡಿಯಾ ಇದೆ. ಅದಕ್ಕಾಗಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಭರ್ಜರಿ ಸರ್ಕಸ್ ಮಾಡುತ್ತಿದ್ದಾರೆ. ಮುಂದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ ಎಲೆವೆನ್ನಲ್ಲಿ ಮೇಜರ್ ಸರ್ಜರಿ ಮಾಡಲಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲರ್ ಆವೇಶ್ ಖಾನ್ಗೆ ಕೊಕ್ ನೀಡುವ ಸಾಧ್ಯತೆ ಇದೆ.
ಕನ್ನಡಿಗನಿಗೆ ಸಿಗುತ್ತಾ ಚಾನ್ಸ್?
2ನೇ ಪಂದ್ಯದ ಪ್ಲೇಯಿಂಗ್ ಎಲೆವೆನ್ನಲ್ಲಿ ಅವಕಾಶ ಪಡೆದಿದ್ದ ಆವೇಶ್ ಖಾನ್ ಬೌಲಿಂಗ್ನಲ್ಲಿ ರನ್ ಬಿಟ್ಟುಕೊಡುವ ಮೂಲಕ ಭಾರೀ ದುಬಾರಿ ಎನಿಸಿಕೊಂಡರು. ಇವರು ಸುಮಾರು 23 ರನ್ ನೀಡಿ ಕೈ ಸುಟ್ಟುಕೊಂಡಿದ್ದರು. ಹೀಗಾಗಿ ಇವರ ಜಾಗದಲ್ಲಿ ವಿಜಯ್ ಕುಮಾರ್ ವೈಶಾಕ್ಗೆ ಅವಕಾಶ ಸಿಗಬಹುದು. ಈ ಪಂದ್ಯದಲ್ಲಿ ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯ್ ಮೂವರು ಸ್ಪಿನ್ ಬೌಲರ್‌ಗಳನ್ನು ಭಾರತ ತಂಡ ಕಣಕ್ಕೆ ಇಳಿಸಬಹುದು.
ಅಭಿಷೇಕ್ಗೂ ಗೇಟ್ಪಾಸ್
ಟೀಮ್ ಇಂಡಿಯಾದ ಸ್ಟಾರ್ ಯುವ ಬ್ಯಾಟರ್ ಅಭಿಷೇಕ್ ಶರ್ಮಾ. ಇವರು ರನ್ ಕಲೆ ಹಾಕುವಲ್ಲಿ ಫೇಲ್ಯೂರ್ ಆಗುತ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾಗೆ ಅಭಿಷೇಕ್ ಶರ್ಮಾ ಅವರದ್ದು ದೊಡ್ಡ ಚಿಂತೆಯಾಗಿದೆ. ಕಾರಣ ಇವರು ಇದುವರೆಗೆ ಆಡಿರೋ 9 ಇನ್ನಿಂಗ್ಸ್ನಲ್ಲಿ 1 ಶತಕ ಸಿಡಿಸಿದ್ರು. ಉಳಿದ 7 ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಹೈಎಸ್ಟ್ ಸ್ಕೋರ್ ಕೇವಲ 16 ರನ್. 2ನೇ ಪಂದ್ಯದಲ್ಲೂ ಅಭಿಷೇಕ್ ಕೇವಲ 4 ರನ್ಗೆ ವಿಕೆಟ್ ಒಪ್ಪಿಸಿದ್ರು. ಅಭಿಷೇಕ್ ಅವರಿಗೆ ತಂಡದಿಂದ ಕೊಕ್ ನೀಡಬಹುದು.
ಟೀಮ್ ಇಂಡಿಯಾ ಪ್ಲೇಯಿಂಗ್ ಎಲೆವೆನ್ ಹೀಗಿದೆ!
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಯಶ್ ದಯಾಳ್, ವಿಜಯ್ ಕುಮಾರ್ ವೈಶಾಖ್.
ಇದನ್ನೂ ಓದಿ: ಮಹತ್ವದ ಪಂದ್ಯಕ್ಕೆ ಟೀಮ್ ಇಂಡಿಯಾಗೆ RCB ಸ್ಟಾರ್ ಎಂಟ್ರಿ; ತಂಡಕ್ಕೆ ಬಂತು ಆನೆಬಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ