/newsfirstlive-kannada/media/post_attachments/wp-content/uploads/2024/02/Ration-Card.jpg)
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರೋ ಯೋಜನೆಗಳ ಫಲಾನುಭವಿಗಳಾಗಲು ರೇಷನ್ ಕಾರ್ಡ್ ಬಹಳ ಮುಖ್ಯ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​ ಜಾರಿ ಮಾಡಿರೋ ಐದು ಗ್ಯಾರಂಟಿಗಳು ಪಡೆಯಲು ಕೂಡ ಇದೇ ರೇಷನ್​​ ಕಾರ್ಡ್​ ಬೇಕು. ಹೀಗಿರುವಾಗ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ದಾರರಿಗೆ ಬಿಗ್​ ಶಾಕ್​ ಕೊಟ್ಟಿದೆ.
ರಾಜ್ಯದಲ್ಲಿ ಅನರ್ಹ ರೇಷನ್ ಕಾರ್ಡ್​ಗಳ ರದ್ದು ಕಾರ್ಯವನ್ನು ಆಹಾರ ಇಲಾಖೆ ಚುರುಕುಗೊಳಿಸಿದೆ. ಇದರ ಭಾಗವಾಗಿ ಅನರ್ಹ ಪಡಿತರ ಚೀಟಿಗಳ ಪತ್ತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕುಟುಂಬ ತಂತ್ರಾಂಶದ ಮೊರೆ ಹೋಗಿದೆ. ಇದುವರೆಗೂ ಒಟ್ಟು 22,62,413 ಅನರ್ಹ ರೇಷನ್ ಕಾರ್ಡ್​ಗಳನ್ನು ಪತ್ತೆ ಮಾಡಿದೆ.
ಯಾರ ಬಿಪಿಎಲ್​​​ ಕಾರ್ಡ್​ ರದ್ದು?
ಬಿಪಿಎಲ್​​ ಕಾರ್ಡ್​ ರದ್ದಿಗೆ ಸರ್ಕಾರ ಕೆಲವು ಮಾನದಂಡಗಳನ್ನು ನಿಗದಿ ಮಾಡಿದೆ. ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತಲೂ ಹೆಚ್ಚು ಹೊಂದಿರುವವರು, ಕಾರ್​ ಮತ್ತು ಬೈಕ್​​, ಸೈಟ್​​, 3 ಹೆಕ್ಟೇರ್ ಭೂಮಿ, ನೀರಾವರಿ ಭೂಮಿ, ನಗರ ಪ್ರದೇಶಗಳಲ್ಲಿ 1000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರೋ ಎಲ್ಲರ ರೇಷನ್​ ಕಾರ್ಡ್​ಗಳು ರದ್ದಾಗಲಿವೆ. ಸರ್ಕಾರಿ, ಖಾಸಗಿ ಉದ್ಯೋಗದಲ್ಲಿರೋರಿಗೂ ಸೇರಿ 14 ಮಾನದಂಡಗಳ ಪ್ರಕಾರ ರೇಷನ್ ಕಾರ್ಡ್ ರದ್ದಿಗೆ ಆಹಾರ ಇಲಾಖೆ ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us