/newsfirstlive-kannada/media/post_attachments/wp-content/uploads/2025/06/Star-link-Internet-India.jpg)
ನವದೆಹಲಿ: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕಂಪನಿಗೆ ಭಾರತದಲ್ಲಿ ಲೈಸೆನ್ಸ್ ದಕ್ಕಿದೆ. ಶೀಘ್ರವೇ ಭಾರತದಲ್ಲಿ ಸ್ಟಾರ್ ಲಿಂಕ್ ಕೆಲಸ ಮಾಡೋದು ಖಚಿತವಾಗಿದೆ. ಅದರ ಬೆಲೆ ಎಷ್ಟು? ಸ್ಟಾರ್ ಲಿಂಕ್ ಇಂಟರ್ನೆಟ್‌ನ ಸ್ಪೀಡ್ ಎಷ್ಟು ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ಕೊನೆಗೂ ಭಾರತದಲ್ಲಿ ಲೈಸೆನ್ಸ್ ದಕ್ಕಿಸಿಕೊಂಡ ಸ್ಟಾರ್ಲಿಂಕ್
ಸ್ಯಾಟಲೈಟ್ ಇಂಟರ್ನೆಟ್ ವೇಗ ಎಷ್ಟು? ರೇಟ್ ಏನಿರಲಿದೆ?
ಸ್ಟಾರ್ ಲಿಂಕ್. ಎಲಾನ್ ಮಸ್ಕ್ ಒಡೆತನದ ಸ್ಪೆಸ್ ಎಕ್ಸ್ ಕಂಪನಿಯ ಸಿಸ್ಟರ್ ಕಂಪನಿ. ಬರೋಬ್ಬರಿ 110 ದೇಶಗಳಲ್ಲಿ ಆ್ಯಕ್ಟಿವ್ ಆಗಿರುವ ಇದೇ ಸ್ಟಾರ್ ಲಿಂಕ್ ಶೀಘ್ರದಲ್ಲೇ ಭಾರತಕ್ಕೂ ಕಾಲಿಡ್ತಿದೆ. ಯಾಕಂದ್ರೆ, ಭಾರತ ಸರ್ಕಾರ ಕೊನೆಗೂ ಸ್ಟಾರ್ ಲಿಂಕ್ ಕಂಪನಿಗೆ ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸ್ಯಾಟಲೈಟ್ ಲೈಸೆನ್ಸ್ ನೀಡಿದೆ.
‘ಸ್ಟಾರ್’ ಲಿಂಕ್ ‘ಸ್ಪೀಡ್’
ಒನ್ ವೆಬ್ ಹಾಗೂ ರಿಲಯೆನ್ಸ್ ಜಿಯೋ ಬಿಟ್ರೆ ಟೆಲಿಕಾಂ ಲೈಸೆನ್ಸ್ ಪಡೆದ 3ನೇ ಕಂಪನಿ ಈ ಸ್ಟಾರ್ ಲಿಂಕ್. ಸ್ಟಾರ್ ಲಿಂಕ್ ಡೌನ್ಲೋಡ್ ಸ್ಪೀಡ್ ರೇಂಜ್. 25 ರಿಂದ 220 Mbps ವೇಗ ಹೊಂದಿದೆ. ಅಂದ್ರೆ, ಸಿಕ್ಕಾಪಟ್ಟೆ ಹೈ ಸ್ಪೀಡ್. ಇದು ಸ್ಯಾಟಲೈಟ್ನಿಂದ ಇಂಟರ್ನೆಟ್ ಒದಗಿಸೋದ್ರಿಂದ, ಮಳೆ ಇರ್ಲಿ. ಚಳಿ ಇರ್ಲಿ. ಹಿಮಪಾತವೇ ಆಗಲಿ ಇಂಟರ್ನೆಟ್ ಸ್ಪೀಡ್ನಲ್ಲಿ ಯಾವುದೇ ಬದಲಾವಣೆ ಆಗಲ್ಲ.
ಸ್ಟಾರ್ ಲಿಂಕ್ ರೇಟ್ ಎಷ್ಟು ಅನ್ನೋದು ತುಂಬಾ ಮುಖ್ಯ. ಮಾಸಿಕ ₹840 ರೂಪಾಯಿ ಅಂದ್ರೆ 10 ಡಾಲರ್ಗೆ ಅನ್ಲಿಮಿಟೆಡ್ ಡೇಟಾ ಕೊಡ್ತಿದೆ. ಈ ದರ ಮುಂದಿನ ದಿನಗಳಲ್ಲಿ ಜಾಸ್ತಿಯಾಗೋ ಎಲ್ಲಾ ಸಾಧ್ಯತೆ ಇದೆ.
ಹೈ ಸ್ಪೀಡ್ ಸ್ಟಾರ್ ಲಿಂಕ್ ಹೇಗ್ ಕೆಲಸ ಮಾಡುತ್ತೆ ಅನ್ನೋದಕ್ಕೂ ಉತ್ತರ ಇಲ್ಲಿದೆ ನೋಡಿ.
ಏನಿದು ಸ್ಟಾರ್ ಲಿಂಕ್?
ಸ್ಟಾರ್ ಲಿಂಕ್ ಕಂಪನಿ. ಸ್ಯಾಟಲೈಟ್ ಮೂಲಕ ಹೈಸ್ಪೀಡ್ ಇಂಟರ್ನೆಟ್ ಒದಗಿಸುವ ಕಂಪನಿ. ಈಗಾಗಲೇ ಕಕ್ಷೆಯಲ್ಲಿ ಆ್ಯಕ್ಟಿವ್ ಆಗಿ ಇರೋ ಫೈಬರ್ ಆಪ್ಟಿಕ್ ಅಥವಾ ಸೆಲ್ಯುಲಾರ್ ನೆಟ್‌ವರ್ಕ್ ಸೇವೆಗಳು ಭಾರತದ ಅನೇಕ ಪ್ರದೇಶಗಳಿಗೆ ಲಭ್ಯ ಇರಲ್ಲ. ಹೀಗಾಗಿ, ಇಂತಹ ಪ್ರದೇಶಗಳಲ್ಲಿ ಸ್ಟಾರ್‌ಲಿಂಕ್‌ನ ಟೆಕ್ನಾಲಜಿ, ವರ್ಕ್ ಆಗುತ್ತೆ. ಇಂಟರ್ನೆಟ್ ಸಿಗದೇ ಜಾಗಗಳಲ್ಲೂ ಈ ಸ್ಟಾರ್ಲಿಂಕ್, ನಾನ್ ಸ್ಟಾಪ್, ಹೈ ಸ್ಪೀಡ್ ಇಂಟರ್ನೆಟ್ ಸೇವೆ ಕೊಡುತ್ತೆ ಅನ್ನೋದು ಗಮನಾರ್ಹ.
ಇದನ್ನೂ ಓದಿ: ದುಬೈನ ಶೇಖ್ಗಳಿಗೆ ರಾಜಸ್ಥಾನಿ ಮೇಕೆಗಳು ಅಂದ್ರೆ ಪಂಚಪ್ರಾಣ.. ಲಕ್ಷ ಲಕ್ಷ ಕೊಟ್ಟು ಖರೀದಿಸೋದು ಯಾಕೆ..?
ಅರ್ಜಿ ಸಲ್ಲಿಸಿದ ಮೂರ್ನಾಲ್ಕು ವರ್ಷಗಳ ಬಳಿಕ ಕೇಂದ್ರ ಸರ್ಕಾರ ಸ್ಟಾರ್ ಲಿಂಕ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದು ಭಾರತದ ಜನ ಅದೆಷ್ಟರ ಮಟ್ಟಿಗೆ ಕೈ ಹಿಡಿದು ನಡೆಸ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ