/newsfirstlive-kannada/media/post_attachments/wp-content/uploads/2023/07/aauto-1.jpg)
ಬೆಂಗಳೂರು: ಸಿಲಿಕಾನ್ ಸಿಟಿ ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಚಾಲಕರೇ ನಿಮ್ಮ ಆಟೋ ಹಿಂದೆ ಯಾವುದಾದರೂ ಸ್ಟಿಕ್ಕರ್ ಪೋಸ್ಟರ್ ಅಂಟಿಸಿದ್ದೀರಾ? ಹಾಗಾದ್ರೆ ನಿಮಗೆ ದಂಡ ಬಿಳೋದು ಗ್ಯಾರಂಟಿ. ಒಂದಲ್ಲ ಎರಡಲ್ಲ ಬರೋಬ್ಬರಿ 5 ಸಾವಿರ ರೂಪಾಯಿ ಫೈನ್ ಕಟ್ಟಬೇಕಾಗುತ್ತೆ ಎಚ್ಚರ.
ಇದನ್ನೂ ಓದಿ:ಇಬ್ಬರು ಪುಟಾಣಿ ಹೆಣ್ಮಕ್ಕಳು, ಒಂದು ಬೆಕ್ಕು! ಗೋಕರ್ಣದ ದಟ್ಟ ಕಾಡಿನ ಪುಟ್ಟೆ ಗುಹೆಯಲ್ಲಿ ರಷ್ಯಾ ಮಹಿಳೆ ವಾಸ..!
ಹೌದು, ಆಟೋ ಹಿಂದೆ ಯಾವುದೇ ಜಾಹೀರಾತು ಅಳವಡಿಕೆ ಮುನ್ನ ಎಚ್ಚರ ವಹಿಸಿ. ನೂರು - ಐನೂರರ ಆಸೆಗೆ ಆಟೋ ಹಿಂದೆ ಫಿಲ್ಮ್ ಪೋಸ್ಟರ್ ಅಂಟಿಸಿಕೊಂಡು ಫೈನ್ ಸುಳಿಗೆ ಸಿಲುಕಿಕೊಳ್ಳದಿರಿ. ಫಿಲ್ಮ್/ ಇನ್ಸೂರೆನ್ಸ್/ ಮತ್ತಿತರ ಪೋಸ್ಟರ್ ಹಾಕಿಸಿಕೊಂಡ ಸಾವಿರಾರು ಆಟೋ ಚಾಲಕರಿಗೆ RTO ಬಿಸಿ ಮುಟ್ಟಿಸಿದೆ.
ನಗರದ ಸಾವಿರಾರು ಆಟೋಗಳಿಗೆ ದಂಡದ ಬಿಸಿ ತಟ್ಟಿದ್ದು, ಈ ಬಗ್ಗೆ ನಮಗೆ ಅರಿವಿರಲಿಲ್ಲ ಅಂತ ಚಾಲಕರು ಅಳಲು ತೊಡಿಕೊಂಡಿದ್ದಾರೆ. ಫಿಲ್ಮ್ ಪೋಸ್ಟರ್ ಮಾತ್ರವಲ್ಲ, ಬೇರೆ ಯಾವುದೇ ಜಾಹೀರಾತು ಅಳವಡಿಕೆ ಕಾನೂನು ಬಾಹಿರವಾಗಿದೆ. ಈ ಸಲುವಾಗಿ ಸಾರಿಗೆ ಇಲಾಖೆ ಚಾಲಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಅನಿವಾರ್ಯತೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ