ರಾಜಮೌಳಿ ಮತ್ತೊಂದು ದೃಶ್ಯ ಕಾವ್ಯಕ್ಕೆ ಭರ್ಜರಿ ಸೆಟ್; ಮಹೇಶ್​ ಬಾಬು ಸಿನಿಮಾದ ಆ ಸೀಕ್ರೆಟ್ ಲಿಂಕ್​!

author-image
Veena Gangani
Updated On
ರಾಜಮೌಳಿ ಮತ್ತೊಂದು ದೃಶ್ಯ ಕಾವ್ಯಕ್ಕೆ ಭರ್ಜರಿ ಸೆಟ್; ಮಹೇಶ್​ ಬಾಬು ಸಿನಿಮಾದ ಆ ಸೀಕ್ರೆಟ್ ಲಿಂಕ್​!
Advertisment
  • 'ಎಸ್​ಎಸ್​​ಎಂಬಿ 29' ಸಿನಿಮಾ ಶೂಟಿಂಗ್​ಗಾಗಿಯೇ ಬೃಹತ್ ಸೆಟ್​ ನಿರ್ಮಾಣ
  • ಸೌತ್ ಸೂಪರ್‌ ಸ್ಟಾರ್, ಖ್ಯಾತ ನಿರ್ದೇಶಕ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ
  • ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯ್ತು ಒಂದು ಫೋಟೋ

ಇದೇ ಮೊದಲ ಬಾರಿಗೆ ಸೌತ್ ಸೂಪರ್‌ ಸ್ಟಾರ್ ಹಾಗೂ ಖ್ಯಾತ ನಿರ್ದೇಶಕ ಕಾಂಬಿನೇಷನ್​ನಲ್ಲಿ ಹೊಚ್ಚ ಹೊಸ ಸಿನಿಮಾ ಮೂಡಿ ಬರುತ್ತಿದೆ. ಹೌದು, ಸೌತ್ ಸೂಪರ್‌ ಸ್ಟಾರ್ ಮಹೇಶ್ ಬಾಬು ಹಾಗೂ ಆರ್​ಆರ್​ಆರ್​ ಖ್ಯಾತ ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರ ಸಂಯೋಜನೆಯಲ್ಲಿ ಸಿನಿಮಾ ಮೂಡಿ ಬರುತ್ತಿದೆ.

ಇದನ್ನೂ ಓದಿ: ಐಶ್ವರ್ಯಾ ಸಿಂಧೋಗಿ ಮನೆಗೆ ಮೋಕ್ಷಿತಾ ಪೈ ಸರ್‌ಪ್ರೈಸ್‌ ಎಂಟ್ರಿ; ಅಸಲಿಗೆ ಬಂದಿದ್ದು ಯಾರಿಗೋಸ್ಕರ ಗೊತ್ತಾ?

publive-image

ಆದ್ರೆ, ಈ ಸಿನಿಮಾದ ಬಗ್ಗೆ ಚಿತ್ರತಂಡ ಮೊದಲಿನಿಂದಲೂ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವೈರಲ್​ ಆಗಿರೋ ಫೋಟೋದಲ್ಲಿ ಮಹೇಶ್​ ಬಾಬು ಅವರ 'ಎಸ್​ಎಸ್​​ಎಂಬಿ 29' ಸಿನಿಮಾ ಶೂಟಿಂಗ್​​​​ಗೆ ಬೃಹತ್ ಸೆಟ್​ವೊಂದನ್ನು ನಿರ್ಮಿಸಲಾಗಿದೆ.


">March 5, 2025

publive-image

ಈ ಸೆಟ್​ ಅನ್ನು ಹೈದರಾಬಾದ್‌ನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬೃಹತ್ ಸೆಟ್‌ನಲ್ಲಿ ವಾರಾಣಸಿ ದೇವಾಲಯ ಗೋಚರಿಸಿದೆ. ಈ ಹಿಂದೆ ಮಹೇಶ್ ಬಾಬು ವಾರಾಣಸಿ ಸೆಟ್‌ನಲ್ಲಿ ಶೂಟಿಂಗ್​​​​ ನಡೆಸಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದೇ ಸೆಟ್‌ನಂತೆ ತೋರುವ ಫೋಟೋಗಳು ಈಗ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿವೆ. ಅಲ್ಲದೇ ಮಹೇಶ್ ಬಾಬು ಅವರ ಮುಂದಿನ ಚಿತ್ರೀಕರಣ ಅಲ್ಲೇ ನಡೆಯಲಿದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment