newsfirstkannada.com

ಐಪಿಎಲ್​​ಗೆ ಮುನ್ನವೇ ಫ್ಯಾನ್ಸ್​ಗೆ ಗುಡ್​​ನ್ಯೂಸ್​​.. ಆರ್​​​ಸಿಬಿಗೆ ಸ್ಟಾರ್​ ಪ್ಲೇಯರ್​ ಎಂಟ್ರಿ!

Share :

Published March 16, 2024 at 7:04pm

    2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್..!

    ಇದೇ ಮಾರ್ಚ್​​​ 22ನೇ ತಾರೀಕು ಚೆನ್ನೈ, RCB ಮೊದಲ ಮ್ಯಾಚ್​​

    ಆರ್​​​ಸಿಬಿ ತಂಡಕ್ಕೆ ಎಂಟ್ರಿಕೊಟ್ಟ ಸ್ಟಾರ್​​ ಕ್ರಿಕೆಟರ್​ ಪಾಟಿದಾರ್​​

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​ಗೆ ದಿನಗಣನೆ ಶುರುವಾಗಿದೆ. ಇದೇ ಮಾರ್ಚ್​​​ 22ನೇ ತಾರೀಕು ಚೆನ್ನೈ ಸೂಪರ್​ ಕಿಂಗ್ಸ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ಮೊದಲ ಐಪಿಎಲ್​ ಮ್ಯಾಚ್​ ನಡೆಯಲಿದೆ. ಈಗಾಗಲೇ ಆರ್​​​ಸಿಬಿ ತಂಡದ ಆಟಗಾರರು ಬಿರುಸಿನ ತಯಾರಿ ಆರಂಭಿಸಿದ್ದು, ಸ್ಟಾರ್​​ ಕ್ರಿಕೆಟರ್​​ ರಜತ್​ ಪಾಟಿದಾರ್​​ ಕ್ಯಾಂಪ್​​ ಸೇರಿಕೊಂಡಿದ್ದಾರೆ.

ಹೌದು, ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧ ನಡೆದ ಟೆಸ್ಟ್​​ ಸೀರಿಸ್​ನಲ್ಲಿ ಭಾರತ ತಂಡದ ಭಾಗವಾಗಿದ್ದ ರಜತ್​​​ ಇಷ್ಟು ದಿನ ರೆಸ್ಟ್​ನಲ್ಲಿದ್ದರು. ಒಂದು ವಾರದ ರೆಸ್ಟ್​ ಬಳಿಕ ಈಗ ರಜತ್​ ಪಾಟಿದಾರ್​ ಆರ್​​ಸಿಬಿ ಕ್ಯಾಂಪ್​​ ಸೇರಿದ್ದಾರೆ. ಆರ್​​​ಸಿಬಿ ತಂಡ ಸೇರಿಕೊಂಡ ರಜತ್​ಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

ಅದು 2022ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಎಲಿಮಿನೇಟರ್ ಪಂದ್ಯ. ಅಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಬ್ಬರಿಸಿದ ಆರ್‌ಸಿಬಿ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಆಕರ್ಷಕ ಶತಕ ಸಿಡಿಸಿ ದಾಖಲೆ ಬರೆದಿದ್ದರು.

ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್​​ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಈ ಮೂಲಕ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಸಂಕಷ್ಟದಲ್ಲಿದ್ದ ತಂಡಕ್ಕೆ ರಜತ್ ಪಾಟಿದಾರ್ ಆಸರೆಯಾದರು. ಐಪಿಎಲ್ ಪ್ಲೇ ಆಫ್ ಪಂದ್ಯಗಳಲ್ಲಿ ಗರಿಷ್ಠ ರನ್ ಸಿಡಿಸಿದ ಅನ್‌ಕ್ಯಾಪ್ ಪ್ಲೇಯರ್ ಅನ್ನೋ ಹೆಗ್ಗಳಿಕೆಗೆ ರಜತ್ ಪಾಟಿದಾರ್ ಪಾತ್ರರಾಗಿದ್ದಾರೆ. ಅಂದಿನಿಂದ ಕ್ರೀಡಾ ಲೋಕದಲ್ಲಿ ಭಾರೀ ಸದ್ದು ಮಾಡಿದ್ದ ರಜತ್​ ಪಾಟಿದಾರ್​ಗೆ ಟೀಮ್​ ಇಂಡಿಯಾ ಪರ ಆಡಲು ಅವಕಾಶ ಸಿಕ್ಕಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಪಿಎಲ್​​ಗೆ ಮುನ್ನವೇ ಫ್ಯಾನ್ಸ್​ಗೆ ಗುಡ್​​ನ್ಯೂಸ್​​.. ಆರ್​​​ಸಿಬಿಗೆ ಸ್ಟಾರ್​ ಪ್ಲೇಯರ್​ ಎಂಟ್ರಿ!

https://newsfirstlive.com/wp-content/uploads/2024/03/RCB_Squad.jpg

Load More