ಎದುರಾಳಿಗಳಿಗೆ ನಡುಕ; ಆರ್​​​ಸಿಬಿ ತಂಡಕ್ಕೆ ಡೈನಾಮಿಕ್​​ ಬ್ಯಾಟರ್​ ರೀ ಎಂಟ್ರಿ!

author-image
Ganesh Nachikethu
Updated On
ಎದುರಾಳಿಗಳಿಗೆ ನಡುಕ; ಆರ್​​​ಸಿಬಿ ತಂಡಕ್ಕೆ ಡೈನಾಮಿಕ್​​ ಬ್ಯಾಟರ್​ ರೀ ಎಂಟ್ರಿ!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​
  • 2025ರ ಮೆಗಾ ಆಕ್ಷನ್​ಗೆ ಮುನ್ನವೇ ಫ್ಯಾನ್ಸ್​ಗೆ ಗುಡ್​ನ್ಯೂಸ್​​
  • ಆರ್​​ಸಿಬಿ ಟೀಮ್​​ಗೆ ಸ್ಫೋಟಕ ಯುವ ಬ್ಯಾಟರ್​​ ರೀ ಎಂಟ್ರಿ

ಭಾರತ ತಂಡದ ಭರವಸೆಯ ಬ್ಯಾಟರ್‌ ಸರ್ಫರಾಜ್‌ ಖಾನ್‌. ಇವರನ್ನು ಜೂನಿಯರ್​ ರೋಹಿತ್​ ಶರ್ಮಾ ಎಂದು ಕರೆಯಬಹುದು. ಕಾರಣ ಥೇಟ್​​ ರೋಹಿತ್​ ಶರ್ಮಾ ಬ್ಯಾಟಿಂಗ್​​ ಶೈಲಿಯನ್ನೇ ಹೋಲುವಂತೆ ಆಡುವ ಆಟಗಾರ ಸರ್ಫರಾಜ್. ಸದ್ಯ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರೋ ಟೀಮ್​ ಇಂಡಿಯಾ ಮತ್ತು ನ್ಯೂಜಿಲೆಂಡ್​ ತಂಡದ ಮಧ್ಯೆ ಮೊದಲ ಟೆಸ್ಟ್​​ ಪಂದ್ಯದಲ್ಲಿ ಶತಕ ಸಿಡಿಸೋ ಮೂಲಕ ಭಾರೀ ಸದ್ದು ಮಾಡುತ್ತಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕ

ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ ಸರ್ಫರಾಜ್​ ಖಾನ್​ ಅವರು ತಮ್ಮ ಇಂಟರ್​ ನ್ಯಾಷನಲ್​ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕ ಸಿಡಿಸಿದ್ರು. ಪಂದ್ಯದ 4ನೇ ದಿನದಾಟದ ಪಂದ್ಯ ಆರಂಭವಾದಾಗ ಟೀಮ್​ ಇಂಡಿಯಾ ಯುವ ಬ್ಯಾಟರ್​ ಸರ್ಫರಾಜ್ ಖಾನ್ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಶುಕ್ರವಾರ 70 ರನ್‌ ಸಿಡಿಸಿ ಅಜೇಯರಾಗಿ ಉಳಿದಿದ್ದ ಸರ್ಫರಾಜ್​​ ಅವರು ಇಂದು ಅಬ್ಬರಿಸಿದ್ರು. ಅಗ್ರೆಸ್ಸಿವ್​ ಆಗಿ ಬ್ಯಾಟ್​ ಬೀಸಿದ ಇವರು ಕೇವಲ 110 ಎಸೆತಗಳಲ್ಲಿ ಮೊದಲ ಶತಕ ದಾಖಲಿಸಿದ್ರು.

publive-image

ಯುವ ಬ್ಯಾಟರ್​​ ಮೇಲೆ ಆರ್​​ಸಿಬಿ ಕಣ್ಣು

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಈಗಿನಿಂದಲೇ ಭರ್ಜರಿ ತಯಾರಿ ಶುರುವಾಗಿದೆ. ವರ್ಷದ ಕೊನೆಗೆ ಐಪಿಎಲ್​​ ಮೆಗಾ ಹರಾಜು ನಡೆಯಲಿದೆ. ಎಲ್ಲಾ ಐಪಿಎಲ್​ ತಂಡಗಳಿಗೂ ಕೇವಲ 6 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಹೊತ್ತಲ್ಲೇ ಸರ್ಫರಾಜ್​ ಖಾನ್​ ಅಬ್ಬರಿಸುತ್ತಿದ್ದು, ಆರ್​​ಸಿಬಿ ಈ ಯುವ ಬ್ಯಾಟರ್​ ಮೇಲೆ ಹದ್ದಿನ ಕಣ್ಣಿಟ್ಟಿದೆ. ಹೇಗಾದ್ರೂ ಮಾಡಿ ಖರೀದಿ ಮಾಡಲೇಬೇಕು ಎಂದು ಜಿದ್ದಿಗೆ ಬಿದ್ದಿದೆ.

ಆರ್​​​ಸಿಬಿ ತಂಡದಲ್ಲಿ ಸರ್ಫರಾಜ್​ ಖಾನ್​​

ಸರ್ಫರಾಜ್​ ಖಾನ್​​ 2015 ರಿಂದ 2018ರ ವರೆಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡಿದ್ದರು. ಒಟ್ಟು ತನ್ನ ಐಪಿಎಲ್​ ಕರಿಯರ್​ನಲ್ಲಿ ಈ ಯುವ ಬ್ಯಾಟರ್​​​ 50 ಪಂದ್ಯಗಳು ಆಡಿದ್ದು, ಒಟ್ಟು 585 ರನ್​​ ಸಿಡಿಸಿದ್ದಾರೆ. ಬರೋಬ್ಬರಿ 63 ಫೋರ್​​ ಜತೆಗೆ 14 ಸಿಕ್ಸರ್​​ ಕೂಡ ಸೇರಿವೆ. ಇವರ ಹೈಎಸ್ಟ್​ ಸ್ಕೋರ್​ 67 ಆಗಿದ್ದು, ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​​ 130.50 ಇದೆ.

ಇದನ್ನೂ ಓದಿ:ಕೊಹ್ಲಿಯನ್ನ IPLನಲ್ಲಿ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಯಾರು.. ಯಾವ ಟೀಮ್​ನಲ್ಲಿದ್ದಾರೆ ಯುವ ಪೇಸರ್?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment