SBI ಬ್ಯಾಂಕ್​​ನಲ್ಲಿ ಮಹತ್ವದ ಹುದ್ದೆಗೆ ಅರ್ಜಿ ಆಹ್ವಾನ.. ಆಯ್ಕೆ ಅದವರಿಗೆ ವರ್ಷಕ್ಕೆ ₹1 ಕೋಟಿ ಸಂಬಳ

author-image
Bheemappa
Updated On
SBI ಬ್ಯಾಂಕ್​​ನಲ್ಲಿ ಮಹತ್ವದ ಹುದ್ದೆಗೆ ಅರ್ಜಿ ಆಹ್ವಾನ.. ಆಯ್ಕೆ ಅದವರಿಗೆ ವರ್ಷಕ್ಕೆ ₹1 ಕೋಟಿ ಸಂಬಳ
Advertisment
  • ಇಡೀ ದೇಶದಲ್ಲೇ ದೊಡ್ಡ ಹೆಸರು ಪಡೆದಿರುವ ಎಸ್​ಬಿಐ ಬ್ಯಾಂಕ್
  • ಉದ್ಯೋಗಕ್ಕೆ ಆಯ್ಕೆ ಆದ ಅಭ್ಯರ್ಥಿಗೆ ₹1 ಕೋಟಿ ಸಂಬಳ ಫಿಕ್ಸ್
  • ಈ ಮಾನದಂಡಗಳನ್ನು ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ಉಪಾಧ್ಯಕ್ಷ (Corporate Communication and Marketing) ಹುದ್ದೆ ಖಾಲಿ ಇರುವ ಕಾರಣ ಈ ಸಂಬಂಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಅರ್ಜಿಗಳನ್ನು ಆಹ್ವಾನ ಮಾಡಿದೆ. ಇದೊಂದು ಕಾಂಟ್ರಾಕ್ಟ್ ಬೇಸ್ ಕೆಲಸವಾಗಿದ್ದು ಒಂದು ಉದ್ಯೋಗ ಮಾತ್ರ ಖಾಲಿ ಇದೆ. ಸದ್ಯ ಇದನ್ನು ಭರ್ತಿ ಮಾಡಲು ಎಸ್​ಬಿಐ ಅರ್ಜಿ ಆಹ್ವಾನ ಮಾಡಿದೆ.

ಈ ಕೆಲಸಕ್ಕೆ ಒಂದು ವರ್ಷಕ್ಕೆ 1 ಕೋಟಿ ರೂಪಾಯಿಗಳಂತೆ ಸಂಬಳವನ್ನು ಎಸ್​ಬಿಐ ಬ್ಯಾಂಕ್ ನೀಡುತ್ತದೆ. 55 ವರ್ಷ ಮೇಲ್ಪಟ್ಟವರು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಆಯ್ಕೆ ಆದ ಅಭ್ಯರ್ಥಿಗೆ ಮುಂಬೈನ ಕಚೇರಿಯಲ್ಲಿ ಕೆಲಸಕ್ಕೆ ನೇಮಕ ಮಾಡಲಾಗುತ್ತದೆ. ಈ ಗುತ್ತಿಗೆ ಆಧಾರದ ಉದ್ಯೋಗಕ್ಕೆ ಕನಿಷ್ಠ ಮುಂದಿನ 5 ವರ್ಷಗಳವರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ:SAAD ಮುಖ್ಯ ಪರೀಕ್ಷೆಗೆ ಅಧಿಸೂಚನೆ ರಿಲೀಸ್.. ಈ ಉದ್ಯೋಗಗಳಿಗೆ ಯಾರು ಅಪ್ಲೇ ಮಾಡಬಹುದು?

publive-image

ಅಪ್ಲೇ ಮಾಡಬೇಕು ಎನ್ನುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು. ಇದರ ಜೊತೆಗೆ ಇದಕ್ಕೆ ಸಂಬಂಧಿಸಿದ ಮತ್ತು ಸೂಕ್ತವಾದ ಕ್ಷೇತ್ರದಲ್ಲಿ ಕನಿಷ್ಠ 15 ವರ್ಷಗಳ ಅನುಭವ ಪಡೆದಿರಬೇಕು. ಅಭ್ಯರ್ಥಿಗಳು ವರ್ಗಗಳ ಮೀಸಲಾತಿ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರ; ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಮತ್ತೆ ಅರ್ಜಿ ಆಹ್ವಾನ

ಎಸ್​ಬಿಐ ನೇಮಕಾತಿ 2024ರ ಅಧಿಕೃತ ಅಧಿಸೂಚನೆ ಪೋಸ್ಟ್‌ನ ಅವಶ್ಯಕತೆಗಳಿಗೆ ಅನುಗುಣವಾಗಿ ಎಲ್ಲಾ ವಿಷಯಗಳಲ್ಲಿ ಅರ್ಹತಾ ಮಾನದಂಡಗಳನ್ನು ಅಭ್ಯರ್ಥಿ ಪೂರೈಸಬೇಕು. ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಮುಖ್ಯವಾದ ದಿನಾಂಕಗಳು

  • ಅರ್ಜಿಯ ನೋಂದಣಿ ಮುಕ್ತಾಯ ದಿನ- 06 ಡಿಸೆಂಬರ್ 2024
  • ಅರ್ಜಿಯ ಪ್ರಿಂಟ್ ತೆಗೆದುಕೊಳ್ಳುವ ದಿನ-21 ಡಿಸೆಂಬರ್ 2024
  • ಶುಲ್ಕ ಪಾವತಿಗೆ ಅಂತಿಮ ದಿನಾಂಕ- 06 ಡಿಸೆಂಬರ್ 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment