newsfirstkannada.com

ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟ ಆಡ್ತಿದ್ಯಾ ರಾಜ್ಯ ಸರ್ಕಾರ? ಎಲ್ಲರೂ ಓದಲೇಬೇಕಾದ ಸ್ಟೋರಿ!

Share :

Published May 29, 2024 at 6:15am

    ಶಿಕ್ಷಣವನ್ನು ಸೆಕ್ಯುರಿಟಿ ಏಜೆನ್ಸಿ ಸಂಸ್ಥೆಗೆ ಮಾರಾಟ ಮಾಡ್ತಿದ್ಯಾ ರಾಜ್ಯ ಸರ್ಕಾರ?

    ಬಿಬಿಎಂಪಿ ಶಾಲಾ ಹಾಗೂ ಕಾಲೇಜು ಶಿಕ್ಷಕರ ನೇಮಕಾತಿಗಾಗಿ ಟೆಂಡರ್​

    ಶಾಲಾ-ಕಾಲೇಜುಗಳಿಗೆ 700 ಶಿಕ್ಷಕರ ನೇಮಕಾತಿಗೆ ಮುಂದಾದ ಸರ್ಕಾರ

ರಾಜ್ಯದಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿತವಾಗ್ತಿದೆ ಅನ್ನೋ ಚರ್ಚೆ ನಡಿತಿರೋ ಹೊತ್ತಲ್ಲೇ ಸರ್ಕಾರ ಹಾಗೂ ಬಿಬಿಎಂಪಿ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಶಿಕ್ಷಣ ಕ್ಷೇತ್ರದ ಗಾಳಿಗಂಧವೇ ಗೊತ್ತಿರದ ಸೆಕ್ಯುರಿಟಿ ಏಜೆನ್ಸಿಗೆ ಬಿಬಿಎಂಪಿ ಶಾಲಾ ಶಿಕ್ಷಕರ ನೇಮಕದ ಜವಾಬ್ದಾರಿ ಕೊಟ್ಟಿದ್ದು, ಪಾಲಿಕೆ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ. ಎಸ್​ಎಸ್ಎಲ್​ಸಿ ಫಲಿತಾಂಶದ ಬಳಿಕ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಕುಸಿತವಾಗಿದೆಯಾ ಅನ್ನೋ ಚರ್ಚೆ ಶುರುವಾಗಿತ್ತು. ಅದಕ್ಕೆ ತಕ್ಕಂತೆ ಮಕ್ಕಳ ಭವಿಷ್ಯದಲ್ಲಿ ನಡೆದ ಮೌಲ್ಯಮಾಪನದ ಯಡವಟ್ಟನ್ನ ಕೂಡ ನಾವು ನಿಮ್ಮ ಮುಂದಿಟ್ಟಿದ್ವಿ. ಇದೀಗ ಈ ಚರ್ಚೆ ಬಿಸಿಯಾಗಿರುವಾಗಲೇ ಸರ್ಕಾರ ಹಾಗೂ ಬಿಬಿಎಂಪಿ ಮತ್ತೆ ಯಡವಟ್ಟು ಮಾಡಿಕೊಂಡಿದೆ.

ಇದನ್ನೂ ಓದಿ: ಡಿವೋರ್ಸ್​​ ಸುದ್ದಿ ಬೆನ್ನಲ್ಲೇ ಹಾರ್ದಿಕ್​ ಪಾಂಡ್ಯ ಮನೆಯಿಂದ ಹೊರನಡೆದ ನತಾಶಾ.. ಅಸಲಿಗೆ ನಡೆದಿದ್ದೇನು?

ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಿಗೆ ಸುಮಾರು 700 ಹೊರಗುತ್ತಿಗೆ ಶಿಕ್ಷಕರನ್ನ ನೇಮಕ ಮಾಡಲು ಸೆಕ್ಯುರಿಟಿ ಏಜೆನ್ಸಿಗೆ ಗುತ್ತಿಗೆ ನೀಡಿದ್ದು, ಸರ್ಕಾರ ಶಿಕ್ಷಕರ ಭವಿಷ್ಯದ ಜೊತೆ ಚೆಲ್ಲಾಟವಾಡ್ತಿದ್ಯಾ ಅನ್ನೋ ಚರ್ಚೆ ಹುಟ್ಟುಹಾಕಿದೆ. ಪಾಲಿಕೆ ಹಾಗೂ ಸರ್ಕಾರದ ಈ ನಡೆಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರ ನೇಮಕದ ಬಗ್ಗೆ ಈ ಹಿಂದೆಯೇ ಸರ್ಕಾರ ಪ್ಲಾನ್ ಮಾಡಿತ್ತು, ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದ ನಂತರ ಕೆಲದಿನ ಬ್ರೇಕ್ ಹಾಕಿದ್ರು, ಆದ್ರೆ ಇದೀಗ ಶಿಕ್ಷಣದ ಬಗ್ಗೆ ಅರಿವೆ ಇಲ್ಲದ ಸೆಕ್ಯುರಿಟಿ ಏಜೆನ್ಸಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ಕೊಡೋಕೆ ಹೇಗೆ ಸಾಧ್ಯ ಅಂತ ಪ್ರಶ್ನೆ ಮಾಡಿದ್ದಾರೆ.

ಇತ್ತ ಬಿಬಿಎಂಪಿ ಶಾಲೆಗಳಿಗೆ ಸೆಕ್ಯುರಿಟಿ ಏಜೆನ್ಸಿ ಹೇಗೆ ಗುಣಮಟ್ಟದ ಶಿಕ್ಷಕರನ್ನ ಕೊಡುತ್ತೆ ಅಂತಾ ಬಿಬಿಎಂಪಿ ಮುಖ್ಯ ಆಯುಕ್ತರನ್ನ ಕೇಳಿದ್ರೆ ಅದರಿಂದ ಏನು ಸಮಸ್ಯೆಯಾಗಲ್ಲ, ಈ ಹಿಂದೆ ಶಿಕ್ಷಕರು ಪ್ರತಿಭಟನೆ ನಡೆಸಿದಾಗಲೇ ಭರವಸೆ ನೀಡಿದ್ವಿ, ಈಗ ಏಜೆನ್ಸಿ ಮಾತ್ರ ಬದಲಾಗ್ತಿದೆ ಅದರ ಹೆಸರಲ್ಲಿ ಸೆಕ್ಯುರಿಟಿ ಏಜೆನ್ಸಿ ಅಂತಾ ಇರೋದ್ರಿಂದ ಟೀಕೆ ಬರ್ತಿದೆ ಅಂತ ಹಾರಿಕೆ ಉತ್ತರ ನೀಡಿದ್ದಾರೆ. ಕೋಟಿ ಕೋಟಿ ಡೊನೇಷನ್ ಕೊಟ್ಟು ಖಾಸಗಿ ಶಾಲೆಗೆ ಸೇರಿಸಲಾಗದ ಪೋಷಕರಿಗೆ ಬಿಬಿಎಂಪಿ ಶಾಲೆಗಳು ಭರವಸೆಯ ಚೇತನದಂತಿವೆ. ಆದ್ರೆ, ಸರ್ಕಾರ ಹಾಗೂ ಪಾಲಿಕೆ ತರಾತುರಿಯ ನಿರ್ಧಾರ ತೆಗೆದುಕೊಂಡಿದ್ದು ಇನ್ನಾದ್ರೂ ಗುಣಮಟ್ಟದ ಶಿಕ್ಷಣ ನೀಡೋ ಬಗ್ಗೆ ಗಮನಹರಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟ ಆಡ್ತಿದ್ಯಾ ರಾಜ್ಯ ಸರ್ಕಾರ? ಎಲ್ಲರೂ ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/07/SCHOOL.jpg

Load More