newsfirstkannada.com

‘ಕೈ’-‘ಕಮಲ’ ನಾಯಕರ ಮಧ್ಯೆ ಬರ ಪರಿಹಾರ ಪಾಲಿಟಿಕ್ಸ್‌; ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ರಾಜ್ಯ ಕಾಂಗ್ರೆಸ್​​ ಪಡೆ ಸಜ್ಜು

Share :

Published April 28, 2024 at 7:24am

Update April 28, 2024 at 7:28am

  ಕೇಂದ್ರ ಬರ ಪರಿಹಾರ ನಿಧಿಗೆ ತಿರುಗಿ ಬಿದ್ದ ರಾಜ್ಯ ಸರ್ಕಾರ

  ಪ್ರತಿಭಟನೆ ಮೂಲಕ ತಿರುಗೇಟು ಕೊಡಲು ಕಾಂಗ್ರೆಸ್​ ಸಕಾಘರ ಸಜ್ಜು

  ವಿಧಾನಸೌಧ ಗಾಂಧಿ ಪ್ರತಿಮೆ ಬಳಿ ಸಿದ್ದರಾಮಯ್ಯ ಸರ್ಕಾರ ​ಪ್ರತಿಭಟನೆ

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಇದರ ನಡುವೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಬರ ಪರಿಹಾರ ಪಾಲಿಟ್ರಿಕ್ಸ್​ಗೆ ಇಳಿದಿವೆ. ಮೋದಿ ಕರ್ನಾಟಕ ಭೇಟಿಗೂ ಮುನ್ನ ಬರ ಪರಿಹಾರ ಬಿಡುಗಡೆ ಮಾಡಿ, ಕರ್ನಾಟಕದ ಮನಗೆಲ್ಲಲು ಪ್ಲಾನ್​ ಮಾಡಿದ್ದ ಬಿಜೆಪಿಗೆ ರಾಜ್ಯ ಕಾಂಗ್ರೆಸ್​ ಸರ್ಕಾರ ಪ್ರತಿಭಟನೆ ಮೂಲಕ ತಿರುಗೇಟು ಕೊಡಲು ಸಜ್ಜಾಗಿದೆ.

ಕರ್ನಾಟಕದ ಮೇಲೆ ಕೇಂದ್ರದ ಮಲತಾಯಿ ಧೋರಣೆ ಬರ ಪರಿಹಾರ ವಿಳಂಬ ವಿಷ್ಯವನ್ನೇ ಇಟ್ಟುಕೊಂಡು ಕರ್ನಾಟಕದ ಮೊದಲ ಹಂತದ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್​ ಬಿಜೆಪಿ ವಿರುದ್ಧ ಮುಗಿಬಿದ್ದಿತ್ತು. ಪ್ರಧಾನಿ ಮೋದಿ ಮತ್ತು ಅಮಿತ್​ ಶಾ ರಾಜ್ಯಕ್ಕೆ ಆಗಮನದ ವೇಳೆ ಖಾಲಿ ಚೊಂಬು ಜಾಹೀರಾತು, ಪ್ರತಿಭಟನೆ ನಡೆಸುವ ಮೂಲಕ ಮುಜುಗರ ಉಂಟು ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರ, ಪ್ರಧಾನಿ ಕರ್ನಾಟಕ ಭೇಟಿಗೂ ಮುನ್ನ 3 ಸಾವಿರದ 125 ಕೋಟಿ ರೂಪಾರಿ ಬರ ಪರಿಹಾರ ಘೋಷಣೆ ಮಾಡಿದೆ. ಆದ್ರೆ ಇದನ್ನೇ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್​ ಮತ್ತೊಮ್ಮೆ ಕೇಂದ್ರದ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದೆ.

ವಿಧಾನಸೌಧ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್​ ಪ್ರತಿಭಟನೆ

ರಾಜ್ಯದಲ್ಲಿ 2ನೇ ಹಂತದ ಲೋಕಸಭೆ ಚುನಾವಣಾ ಕ್ಷೇತ್ರಗಳ ಮೇಲೆ ಕಣ್ಣಟ್ಟಿರುವ ಬಿಜೆಪಿ ಮೋದಿ ಮೂಲಕ ಉತ್ತರ ಕರ್ನಾಟಕದಲ್ಲಿ ರಣಕಹಳೆ ಮೊಳಗಿಸಲು ಸಜ್ಜಾಗಿದೆ. ಇದೇ ಹೊತ್ತಲ್ಲಿ ರಾಜ್ಯ ಕಾಂಗ್ರೆಸ್ ಪಡೆ ಪರಿಹಾರ ಅಸ್ತ್ರವನ್ನ ಬಿಡಲು ಸಜ್ಜಾಗಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಅಲ್ಪ ಪ್ರಮಾಣದ ಪರಿಹಾರ ಬಿಡುಗಡೆ ಮಾಡಿದೆ ಅಂತ ಆರೋಪಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ಇವತ್ತು ಪ್ರತಿಭಟನೆ ಹಮ್ಮಿಕೊಂಡಿದೆ. ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್​ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾಗಲಿರುವ ಸಿಎಂ, ಡಿಸಿಎಂ

ಇವತ್ತು ಬೆಳಗ್ಗೆ 9.30ಕ್ಕೆ ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಕಾಂಗ್ರೆಸ್​ ಪ್ರತಿಭಟನೆ ನಡೆಸಲಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಮೂಲಕ 2ನೇ ಹಂತದ ಕ್ಷೇತ್ರಗಳಲ್ಲಿ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಮೋದಿ ತಿರುಗೇಟು ನೀಡಲಿದ್ದಾರೆ.

ಇದನ್ನೂ ಓದಿ: ನೆತ್ತಿ ಸುಡೋ ಸೂರ್ಯನ ಬಿಸಿಲಿನ ಭರಾಟೆ; ಬಿಸಿ ಗಾಳಿಗೆ ಕರ್ನಾಟಕದ ಜನ ತತ್ತರ

ಒಟ್ಟಾರೆ. ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್​ ಮತ್ತು ಕೇಂದ್ರ ನಡುವೆ ಬರ ಪರಿಹಾರ ಹಗ್ಗಜಗ್ಗಾಟ ಮುಂದುವರಿದೆ. ಸುಪ್ರೀಂಕೋರ್ಟ್​ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂದು ಕಾಂಗ್ರೆಸ್​ ಹೋರಾಟ ಮುಂದುವರಿಸಲು ನಿರ್ಧರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕೈ’-‘ಕಮಲ’ ನಾಯಕರ ಮಧ್ಯೆ ಬರ ಪರಿಹಾರ ಪಾಲಿಟಿಕ್ಸ್‌; ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ರಾಜ್ಯ ಕಾಂಗ್ರೆಸ್​​ ಪಡೆ ಸಜ್ಜು

https://newsfirstlive.com/wp-content/uploads/2024/04/Modi-Siddaramaiah.jpg

Load More