ಸ್ಯಾಂಡಲ್​ವುಡ್​ ನಟಿ ಶ್ರುತಿ ವಿರುದ್ಧ ಮಹಿಳಾ ಆಯೋಗದ ಅಧ್ಯಕ್ಷೆ ಕೆಂಡಾಮಂಡಲ.. ನೋಟಿಸ್ ಜಾರಿ, ಯಾಕೆ?

author-image
Bheemappa
Updated On
ಸ್ಯಾಂಡಲ್​ವುಡ್​ ನಟಿ ಶ್ರುತಿ ವಿರುದ್ಧ ಮಹಿಳಾ ಆಯೋಗದ ಅಧ್ಯಕ್ಷೆ ಕೆಂಡಾಮಂಡಲ.. ನೋಟಿಸ್ ಜಾರಿ, ಯಾಕೆ?
Advertisment
  • ಬಿಜೆಪಿ ವಕ್ತಾರೆ ಹಾಗೂ ನಟಿ ಶೃುತಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
  • ಹೇಳಿಕೆ ವಿರೋಧಿಸಿ ಆಯೋಗಕ್ಕೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ
  • ರಾಜ್ಯ ಕಾಂಗ್ರೆಸ್ ಕಾನೂನು ಘಟಕದಿಂದ ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು: ಕಾಂಗ್ರೆಸ್​ನ ಫ್ರೀ ಬಸ್​ನಿಂದ ಮನೆಯವರು, ಮಕ್ಕಳು ಉಪವಾಸ ಇರಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದ ನಟಿ ಹಾಗೂ ಬಿಜೆಪಿ ವಕ್ತಾರೆ ಶ್ರುತಿ ಅವರಿಗೆ ಮಹಿಳಾ ಆಯೋಗದಿಂದ ನೋಟಿಸ್ ಜಾರಿ ಮಾಡಲಾಗಿದೆ.

ರಾಜ್ಯ ಕಾಂಗ್ರೆಸ್ ಕಾನೂನು ಘಟಕ, ಸಾಮಾಜಿಕ ಕಾರ್ಯಕರ್ತ ಮನೋಹರ್ ದೂರಿನ ಆಧಾರದ ಮೇಲೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಬಿಜೆಪಿ ವಕ್ತಾರೆ ಶ್ರುತಿ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ನೀಡಿದ ಹಿನ್ನೆಲೆಯಲ್ಲಿ 7 ದಿನಗಳ ಒಳಗೆ ಅವರು ಉತ್ತರಿಸಿ, ಅದರ ಬಗ್ಗೆ ವಿವರಣೆಯನ್ನು ಕೊಡಬೇಕು ಎಂದು ಅಧ್ಯೆಕ್ಷೆ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ‘ಹೃದಯ’ ಕೊಟ್ಟ ಭಾರತೀಯ.. ಯುವತಿಗೆ ಮರುಜನ್ಮ; ಇದು ಹಾರ್ಟ್ ಟಚ್ಚಿಂಗ್ ಸ್ಟೋರಿ!

ಇನ್ನು ಇದೇ ವೇಳೆ ಮಾತನಾಡಿದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ತಪ್ಪಾಯಿತು ಎಂದು ಒಪ್ಪಿಕೊಂಡ ಮೇಲೆ ನಟಿ ಶ್ರುತಿಯವರು ಒಬ್ಬ ಹೆಣ್ಮಾಗಳಾಗಿ ಈ ರೀತಿ ಮಾತನಾಡಬಾರದು. ರಾಜಕೀಯ ಸಭೆಯಲ್ಲಿ ಮಹಿಳೆಯರು ಬಸ್​ ಹತ್ತಿ ಎಲ್ಲಿಗಂದ್ರೆ ಅಲ್ಲಿಗೆ ಹೋಗ್ತಾರೆ. ಮನೆಯವರು, ಮಕ್ಕಳು ಉಪಾವಾಸ ಬೀಳ್ತಾರೆ ಎಂದು ಒಬ್ಬ ಮಹಿಳೆಯಾಗಿ ಇನ್ನೊಂದು ಮಹಿಳೆ ಬಗ್ಗೆ ಲಘುವಾಗಿ ಮಾತಾಡುವುದನ್ನ ತೀವ್ರವಾಗಿ ಖಂಡಿಸುತ್ತೇನೆ. ಗಂಡಸರ ವಿರುದ್ಧ ನಾವು ಹೋರಾಡುತ್ತಿದ್ದರೆ, ಹೆಣ್ಣು ಸಹ ಹೆಣ್ಣಿಗೆ ಶತ್ರುವಾಗಿ ಹೋಗುತ್ತಿರುವುದು ಇದೊಂದು ದುರದೃಷ್ಟಕರ. ಇದನ್ನು ಯಾರು ಕೂಡ ಈ ತರ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಯಾನಕವಾಗಿ ಮರಕ್ಕೆ ಡಿಕ್ಕಿಯಾದ ಕಾರು.. ಸ್ಥಳದಲ್ಲೇ ಸಾವನ್ನಪ್ಪಿದ ಡ್ರೈವರ್​

publive-image

ಇದನ್ನೂ ಓದಿ:‘ನನಗೆ ಸಿಗದ ನೇಹಾ ಯಾರಿಗೂ ಸಿಗಬಾರದು’- CID ಮುಂದೆ ಭಯಾನಕ ಸತ್ಯ ಬಾಯ್ಬಿಟ್ಟ ಫಯಾಜ್‌

ಬಿಜೆಪಿ ಪರ ಪ್ರಚಾರದ ವೇಳೆ ನಟಿ ಶ್ರುತಿಯವರು, ಪ್ರಚಾರದ ವೇಳೆ ಶಕ್ತಿಯೋಜನೆ ವಿರುದ್ಧ ಮಾತನಾಡಿದ್ದರು. ಫ್ರೀ ಬಸ್ ನೀಡಿದ್ದರಿಂದ ಮನೆಯವರು, ಮಕ್ಕಳು ಉಪವಾಸ ಇರಬೇಕಾಗತ್ತದೆ. ಇಂತಹ ಭಾಗ್ಯಗಳನ್ನ ಕೊಟ್ಟಿದ್ದರಿಂದ ಜನರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment