ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭರ್ಜರಿ ತಯಾರಿ
ಮುಂದಿನ ಸೀಸನ್ ಕಪ್ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಣ!
ಐಪಿಎಲ್ ಆಕ್ಷನ್ನಲ್ಲಿ ಸ್ಟಾರ್ ಪ್ಲೇಯರ್ ಮೇಲೆ ಆರ್ಸಿಬಿ ತಂಡದ ಹದ್ದಿನ ಕಣ್ಣು
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ ಆರ್ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ದಿನೇಶ್ ಕಾರ್ತಿಕ್ ಅವರನ್ನು ನೇಮಿಸಿದೆ. ಈ ಮಧ್ಯೆ ಮತ್ತೋರ್ವ ಸ್ಫೋಟಕ ಬ್ಯಾಟರ್ ಆರ್ಸಿಬಿಗೆ ಎಂಟ್ರಿ ಆಗೋ ಸೂಚನೆ ಸಿಕ್ಕಿದೆ.
ವರ್ಷದ ಕೊನೆ ಡಿಸೆಂಬರ್ನಲ್ಲಿ 2025ರ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ. ಮೆಗಾ ಆಕ್ಷನ್ನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲು ಆರ್ಸಿಬಿ ಮುಂದಾಗಿದೆ. ಕ್ವಾಲಿಟಿ ಆಟಾಗರರ ಖರೀದಿ ಮಾಡಿ ಬಲಿಷ್ಠ ತಂಡ ಕಟ್ಟು ಪ್ಲಾನ್ ಆರ್ಸಿಬಿಯದ್ದು. ಹಾಗಾಗಿ ಕೆ.ಎಲ್ ರಾಹುಲ್ ಅವರ ಮೇಲೆ ಆರ್ಸಿಬಿ ಕಣ್ಣಿಟ್ಟಿದೆ.
ಇನ್ನು, ಕೆ.ಎಲ್ ರಾಹುಲ್ ಅವರೊಂದಿಗೆ ಇಶಾನ್ ಕಿಶನ್ ಮೇಲೂ ಆರ್ಸಿಬಿ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಸೀಸನ್ ವೇಳೆಗೆ ಇಶಾನ್ ಕಿಶನ್ ಮುಂಬೈ ತಂಡವನ್ನು ಬಿಡೋದು ಪಕ್ಕಾ ಆಗಿದೆ. ಹಾಗಾಗಿ ಇಶಾನ್ ಕಿಶನ್ ಅವರನ್ನು ಆರ್ಸಿಬಿ ಖರೀದಿ ಮಾಡೋ ಸಾಧ್ಯತೆ ಇದೆ.
ಕ್ಯಾಪ್ಟನ್ ಫಾಫ್ಗೆ ಕೊಕ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್. ಇವರು ಇದೇ ತಿಂಗಳು 13ನೇ ತಾರೀಕು 40 ವರ್ಷಕ್ಕೆ ಕಾಲಿಟ್ಟರು. ಹಾಗಾಗಿ ಫಾಫ್ಗೆ ಕೊಕ್ ಕೊಟ್ಟು, ರಾಹುಲ್ ಅವರನ್ನು ಕ್ಯಾಪ್ಟನ್ ಮಾಡಲು ಆರ್ಸಿಬಿ ಪ್ಲಾನ್ ಮಾಡಿಕೊಂಡಿದೆ.
ಇದನ್ನೂ ಓದಿ: ಆರ್ಸಿಬಿ ನಾಯಕತ್ವಕ್ಕಾಗಿ KL ರಾಹುಲ್, ಸ್ಟಾರ್ ಪ್ಲೇಯರ್ ಮಧ್ಯೆ ಪೈಪೋಟಿ; ಯಾರು ಮುಂದಿನ ಕ್ಯಾಪ್ಟನ್?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್