/newsfirstlive-kannada/media/post_attachments/wp-content/uploads/2024/11/Padikkal_Warner.jpg)
ಇಂಟರ್ ನ್ಯಾಷನಲ್ ಕ್ರಿಕೆಟ್ನಲ್ಲೇ ತಮ್ಮದೇ ಆದ ಛಾಪು ಮೂಡಿಸಿರೋ ಸ್ಟಾರ್ ಆಟಗಾರರೇ ಮೆಗಾ ಹರಾಜಿನಿಂದಲೇ ಹೊರಬಿದ್ದಿದ್ದಾರೆ. ಇವರು ತಮ್ಮ ಮೂಲ ಬೆಲೆಯಷ್ಟು ಹಣವನ್ನು ಪಡೆಯುವಲ್ಲೂ ಫೇಲ್ಯೂರ್ ಆಗಿದ್ದು, ಅನ್ಸೋಲ್ಡ್ ಆಗಿದ್ದಾರೆ.
ಇಂದು ಸೌದಿಯಲ್ಲಿ ಮೆಗಾ ಹರಾಜು ನಡೆಯುತ್ತಿದೆ. ಸ್ಟಾರ್ ಆಟಗಾರರು ಹೆಸರು ಕೂಗಿದ್ರೂ ಯಾವುದೇ ತಂಡದ ಮಾಲೀಕರು ಖರೀದಿ ಮಾಡಲಿಲ್ಲ. ಹಾಗಾಗಿ ಇವ್ರು ಅನ್ಸೋಲ್ಡ್ ಆಗಿದ್ದು, ಅಭಿಮಾನಿಗಳಿಗೆ ಶಾಕಿಂಗ್ ಆಗಿದೆ.
ಮೆಗಾ ಹರಾಜಿಗೆ ಮುನ್ನ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಲೀಸ್ ಆಗಿತ್ತು. ಇವರನ್ನು ಯಾವುದೇ ತಂಡ ಬಿಡ್ ಮಾಡಲು ಮನಸ್ಸು ಮಾಡಲಿಲ್ಲ. ಇಷ್ಟೇ ಅಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಿರುಸಿನ ಬ್ಯಾಟಿಂಗ್‌ನಿಂದಲೇ ಹೆಸರುವಾಸಿರೋ ಇಂಗ್ಲೆಂಡ್ ತಂಡದ ಜಾನಿ ಬೇರ್ ಸ್ಟೋ ಕೂಡ ಅನ್ಸೋಲ್ಡ್ ಆಗಿದ್ದಾರೆ.
ದೇವದತ್ ಪಡಿಕ್ಕಲ್ ಅನ್ಸೋಲ್ಡ್
ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೋ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿರೋ ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಸಹ ಅನ್ಸೋಲ್ಡ್ ಆಗಿದ್ದಾರೆ. ಕಳೆದ ಸೀಸನ್ನಲ್ಲಿ ಲಕ್ನೋ ತಂಡದ ಪರ ಕಳಪೆ ಪ್ರದರ್ಶನ ನೀಡಿದ ಕಾರಣ ಕೈ ಬಿಡಲಾಗಿತ್ತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್