ಇಂದಿನ ಪಂದ್ಯದಲ್ಲಿ RCBಗೆ ಮಾಜಿ ನಾಯಕನೇ ಕಂಟಕ ಆಗ್ತಾರಾ.. ಯಾಕೆ ಗೊತ್ತಾ?

author-image
Bheemappa
Updated On
ಬೆಂಗಳೂರಲ್ಲೇ ಇವತ್ತು RCB ಮ್ಯಾಚ್​.. ಫ್ಯಾನ್ಸ್ ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿವೆ
Advertisment
  • ಈ ಹಿಂದೆ ಕ್ಯಾಪ್ಟನ್​ ಆಗಿ RCBಯನ್ನ ಮುನ್ನಡೆಸಿದ್ದ ಪ್ಲೇಯರ್
  • ಆರ್​ಸಿಬಿ ಆಟಗಾರರ ಒಂದೊಂದು ಹೆಜ್ಜೆ ಕೂಡ ಗೊತ್ತಿರುತ್ತದೆ
  • ಆರ್​ಸಿಬಿ ಕೊಂಚ ಹಿನ್ನಡೆಯ ಮನೋಭಾವ ಕಾಡಬಹುದಾ.?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇಂದು ಹೈವೋಲ್ಟೇಜ್​ ಪಂದ್ಯ ನಡೆಯಲಿದೆ. ಇಂತಹ ಹೈವೋಲ್ಟೇಜ್ ಮ್ಯಾಚ್​ಗಾಗಿ ಫ್ಯಾನ್ಸ್​ ಕೌತುಕದಿಂದ ಇದ್ದಾರೆ. ಇಷ್ಟು ದಿನ ಇಂಜುರಿಗೆ ಒಳಗಾಗಿ ಡೆಲ್ಲಿ ತಂಡದಿಂದ ಹೊರಗಿದ್ದ ಆರ್​ಸಿಬಿಯ ಮಾಜಿ ಕ್ಯಾಪ್ಟನ್​ ಇವತ್ತು ಅಖಾಡಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಆರ್​ಸಿಬಿಗೆ ಇವರೇ ಕಂಟಕ ಆಗ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ.

ಫಾಫ್ ಡು ಪ್ಲೆಸ್ಸಿಸ್ ಈ ಹಿಂದೆ ಆರ್​ಸಿಬಿ ತಂಡದ ಕ್ಯಾಪ್ಟನ್ ಆಗಿದ್ದರು. ಸದ್ಯ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಉಪನಾಯಕನಾಗಿ ಆಡುತ್ತಿದ್ದಾರೆ. ಆದರೆ ಇವರು ತೊಡೆಸಂದು ಗಾಯ (Groin Injury)ಕ್ಕೆ ತುತ್ತಾಗಿ ಇಷ್ಟು ದಿನ ಡೆಲ್ಲಿ​ ತಂಡದ ಕೆಲ ಪಂದ್ಯಗಳನ್ನು ಆಡಿರಲಿಲ್ಲ. ಇದೀಗ ಗಾಯದಿಂದ ಚೇತರಿಸಿಕೊಂಡ ಡು ಪ್ಲೆಸ್ಸಿಸ್ ಆರ್​ಸಿಬಿ ವಿರುದ್ಧ ಅಖಾಡಕ್ಕೆ ಇಳಿಯುತ್ತಿದ್ದಾರೆ. ಅಲ್ಲದೇ ಫಿಟ್ನೇಸ್​​ನಲ್ಲೂ ಪಾಸ್ ಆಗಿದ್ದಾರೆ. ಇದರಿಂದ ಆರ್​ಸಿಬಿ ವಲಯದಲ್ಲಿ ಕೊಂಚ ತಳಮಳ ಇದೆ ಎನ್ನಬಹುದು.

ಇದನ್ನೂ ಓದಿ:ಲೆಗ್ ಸ್ಪಿನ್​​ಗೆ ವಿರಾಟ್​ ಕೊಹ್ಲಿ ಅಭ್ಯಾಸ ಮಾಡೋದೇ ಬೇಕಾಗಿಲ್ಲ- RCB ಕೋಚ್ ಅಚ್ಚರಿ ಹೇಳಿಕೆ!

publive-image

ಏಕೆಂದರೆ ಈ ಹಿಂದೆ ಫಾಫ್ ಡು ಪ್ಲೆಸ್ಸಿಸ್ ಆರ್​ಸಿಬಿ ನಾಯಕನಾಗಿದ್ದಾಗ ತಂಡದ ಬಗ್ಗೆ ಎಲ್ಲವೂ ಗೊತ್ತಿರುತ್ತದೆ. ಯಾರ ಯಾರ ಬೌಲಿಂಗ್​ ಹೇಗೆಲ್ಲಾ ಇರುತ್ತೆ, ಯಾವ ಬ್ಯಾಟರ್​​ಗೆ ಫೀಲ್ಡಿಂಗ್ ಎಲ್ಲಿ ನಿಲ್ಲಿಸಬೇಕು ಎನ್ನವುದು ಚೆನ್ನಾಗಿ ಅರಿತುಕೊಂಡಿರುತ್ತಾರೆ. ಎದುರಾಳಿ ತಂಡದಲ್ಲಿ ಫಾಫ್​ ಇರುವುದರಿಂದ ಆರ್​ಸಿಬಿ ಕೊಂಚ ಹಿನ್ನಡೆಯ ಮನೋಭಾವ ಕಾಡಬಹುದು. ಓಪನರ್​ ಆಗಿ ಕ್ರೀಸ್​ಗೆ ಫಾಫ್​ ಬರುವುದರಿಂದ ಕನ್ನಡಿಗ ಕರುಣ್​ ನಾಯರ್​ 3 ಅಥವಾ 4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.

ಏಪ್ರಿಲ್​ 10 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟ್​ ಬೀಸಿದ್ದ ಫಾಫ್​ ಕೇವಲ 2 ರನ್​ಗೆ ಪೆವಿಲಿಯನ್​ಗೆ ಮರಳಿದ್ದರು. ಇದಾದ ಮೇಲೆ ಲಕ್ನೋ ವಿರುದ್ಧ 29 ರನ್​ ಗಳಿಸಿದ್ದರು. ಹೈದ್ರಾಬಾದ್ ಜೊತೆ ಅರ್ಧಶತಕ ಸಿಡಿಸಿದ್ದರು. ಹೀಗೆ ತಂಡದಿಂದ ತಂಡಕ್ಕೆ ತಮ್ಮ ಬ್ಯಾಟಿಂಗ್​ ಸುಧಾರಿಸಿಕೊಂಡಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲೂ ಆರ್​​ಸಿಬಿ ವಿರುದ್ಧ ಮಾಜಿ ನಾಯಕ ಫಾಫ್​ ಘರ್ಜನೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment