Advertisment

ಫೋಟೋ ಶೇರ್ ಮಾಡಿದ ಸ್ಟಾರ್ ಗಾಯಕ ಚಂದನ್ ಶೆಟ್ಟಿ.. ಸಿಕ್ಕಾಪಟ್ಟೆ ವೈರಲ್..!

author-image
Veena Gangani
Updated On
ಫೋಟೋ ಶೇರ್ ಮಾಡಿದ ಸ್ಟಾರ್ ಗಾಯಕ ಚಂದನ್ ಶೆಟ್ಟಿ.. ಸಿಕ್ಕಾಪಟ್ಟೆ ವೈರಲ್..!
Advertisment
  • ಮಸ್ತ್​ ಹಾಡಿನ ಮೂಲಕವೇ ಮತ್ತೆ ಕಮ್​ಬ್ಯಾಕ್​ ಮಾಡಿದ ಚಂದನ್​ ಶೆಟ್ಟಿ
  • ರಿಲೀಸ್ ಆದ ಒಂದೇ ದಿನಕ್ಕೆ ಟ್ರೆಂಡ್‌ ಆಗಿದ್ದ ಕಾಟನ್ ಕ್ಯಾಂಡಿ ಸಾಂಗ್​
  • ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಯ್ತು ಈ ಫೋಟೋಸ್

ಕನ್ನಡದ ಸ್ಟಾರ್​ ಗಾಯಕ ಚಂದನ್ ಶೆಟ್ಟಿ ಬಹಳ ದಿನಗಳ ಬಳಿಕ ಮತ್ತೆ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್​ ಕೊಟ್ಟಿದ್ದರು. ಕನ್ನಡದಲ್ಲಿ ಹಲವು ಹಿಟ್ ಸಾಂಗ್‌ಗಳನ್ನು ನೀಡಿರುವ ಚಂದನ್ ಶೆಟ್ಟಿ ಅವರ ಸಂಯೋಜನೆ ಮೂಡಿ ಬಂದಿದ್ದ ಕಾಟನ್ ಕ್ಯಾಂಡಿ ಸಾಂಗ್​ ಸಖತ್​ ವೈರಲ್​ ಆಗಿದೆ. ಈ ಕಾಟನ್ ಕ್ಯಾಂಡಿ ಹಾಡು ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಹಿಟ್ ಆಗಿದೆ ದಾಖಲೆ ನಿರ್ಮಿಸಿದೆ.

Advertisment

publive-image

ಇದೇ ಹೊತ್ತಲ್ಲಿ ಗಾಯಕ ಚಂದನ್​ ಶೆಟ್ಟಿ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಚಂದನ್​ ಶೆಟ್ಟಿಗೆ ಸಲಹೆಗಳನ್ನು ಕೊಡುತ್ತಿದ್ದಾರೆ. ಜೊತೆಗೆ ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಗಾಯಕ ಚಂದನ್​ ಶೆಟ್ಟಿ ತಮ್ಮ ಇನ್​ಸ್ಟಾದಲ್ಲಿ ಕಾಟನ್ ಕ್ಯಾಂಡಿ ಹಾಡಿಗೆ ಸೊಂಟ ಬಳುಕಿಸಿದ ಸುಶ್ಮಿತಾ ಗೋಪಿನಾಥ್‌ ಅವರ ಜೊತೆಗೆ ಮುದ್ದಾಗಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ. ಇದೇ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ:ಸೀರೆಲಿ ಹುಡುಗಿರ ನೋಡಲೆಬಾರದು.. ಮೈಸೂರ್ ಸಿಲ್ಕ್ ಸೀರೆಗೆ ಈ ಮಾರ್ಡನ್ ಬ್ಲೌಸ್‌ ಡಿಸೈನ್ಸ್ ಟ್ರೈ ಮಾಡಿ ನೋಡಿ!

publive-image

ಇನ್ನೂ ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಇಂಗೆ ನಗುತ್ತಾ ಚೆನ್ನಾಗಿರು ಗುರು, ನಮ್ ಚಂದನ್ ಶೆಟ್ಟಿಗೆ ಒಳ್ಳೆ ಔಷಧಿ ಜೀವನದಲ್ಲಿ ಬಹಳ ನೊಂದಿದ್ರು, ಉತ್ತಮ ಗೆಳತಿಯಾಗಿ ನೀವು ಸಿಕ್ಕಿದ್ದೀರಿ ಹೀಗೆ ನೂರು ವರ್ಷ ನಗು ನಗುತಾ ಇರಿ ಒಳ್ಳೆದಾಗಲಿ ಮೇಡಂ, ಒಳ್ಳೆಯ ಜೋಡಿ, ಶೆಟ್ರೇ ಮದ್ವೆ ಊಟ ಯಾವಾಗ?, ನಿವಿಬ್ಬರು ಮದ್ವೆ ಆಗಿಬಿಡಿ ಗುರು ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ.

Advertisment

publive-image

ಸ್ಟಾರ್ ದಂಪತಿ ಮಧ್ಯೆ ಬಿರುಕು

ಕನ್ನಡದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಬದುಕು ಅಂತ್ಯ ಕಂಡಿದೆ. ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಸ್ಟಾರ್ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದರು. ಡಿವೋರ್ಸ್‌ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಖುದ್ದು ಚಂದನ್, ನಿವೇದಿತಾ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ಗಾಯಕ ಚಂದನ್​ ಶೆಟ್ಟಿ ಅಭಿಮಾನಿಗಳಿಗಾಗಿ ಹೊಸ ಹೊಸ ಹಾಡುಗಳ ಮೂಲಕ ಮನರಂಜನೆ ನೀಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment