newsfirstkannada.com

ಬಜೆಟ್​ಗೂ ಮುನ್ನ ಮದ್ಯ ಪ್ರಿಯರಿಗೆ ಶಾಕ್​ ಕೊಟ್ಟ ರಾಜ್ಯ ಸರ್ಕಾರ! 3ನೇ ಬಾರಿಗೆ ಬಿಯರ್ ದರ ಏರಿಕೆ

Share :

Published February 1, 2024 at 2:29pm

  ಇಂದಿನಿಂದ ರಾಜ್ಯದಲ್ಲಿ ಬಿಯರ್ ಬಾಟಲಿ ದರ ಏರಿಕೆ

  ಸುಂಕ ಏರಿಕೆ ಕುರಿತು ಅಂತಿಮ ಆದೇಶ ಹೊರಡಿಸಿದ ಅಬಕಾರಿ ಇಲಾಖೆ

  7 ತಿಂಗಳಲ್ಲಿ 3 ಬಾರಿ ಏರಿಕೆ, ಬಿಯರ್​ ದರ ಏರಿಕೆ ಮಾಡಿದ್ದು ಯಾಕೆ ಗೊತ್ತಾ?

ರಾಜ್ಯ ಬಜೆಟ್ ಗೂ ಮುನ್ನವೇ ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಬಿಯರ್ ಪ್ರಿಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಕಳೆದ 7 ತಿಂಗಳಲ್ಲಿ ಬರೊಬ್ಬರಿ ಮೂರನೇ ಬಾರಿಗೆ ಬಿಯರ್ ದರದಲ್ಲಿ ಏರಿಕೆಯಾಗಿದೆ. 

ಇಂದಿನಿಂದ ಬಿಯರ್ ಬಾಟಲಿ ದರ 10 ರೂಪಾಯಿಂದ 15 ರೂಪಾಯಿ ಹೆಚ್ಚಳವಾಗಲಿದೆ. ರಾಜ್ಯ ಸರ್ಕಾರ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.185 ರಿಂದ 195 ಕ್ಕೆ ಹೆಚ್ಚಳ ಮಾಡಿದೆ

ಅಬಕಾರಿ ನಿಯಮ ತಿದ್ದುಪಡಿ

ರಾಜ್ಯ ಅಬಕಾರಿ‌ ಇಲಾಖೆ ಜನವರಿ 20ಕ್ಕೆ‌ ಸುಂಕ ಹೆಚ್ಚಳ ಕುರಿತಂತೆ ಕರಡನ್ನು ಪ್ರಕಟಿಸಿತ್ತು. ಕರ್ನಾಟಕ ಅಬಕಾರಿ ನಿಯಮ 1968 ತಿದ್ದುಪಡಿ ಮಾಡಲು ಕರಡು ಅಧಿಸೂಚನೆಯಲ್ಲಿ ಪ್ರಕಟ ಮಾಡಿತ್ತು. ಇದಕ್ಕೆ ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿತ್ತು.

ಆದರೆ ನಿನ್ನೆ ಸುಂಕ ಏರಿಕೆಯ ಕುರಿತು ಅಬಕಾರಿ ಇಲಾಖೆ ಅಂತಿಮ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ತಯಾರಿಸುವ ಹಾಗೂ ಆಮದು ಮಾಡಿಕೊಳ್ಳುವ ಬಿಯರ್‌ನ ಮೇಲಿನ ಸುಂಕ ಹೆಚ್ಚು ಮಾಡಲಿದೆ.

7 ತಿಂಗಳಲ್ಲಿ 3 ಬಾರಿ ಏರಿಕೆ

ಕಳೆದ 7 ತಿಂಗಳಲ್ಲಿ ಬರೊಬ್ಬರಿ ಮೂರನೇ ಬಾರಿಗೆ ಬಿಯರ್ ದರದಲ್ಲಿ ಏರಿಕೆಕಂಡಿದೆ. ಸರ್ಕಾರ ಅಧಿಕಾರಕ್ಕೆ‌ ಬಂದಾಗ ಬಿಯರ್‌ ಮೇಲೆ ಶೇ.20 ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ನಂತರ ಬಿಯರ್‌ ಉತ್ಪಾದನಾ ಕಂಪನಿಗಳು ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಹೆಚ್ಚಿಸಿದ್ದವು. ಬಿಯರ್ ಉತ್ಪಾದನ ಕಂಪನಿಗಳು ಬಾಟಲ್‌ ಮೇಲೆ ಕನಿಷ್ಠ 10 ರೂ.ವರೆಗೆ ಏರಿಕೆ ಮಾಡಿದ್ದವು.

ಇದೀಗ ಅಬಾಕಾರಿ ಇಲಾಖೆ ಮತ್ತೆ ಬಿಯರ್‌ ದರ ಹೆಚ್ಚಳ ಮಾಡಿದೆ. ಆರೇಳು ತಿಂಗಳ ಅವಧಿಯಲ್ಲಿ ಬಿಯರ್‌ ಬೆಲೆ ಸುಮಾರು 30 ರಿಂದ 40 ರೂಪಾಯಿ ಹೆಚ್ಚಳವಾಗಿದೆ.

ಬಿಯರ್ ದರ ಯಾಕೆ‌ ಏರಿಕೆ?

ಈ ವರ್ಷ ರಾಜ್ಯ ಸರ್ಕಾರ ಅಬಾಕಾರಿ ಇಲಾಖೆಗೆ ₹36 ಸಾವಿರ ಟಾರ್ಗೆಟ್ ನೀಡಿದೆ. ಈಗಾಗಲೇ 10 ತಿಂಗಳಿಗೆ ಬರೊಬ್ಬರಿ ₹27,500 ಆದಾಯ ಸಂಗ್ರಹವಾಗಿದೆ. ಇನ್ನೂ ಎರಡು ತಿಂಗಳಿನಲ್ಲಿ ಟಾರ್ಗೆಟ್ ರೀಚ್ ಆಗಲು 8 ಸಾವಿರಕ್ಕೂ ಅಧಿಕ ಆದಾಯ ಸಂಗ್ರಹವಾಗಬೇಕು. ರಾಜ್ಯದಲ್ಲಿ ದರ ಏರಿಕೆ ನಂತರ ಇಎಂಎಲ್ ಮಾರಾಟದಲ್ಲಿ ಅಂತಹ ಏರಿಕೆ ಆಗಿಲ್ಲ. ಈ ವರ್ಷಕ್ಕೆ ಬಿಯರ್ ಮಾರಾಟದಲ್ಲಿ ಬರೊಬ್ಬರಿ 15 ಪರ್ಸೆಂಟ್ ಏರಿಕೆ ಆಗಿದೆ.

ಬಿಯರ್ ಮಾರಾಟದಿಂದ ಸರ್ಕಾರ ಬರುವ ಆದಾಯ ಬಹಳ ಕಡಿಮೆ‌. ಹೀಗಾಗಿ ಬಿಯರ್ ದರ ಏರಿಕೆ ಮಾಡಿ ಆದಾಯ ಹೆಚ್ಚಳಕ್ಕೆ ರಾಜ್ಯ ಸರ್ಕಾರದ ಈ ಪ್ಲಾನ್ ಮಾಡಿದೆ. ಗ್ಯಾರಂಟಿಗೆ ಹಣ ಸಂಗ್ರಹಿಸುವ ಸಲುವಾಗಿ ಈ ರೀತಿ ದರ ಏರಿಕೆ ಅಂತ‌ ಮದ್ಯ ಪ್ರಿಯರ ಬೇಸರ ವ್ಯಕ್ತಪಡಿಸಿದ್ದು, ಈ ಸಮ್ಮರ್ ನಲ್ಲಿ ಸಾಮಾನ್ಯವಾಗಿ ಬಿಯರ್ ಮಾರಾಟ ಹೆಚ್ಚಾಗುತ್ತದೆ ಅಂತ ಪ್ಲಾನ್ ರೂಪಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಜೆಟ್​ಗೂ ಮುನ್ನ ಮದ್ಯ ಪ್ರಿಯರಿಗೆ ಶಾಕ್​ ಕೊಟ್ಟ ರಾಜ್ಯ ಸರ್ಕಾರ! 3ನೇ ಬಾರಿಗೆ ಬಿಯರ್ ದರ ಏರಿಕೆ

https://newsfirstlive.com/wp-content/uploads/2023/12/beer_bottles.jpg

Load More