/newsfirstlive-kannada/media/post_attachments/wp-content/uploads/2025/04/Rishab_Pant.jpg)
ರಿಷಬ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆನೆ ಬಲ ಬಂದಿದೆ. ಫಿಟ್ನೆಸ್ ಸಮಸ್ಯೆಯಿಂದ ಕೆಲವು ಐಪಿಎಲ್ ಪಂದ್ಯಗಳಿಂದ ಹೊರಗುಳಿದಿದ್ದ ಮಯಾಂಕ್ ಯಾದವ್, ಎಲ್ಎಸ್ಜಿ ಕ್ಯಾಂಪ್ ಸೇರಿಕೊಂಡಿದ್ದಾರೆ.
ಮುಂಬರುವ ಐಪಿಎಲ್ ಪಂದ್ಯಗಳಲ್ಲಿ ಎಲ್ಎಸ್ಜಿ ಪರ ಬೌಲಿಂಗ್ ಮಾಡಲಿದ್ದಾರೆ. ಮಯಾಂಕ್ ಯಾದವ್, ಗಾಯದಿಂದ ಚೇತರಿಸಿಕೊಂಡಿದ್ದು, ಸಂಪೂರ್ಣ ಫಿಟ್ ಆಗಿದ್ದಾರೆ. ಕಳೆದ ಬಾರಿಯ ಐಪಿಎಲ್ನಲ್ಲಿ ಸಂಚಲ ಸೃಷ್ಟಿಸಿದ್ದ ಯಾದವ್, ಮೇಲೆ ಭಾರೀ ನಿರೀಕ್ಷೆಗಳಿವೆ. ಮಯಾಂಕ್ ಯಾದವ್ ವೇಗದ ಬೌಲಿಂಗ್ಗೆ ಹೆಸರುವಾಸಿ. 150 ಕಿಲೋ ಮೀಟರ್ ಸ್ಪೀಡ್ನಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. 2024ರ ಐಪಿಎಲ್ನಲ್ಲಿ ಮಿಂಚಿದ್ದ ಮಯಾಂಕ್ ಯಾದವ್ಗೆ, ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿತ್ತು.
ಇದನ್ನೂ ಓದಿ: ಸೋಲಿನ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ CSK.. ಧೋನಿ ಪ್ಲಾನ್ ಮಾತ್ರ ಭಲೇ ಇದೆ..!
2024, ಅಕ್ಟೋಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಟಿ-20ಯಲ್ಲಿ ಕೊನೆಯದಾಗಿ ಭಾಗಿಯಾಗಿದ್ದರು. ಸದ್ಯ ಎಲ್ಎಸ್ಜಿ ಕ್ಯಾಂಪ್ ಕೂಡಿಕೊಂಡಿರುವ ಮಯಾಂಕ್ ಯಾದವ್ಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ಇನ್ನು ಇಲ್ಲಿಯವರೆಗೆ 7 ಪಂದ್ಯಗಳನ್ನು ಆಡಿರುವ ಎಲ್ಎಸ್ಜಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಮೂರು ಪಂದ್ಯಗಳಲ್ಲಿ ಸೋಲನ್ನು ಕಂಡಿರುವ ಎಲ್ಎಸ್ಜಿ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಶನಿವಾರ ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮಯಾಂಕ್ ಯಾದವ್ ಆಡಲಿದ್ದಾರೆ.
ಇದನ್ನೂ ಓದಿ: ಗಾಯಕ್ವಾಡ್ ಬೆನ್ನಲ್ಲೇ ಧೋನಿಗೆ ಆಘಾತ.. CSK ಕ್ಯಾಂಪ್ನಲ್ಲಿ ಹೆಚ್ಚಿದ ಆತಂಕ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್