Advertisment

ಬರೋಬ್ಬರಿ 2 ವರ್ಷದ ನಂತರ ಟೀಮ್​ ಇಂಡಿಯಾಗೆ ಸ್ಟಾರ್​ ಪ್ಲೇಯರ್​ ಎಂಟ್ರಿ; ಭಾರತಕ್ಕೆ ಬಂತು ಆನೆಬಲ

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿಗೆ ಗಂಭೀರ್​​ ಕೃಪೆ ಯಾರ ಮೇಲೆ? ಟೀಮ್​ ಇಂಡಿಯಾದಲ್ಲಿ ಯಾರಿಗೆಲ್ಲಾ ಸ್ಥಾನ?
Advertisment
  • 2025ರ ಚಾಂಪಿಯನ್ಸ್‌ ಟ್ರೋಫಿಗೆ ಟೀಮ್​ ಇಂಡಿಯಾ ಪ್ರಕಟ
  • ಅಳೆದು ತೂಗಿ ಬಲಿಷ್ಠ ಟೀಮ್​​ ಇಂಡಿಯಾ ಪ್ರಕಟಿಸಿದ BCCI
  • ಟೀಮ್​ ಇಂಡಿಯಾಗೆ ಸ್ಟಾರ್​ ಪ್ಲೇಯರ್​ ಎಂಟ್ರಿಯಿಂದ ಆನೆಬಲ

ಬಹುನಿರೀಕ್ಷಿತ 2025ರ ಚಾಂಪಿಯನ್ಸ್‌ ಟ್ರೋಫಿಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್‌ ನೇತೃತ್ವದಲ್ಲಿ ಬಿಸಿಸಿಐ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಅಳೆದು ತೂಗಿ ಬಲಿಷ್ಠ ಟೀಮ್​​ ಇಂಡಿಯಾ ಅನೌನ್ಸ್​ ಮಾಡಲಾಗಿದೆ.

Advertisment

ಮುಂದಿನ ತಿಂಗಳು ಫೆಬ್ರವರಿ 19ನೇ ತಾರೀಕಿನಿಂದ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದೆ. ಪಾಕಿಸ್ತಾನ ಆಯೋಜನೆ ಮಾಡಲಿರೋ ಈ ಮಹತ್ವದ ಟೂರ್ನಿಯಲ್ಲಿ ಭಾರತ ಕೂಡ ಭಾಗವಹಿಸಲಿದೆ. ಭಾರತದ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ.

ರೋಹಿತ್​​ಗೆ ಮತ್ತೆ ಕ್ಯಾಪ್ಟನ್ಸಿ

ಮೆಗಾ ಟೂರ್ನಮೆಂಟ್​ನಲ್ಲಿ ಟೀಮ್ ಇಂಡಿಯಾವನ್ನು ಮತ್ತೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಲೀಡ್​ ಮಾಡಲಿದ್ದಾರೆ. ವಿರಾಟ್ ಕೊಹ್ಲಿಗೆ ಬಿಸಿಸಿಐ ಮತ್ತೆ ಮಣೆ ಹಾಕಿದೆ. ವಿಶೇಷ ಎಂದರೆ ಹಲವು ವರ್ಷಗಳ ನಂತರ ಟೀಮ್​ ಇಂಡಿಯಾ ಮೊಹಮ್ಮದ್ ಶಮಿ ಕಮ್​ಬ್ಯಾಕ್​ ಮಾಡಿದ್ದಾರೆ.

ಶಮಿ ಭರ್ಜರಿ ಕಮ್​​ಬ್ಯಾಕ್​​​

ಟೀಮ್ ಇಂಡಿಯಾದ ಸ್ಟಾರ್ ಸ್ವಿಂಗ್ ಬೌಲರ್‌ ಮೊಹಮ್ಮದ್​ ಶಮಿ. ಇವರು ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು ಮತ್ತೆ ಟೀಮ್​​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಟಿ20 ತಂಡದಲ್ಲಿ ಇವರಿಗೆ ಸ್ಥಾನ ನೀಡಲಾಗಿತ್ತು. ಈ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿ ಸರಣಿಗೆ ಆಯ್ಕೆ ಮಾಡಲಾಗಿದೆ. ಶಮಿ ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿ ಆಯ್ಕೆದಾರರ ಮನ ಗೆದ್ದಿರೋ ಕಾರಣ ಅವಕಾಶ ನೀಡಲಾಗಿದೆ.

Advertisment

ಏಕದಿನ ವಿಶ್ವಕಪ್​​ನಲ್ಲಿ ಸ್ಥಿರ ಪ್ರದರ್ಶನ

ಕಳೆದ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಟೀಮ್​ ಇಂಡಿಯಾ ಬೌಲರ್​​​ ಶಮಿ. ಇವರು ವಿಕೆಟ್​​​ ಬೇಟೆಯಲ್ಲಿ ಮುಂಚೂಣಿಯಲ್ಲಿದ್ದರು. ವಿಶ್ವಕಪ್​​ ನಂತರ ಶಮಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರು ಕ್ರಿಕೆಟ್​​ನಿಂದ ದೂರ ಇದ್ದರು.

ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡ ಹೀಗಿದೆ!

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯಶಸ್ವಿ ಜೈಸ್ವಾಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ.

ಇದನ್ನೂ ಓದಿ:ಟೀಮ್​​ ಇಂಡಿಯಾದಲ್ಲಿ ಕೆ.ಎಲ್​ ರಾಹುಲ್​​ಗೆ ಮಹತ್ವದ ಜವಾಬ್ದಾರಿ; ಕೊಹ್ಲಿ ಆಪ್ತನಿಗೆ ಜಾಕ್​ಪಾಟ್​​

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment