Advertisment

ಬರೋಬ್ಬರಿ 15 ತಿಂಗಳ ನಂತರ ವಿಧ್ವಂಸಕ ಬ್ಯಾಟರ್​​ ಎಂಟ್ರಿ; ಟೀಮ್​ ಇಂಡಿಯಾಗೆ ಬಂತು ಆನೆಬಲ

author-image
Ganesh Nachikethu
Updated On
RO-KOಗೆ ಬಿಗ್​ ಚಾಲೆಂಜ್.. ಟೀಂ ಇಂಡಿಯಾ ಪಾಲಿಗೆ ಇವರ ಆಟ ತುಂಬಾ ಕ್ರೂಶಿಯಲ್..!
Advertisment
  • ಟೀಮ್​​​ ಇಂಡಿಯಾ, ಇಂಗ್ಲೆಂಡ್ ನಡುವೆ 3 ಪಂದ್ಯಗಳ ಏಕದಿನ ಸರಣಿ
  • ಒನ್​ ಡೇ ಸೀರೀಸ್​ನಲ್ಲೂ ಇಂಗ್ಲೆಂಡ್​ ಬಗ್ಗುಬಡಿಯಲು ಭಾರತ ಸಜ್ಜು!
  • ಸುಮಾರು 15 ತಿಂಗಳ ಬಳಿಕ ಟೀಮ್​ ಇಂಡಿಯಾಗೆ ಸ್ಟಾರ್​​ ಕ್ರಿಕೆಟರ್​ ಎಂಟ್ರಿ

ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧ ನಡೆದ 5 ಪಂದ್ಯಗಳ ಟಿ20 ಸರಣಿಯನ್ನು ಭಾರತ 4-1 ಅಂತರದಿಂದ ಗೆದ್ದುಕೊಂಡಿದೆ. ಈ ಬೆನ್ನಲ್ಲೇ ನಾಳೆಯಿಂದ ನಡೆಯಲಿರೋ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯನ್ನು ಆಡಲು ಟೀಮ್​ ಇಂಡಿಯಾ ಆಟಗಾರರು ಸಜ್ಜಾಗಿದ್ದಾರೆ.

Advertisment

2025ರ ICC ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆಯಲಿರೋ ಭಾರತ-ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಇದಾಗಿದೆ. ನಾಳೆ ನಾಗ್ಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಭಾಗವಾಗಿರೋ ಆಟಗಾರರೇ ಏಕದಿನ ಸರಣಿಯಲ್ಲಿ ಆಡುತ್ತಿದ್ದು, ಭಾರೀ ಮಹತ್ವ ಪಡೆದುಕೊಂಡಿದೆ.

ಟೀಮ್​ ಇಂಡಿಯಾ ಕ್ಯಾಪ್ಟನ್​​ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಈಗಾಗಲೇ ಟಿ20 ಕ್ರಿಕೆಟ್​ನಿಂದ ನಿವೃತ್ತಿ ಆಗಿದ್ದಾರೆ. ಶುಭಮನ್ ಗಿಲ್, ಕೆ.ಎಲ್.ರಾಹುಲ್, ರಿಷಬ್​ ಪಂತ್, ಶ್ರೇಯಸ್ ಅಯ್ಯರ್ ಅವರು ಇತ್ತೀಚೆಗೆ ನಡೆದ ಟಿ20 ಸರಣಿಯಿಂದ ದೂರ ಉಳಿದಿದ್ರು. ಈಗ ಎಲ್ಲರೂ ಏಕದಿನ ಸರಣಿಗಾಗಿ ನೀಲಿ ಜೆರ್ಸಿ ತೊಡಲಿದ್ದಾರೆ.

15 ತಿಂಗಳ ಬಳಿಕ ಆಲ್​ರೌಂಡರ್ ಕಮ್​ಬ್ಯಾಕ್​

ಇನ್ನು, ಈಗಾಗಲೇ ​ಚಾಂಪಿಯನ್ಸ್​ ಟ್ರೋಫಿ ಮತ್ತು ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಗಾಗಿ ಟೀಮ್​ ಇಂಡಿಯಾ ಪ್ರಕಟ ಆಗಿದೆ. ಟೀಮ್​ ಇಂಡಿಯಾದಲ್ಲಿ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​​ ಪಾಂಡ್ಯ ಸ್ಥಾನ ಪಡೆದುಕೊಂಡಿದ್ದು, ಈಗಾಗಲೇ ನಾಗ್ಪುರ ತಲುಪಿದ್ದಾರೆ. ಇವರು ಬರೋಬ್ಬರಿ 15 ತಿಂಗಳ ನಂತರ ಏಕದಿನ ತಂಡದ ಭಾಗವಾಗಿದ್ದಾರೆ.

Advertisment

ಹಾರ್ದಿಕ್​​ ಪಾಂಡ್ಯ ಏಕದಿನ ದಾಖಲೆ ಹೇಗಿದೆ?

ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ. ಇವರು ಈವರೆಗೂ ಒಟ್ಟು 86 ಏಕದಿನ ಪಂದ್ಯ ಆಡಿದ್ದು, 61 ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡಿದ್ದಾರೆ. ಸುಮಾರು 1769 ರನ್​ ಗಳಿಸಿದ್ದಾರೆ. ಹೈಎಸ್ಟ್​ ಸ್ಕೋರ್​​ 92 ಆಗಿದ್ದು, 11 ಅರ್ಧಶತಕಗಳು ಸೇರಿವೆ. ಬೌಲಿಂಗ್​ನಲ್ಲಿ 84 ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ:ಬಿಸಿಸಿಐನಿಂದ ಪಂತ್​​ಗೆ ಬಿಗ್​ ಶಾಕ್; ಕನ್ನಡಿಗ ಕೆ.ಎಲ್​​ ರಾಹುಲ್​​ಗೆ ಮತ್ತೆ ಸುವರ್ಣಾವಕಾಶ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment