/newsfirstlive-kannada/media/post_attachments/wp-content/uploads/2025/03/Surya.jpg)
ಇತ್ತೀಚೆಗೆ ನಡೆದ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. ತಾನು ಆಡಿದ ಮೂರು ಪಂದ್ಯಗಳಲ್ಲಿ ಬಾಂಗ್ಲಾದೇಶ ಎರಡರಲ್ಲಿ ಹೀನಾಯ ಸೋಲು ಕಂಡಿತು. ಮೂರನೇ ಪಂದ್ಯ ರದ್ದಾದ ಕಾರಣ ಬಾಂಗ್ಲಾದೇಶ ಟೂರ್ನಿಯಿಂಲೇ ಹೊರಗುಳಿಯಬೇಕಾಯ್ತು.
ಇನ್ನು, ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಬಾಂಗ್ಲಾದೇಶದ ಇಬ್ಬರು ಸ್ಟಾರ್ ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಮೊದಲು ಅನುಭವಿ ವಿಕೆಟ್ ಕೀಪರ್-ಬ್ಯಾಟರ ಮುಷ್ಫಿಕರ್ ರಹೀಮ್ ನಿವೃತ್ತಿ ಘೋಷಿಸಿದರು. ಈ ಬೆನ್ನಲ್ಲೀಗ ಆಲ್‌ರೌಂಡರ್ ಮಹ್ಮದುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.
ಈ ಬಗ್ಗೆ ಏನಂದ್ರು ಮಹ್ಮದುಲ್ಲಾ?
ಸ್ಟಾರ್ ಆಲ್‌ರೌಂಡರ್ ಮಹ್ಮದುಲ್ಲಾ ಅವರಿಗೆ 39 ವರ್ಷ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ. ತನಗೆ ಬೆಂಬಲ ನೀಡಿದ ಸಹ ಆಟಗಾರರು, ತರಬೇತುದಾರರು ಮತ್ತು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಮಹ್ಮದುಲ್ಲಾ ಸಾಧನೆ
ಇವರು ಆಡಿದ 141 ಟಿ20 ಪಂದ್ಯಗಳ 130 ಇನ್ನಿಂಗ್ಸ್‌ಗಳಲ್ಲಿ 117 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 2444 ರನ್ ಗಳಿಸಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಸೇರಿವೆ, 41 ವಿಕೆಟ್ ಪಡೆದಿದ್ದಾರೆ. 239 ಏಕದಿನ ಪಂದ್ಯಗಳ 209 ಇನ್ನಿಂಗ್ಸ್‌ಗಳಲ್ಲಿ 4 ಶತಕ ಮತ್ತು 32 ಅರ್ಧಶತಕ ಸಿಡಿಸಿದ್ದಾರೆ. 82 ವಿಕೆಟ್‌ಗಳು ಸೇರಿ ಒಟ್ಟು 5689 ರನ್ ಕಲೆ ಹಾಕಿದ್ದಾರೆ. ಇನ್ನೂ 50 ಟೆಸ್ಟ್ ಪಂದ್ಯಗಳ 97 ಇನ್ನಿಂಗ್ಸ್‌ಗಳಲ್ಲಿ 2914 ರನ್ ಗಳಿಸಿ 43 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:ಮೊಬೈಲ್ನಿಂದಲೇ ಫೋಟೋ ಕ್ಲಿಕ್ ಮಾಡಿ ಲಕ್ಷ ಲಕ್ಷ ಹಣ ದುಡಿಯಬಹುದು; ಹೇಗೆ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ