ಪ್ರಯಾಣಿಕರಿಗೆ ಸರ್ಕಾರ ಬಿಗ್​​ ಶಾಕ್​​; ನಾಳೆಯಿಂದಲೇ KSRTC ಟಿಕೆಟ್​ ರೇಟ್​​​​ ಏರಿಕೆ

author-image
Ganesh Nachikethu
Updated On
ಪ್ರಯಾಣಿಕರಿಗೆ ಸರ್ಕಾರ ಬಿಗ್​​ ಶಾಕ್​​; ನಾಳೆಯಿಂದಲೇ KSRTC ಟಿಕೆಟ್​ ರೇಟ್​​​​ ಏರಿಕೆ
Advertisment
  • KSRTC ಬಸ್‌ ಪ್ರಯಾಣ ಇನ್ಮುಂದೆ ದುಬಾರಿ.. ದುಬಾರಿ
  • ಟಿಕೆಟ್‌ ದರ ಶೇ.15%ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧಾರ
  • ಪ್ರಯಾಣ ದರ ಏರಿಕೆಗೆ ಗ್ಯಾರಂಟಿ ಸರ್ಕಾರ ಸಮರ್ಥನೆ..!

ಬೆಂಗಳೂರು: ಒಂದು ಕೈಯಲ್ಲಿ ಕೊಡೋದು, ಮತ್ತೊಂದು ಕೈಯಲ್ಲಿ ಕಿತ್ತೊಳ್ಳೋದು ಅಂದ್ರೆ ಇದೇ ಇರಬೇಕು. ಮಹಿಳೆಯರಿಗಾಗಿ ಉಚಿತ ಪ್ರಯಾಣ ಕಲ್ಪಿಸಿದ್ದ ಗ್ಯಾರಂಟಿ ಸರ್ಕಾರ ಕೊಟ್ಟ ಹೊಸ ಶಾಕ್ ಇದು. ಬಸ್ ಪ್ರಯಾಣದರ ಏರಿಕೆಗೆ ಮುಂದಾಗಿರೋ ಸರ್ಕಾರದ ವಿರುದ್ಧ ಬಿಜೆಪಿ ವಿಡಂಭನಾತ್ಮಕ ಪ್ರತಿಭಟನೆ ಮಾಡಿದೆ. ಇತ್ತ ವಿಪಕ್ಷಗಳು ಎಷ್ಟೇ ಅಬ್ಬರಿಸಿ ಬೊಬ್ಬಿರಿದ್ರೂ ಅಲತ್ತ ಸರ್ಕಾರ ಮಾತ್ರ ಟಿಕೆಟ್ ಹೊರೆ ಶತಸಿದ್ಧ ಅಂತಿದೆ.

ಬಸ್ ಪ್ರಯಾಣ ದರ ಹೆಚ್ಚಿಸಿ ಸರ್ಕಾರದಿಂದ ಶಾಕ್!

ರಾಜ್ಯವಾಸಿಗಳಿಗೆ ಸರ್ಕಾರ ಕೊಟ್ಟ ಹೊಸ ವರ್ಷದ ಶಾಕ್ ಇದು. ನ್ಯೂ ಇಯರ್​ಗೆ ಕಾಲಿಟ್ಟು ಎರಡು ದಿನ ಕಳೆದಿಲ್ಲ, ಆಗಲೇ ಕೆಎಸ್​ಆರ್​ಟಿಸಿ ಬಸ್ ಪ್ರಯಾಣದರ ಏರಿಕೆ ಮಾಡಿದೆ. ಪತ್ನಿಯರಿಗೆ ಉಚಿತ ಶಕ್ತಿ ನೀಡಿ ಪತಿ ಮಹಾಶಯರಿಗೆ ಹೊರೆ ಹೊರಿಸಿದೆ. ಎಲ್ಲಾ ನಿಗಮಗಳ ಸಾರಿಗೆ ಬಸ್ ಪ್ರಯಾಣದವರನ್ನು ಶೇ. 15ರಷ್ಟು ಹೆಚ್ಚಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸರ್ಕಾರ ಡೀಸೆಲ್ ದರ ಹೆಚ್ಚಳ ಹಾಗೂ ಸಿಬ್ಬಂದಿ ವೆಚ್ಚದ ಹೆಚ್ಚಳದ ಕಾರಣ ನೀಡಿದೆ. ಪ್ರಯಾಣಿಕರು ಬಸ್ ದರ ಏರಿಕೆಗೆ ಸಹಕರಿಸಬೇಕು ಅಂತ ಮನವಿ ಮಾಡಿದೆ. ನಾಳೆಯಿಂದಲೇ ಈ ಆದೇಶದ ಅನ್ವಯ ಟಿಕೆಟ್​ ದರ ಏರಿಕೆ ಆಗಲಿದೆ.

ಟಿಕೆಟ್ ದರ ಹೆಚ್ಚಳಕ್ಕೆ ಬಿಜೆಪಿ ವ್ಯಂಗ್ಯಾತ್ಮಕ ಪ್ರತಿಭಟನೆ

ಇನ್ನು ಬಸ್ ಟಿಕೆಟ್ ದರ ಏರಿಸಲು ಮುಂದಾಗಿರುವ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಪ್ರತಿಭಟಿಸಿದೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸರ್ಕಾರವನ್ನು ಅಣಕಿಸುವ ರೀತಿಯಲ್ಲಿ ಪ್ರತಿಭಟಿಸಿದ ಬಿಜೆಪಿ ನಾಯಕರು ಜನರಿಗೆ ಗುಲಾಬಿ ಹೂವು ಕೊಟ್ಟು ಕ್ಷಮೆಯಾಚಿಸಿದ್ರು. ಸಿದ್ದರಾಮಯ್ಯ ಬದಲಿಗೆ ನಾವು ಕ್ಷಮೆ ಕೇಳ್ತೀದ್ದೀವಿ ಅಂತ ವ್ಯಂಗ್ಯ ಮಾಡಿದ್ರು.

ಬಸ್ ಪ್ರಯಾಣ ದರ ಏರಿಕೆ ವಿಚಾರ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿಯ ಪಿತ್ತ ನೆತ್ತಿಗೇರಿಸಿದೆ. ರಾಜ್ಯ ಸರ್ಕಾರಕ್ಕೆ ಹೇಳೋರು, ಕೇಳೋರು ಇಲ್ಲ, ಜನರ ಕಷ್ಟ-ಸುಖ ಕೇಳೋರಿಲ್ಲ ಅಂತ ಕಿಡಿಕಾರಿದ್ದಾರೆ.

ದರ ಏರಿಕೆಗೆ ಸಿದ್ದರಾಮಯ್ಯ ಸರ್ಕಾರ ಸಮರ್ಥನೆ

ಇನ್ನು ಕೆಎಸ್​ಆರ್​ಟಿಸಿ ಬಸ್ ಪ್ರಯಾಣದರ ಏರಿಕೆಯನ್ನ ಸಿಎಂ ಸಿದ್ದರಾಮಯ್ಯ ಹಾದಿಯಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವರು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್​ ಸರ್ಕಾರ ಒಂದು ಕಡೆಯಿಂದ ಕೊಟ್ಟು ಇನ್ನೊಂದು ಕಡೆಯಿಂದ ಕಿತ್ತುಕೊಳ್ಳುತ್ತಿದೆ ಎನ್ನುವ ಟೀಕೆ ಕೇಳಿ ಬಂದಿದೆ.

ಇದನ್ನೂ ಓದಿ:ರೋಹಿತ್​​ ಕೆಟ್ಟ ಫಾರ್ಮ್​​ನಲ್ಲಿದ್ರೂ ಆಡಿಸಬೇಕಿತ್ತು; ತಂಡದಿಂದ ಕೈ ಬಿಟ್ಟಿದ್ದಕ್ಕೆ BCCI ವಿರುದ್ಧ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment